Nominee Benefits: ಜೀವ ವಿಮಾ ಪಾಲಿಸಿಯಲ್ಲಿ ನಾಮಿನಿ ನಮೂದಿಸದಿದ್ದರೆ ಭಾರಿ ನಷ್ಟವಾಗಬಹುದು

Life Insurance Policy Nominee Benefits: ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ನಾಮಿನಿಯ ಹೆಸರನ್ನು ನಿರ್ಧರಿಸಿ. ಆದರೆ ಪಾಲಿಸಿಗೆ ಸರಿಯಾದ ನಾಮಿನಿಯನ್ನು ಆಯ್ಕೆ ಮಾಡುವುದು ಸಹ ಬಹಳ ಮುಖ್ಯ ಎಂಬುದನ್ನು ನೆನಪಿನಲ್ಲಿಡಿ. ನೀವು ಸಮಯದೊಂದಿಗೆ ನಾಮಿನಿಯನ್ನು ಸಹ ಬದಲಾಯಿಸಬಹುದು. ಅದರ ಸಂಪೂರ್ಣ ಪ್ರಕ್ರಿಯೆಯನ್ನು ಇಲ್ಲಿ ತಿಳಿಯಿರಿ.  

Written by - Yashaswini V | Last Updated : Jun 26, 2021, 12:45 PM IST
  • ಜೀವ ವಿಮಾ ಪಾಲಿಸಿಯಲ್ಲಿ ನಾಮಿನಿ ನಮೂದಿಸದಿದ್ದರೆ ದೊಡ್ಡ ನಷ್ಟವಾಗಬಹುದು
  • ನಾಮಿನಿಗಳು ಸಮಯದೊಂದಿಗೆ ಬದಲಾಗಬಹುದು
  • ಒಂದು ಪಾಲಿಸಿಯಲ್ಲಿ ಒಂದಕ್ಕಿಂತ ಹೆಚ್ಚು ನಾಮಿನಿ ಇರಬಹುದು
Nominee Benefits: ಜೀವ ವಿಮಾ ಪಾಲಿಸಿಯಲ್ಲಿ ನಾಮಿನಿ ನಮೂದಿಸದಿದ್ದರೆ ಭಾರಿ ನಷ್ಟವಾಗಬಹುದು  title=
ಜೀವ ವಿಮಾ ಪಾಲಿಸಿಯಲ್ಲಿ ನಾಮಿನಿ ನಮೂದಿಸದಿದ್ದರೆ ದೊಡ್ಡ ನಷ್ಟವಾಗಬಹುದು ನಾಮಿನಿಗಳು ಸಮಯದೊಂದಿಗೆ ಬದಲಾಗಬಹುದು ಒಂದು ಪಾಲಿಸಿಯಲ್ಲಿ ಒಂದಕ್ಕಿಂತ ಹೆಚ್ಚು ನಾಮಿನಿ ಇರಬಹುದು

ನವದೆಹಲಿ: Life Insurance Policy Nominee Benefits- ಜೀವ ವಿಮಾ ಪಾಲಿಸಿಯನ್ನು ಖರೀದಿಸುವಾಗ, ನಿಮ್ಮ ಕುಟುಂಬದ ಸದಸ್ಯರನ್ನು ನಾಮಿನಿಯಾಗಿ ಮಾಡಬೇಕು. ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ನೀವು ನಾಮಿನಿಯನ್ನು  (Life Insurance Policy Nominee) ನಮೂದಿಸದಿದ್ದರೆ, ನಂತರ ಸಹ ನೀವು ನಾಮಿನಿಯನ್ನು ನಮೂದಿಸಬಹುದು. ಆದರೆ ಯಾವುದೇ ಪಾಲಿಸಿಯಲ್ಲಿ ನಾಮಿನಿಯನ್ನು ಮಾಡುವುದು ಅವಶ್ಯಕ. ಪಾಲಿಸಿಯಲ್ಲಿ ನಾಮಿನಿ ಯಾವುದೇ ಸಂದರ್ಭದಲ್ಲಿ ಪಾಲಿಸಿದಾರನು ಹಠಾತ್ ಮರಣ ಹೊಂದಿದರೆ ನಾಮಿನಿಗೆ ಹಕ್ಕು ಪಡೆಯಲು ಅರ್ಹತೆ ಇರುತ್ತದೆ. ಇದರ ದೊಡ್ಡ ಪ್ರಯೋಜನವೆಂದರೆ ಪಾಲಿಸಿಯ ಹಕ್ಕು ಪಡೆಯುವಲ್ಲಿ ಕುಟುಂಬವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುವುದಿಲ್ಲ.

ನಾಮಿನಿಯನ್ನು ಆಯ್ಕೆಮಾಡುವಾಗ ನೆನಪಿನಲ್ಲಿಡಬೇಕಾದ ವಿಷಯಗಳು:
ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ನಾಮಿನಿಯ (Nominee) ಹೆಸರನ್ನು ನಿರ್ಧರಿಸಿ. ಆದರೆ ಪಾಲಿಸಿಗೆ ಸರಿಯಾದ ನಾಮಿನಿಯನ್ನು ಆಯ್ಕೆ ಮಾಡುವುದು ಸಹ ಬಹಳ ಮುಖ್ಯ ಎಂಬುದನ್ನು ನೆನಪಿನಲ್ಲಿಡಿ. ಹೆಚ್ಚಾಗಿ ಜನರು ತಮ್ಮ ಸಂಗಾತಿಯನ್ನು ನಾಮಿನಿಯಾಗಿ ಆರಿಸುತ್ತಾರೆ. ವಾಸ್ತವವಾಗಿ ನಿಮ್ಮ ಕುಟುಂಬದ ಯಾವುದೇ ಸದಸ್ಯರನ್ನು ನೀವು ನಾಮಿನಿಯಾಗಿ ಆರಿಸಬಹುದು.

ಇದನ್ನೂ ಓದಿ - Health Insurance: ಆರೋಗ್ಯ ವಿಮಾ ಕಂಪನಿಯು ನಿಮ್ಮ ಕ್ಲೈಂ ತಿರಸ್ಕರಿಸಿದರೆ ಭಯಪಡಬೇಡಿ, ಇಲ್ಲಿ ದೂರು ನೀಡಿ

ಒಂದಕ್ಕಿಂತ ಹೆಚ್ಚು ನಾಮಿನಿ :
ಕೆಲವು ಜನರು ತಮ್ಮ ಹಣವನ್ನು ತಮ್ಮ ಕುಟುಂಬದ ಇಬ್ಬರು ಸದಸ್ಯರಿಗೆ ಹಂಚಲು ಬಯಸುತ್ತಾರೆ ಎಂಬುದು ಗಮನಾರ್ಹವಾಗಿದೆ. ಅದು ಹೆಂಡತಿ ಮತ್ತು ಮಗು ಅಥವಾ ಹೆಂಡತಿ ಮತ್ತು ಸಹೋದರ ಅಥವಾ ತಾಯಿ ಆಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಒಂದಕ್ಕಿಂತ ಹೆಚ್ಚು ಪಾಲಿಸಿಗಳನ್ನು (Insurance) ಖರೀದಿಸುವ ಮೂಲಕ ವಿಭಿನ್ನ ಪಾಲಿಸಿಗಳಿಗೆ ಪ್ರತ್ಯೇಕ ನಾಮಿನಿಯನ್ನು ಮಾಡಬಹುದು. ಅಥವಾ ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ನೀವು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳ ಪಾಲನ್ನು ನಿರ್ಧರಿಸಬಹುದು ಮತ್ತು ಅವರನ್ನು ನಾಮಿನಿಯಾಗಿ ಮಾಡಬಹುದು. ಪಾಲಿಸಿಯನ್ನು ಖರೀದಿಸುವಾಗ ಈ ಲಿಖಿತ ಜವಾಬ್ದಾರಿಯನ್ನು ವಿಮಾದಾರರಿಂದ ತೆಗೆದುಕೊಳ್ಳಬಹುದು.

ಇದನ್ನೂ ಓದಿ- Financial Planning Tips: 30 ವರ್ಷಕ್ಕೂ ಮುನ್ನ ಈ 5 ಕೆಲಸ ಮಾಡಿ, ಜೀವನವಿಡೀ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ

ನಾಮಿನಿಗಳು ಸಮಯದೊಂದಿಗೆ ಬದಲಾಗಬಹುದು:
ಪಾಲಿಸಿದಾರನು ಸಮಯದೊಂದಿಗೆ ತಮ್ಮಿಚ್ಚೆಯಂತೆ ಅವನ / ಅವಳ ನಾಮಿನಿಯನ್ನು ಸಹ ಬದಲಾಯಿಸಬಹುದು. ಉದಾಹರಣೆಗೆ, ಒಬ್ಬ ನಾಮಿನಿ ಸತ್ತರೆ ಅಥವಾ ಉದ್ಯೋಗ ಪಡೆದರೆ ಮತ್ತು ಇನ್ನೊಬ್ಬ ಸದಸ್ಯನಿಗೆ ಹೆಚ್ಚಿನ ಹಣದ ಅಗತ್ಯವಿದ್ದರೆ, ನಂತರ ನಾಮಿನಿಯನ್ನು ಬದಲಾಯಿಸಬಹುದು. ಇದಲ್ಲದೆ, ಮದುವೆ ಅಥವಾ ವಿಚ್ಛೇದನದ ಸಂದರ್ಭದಲ್ಲಿ ನಾಮಿನಿಯು ಬದಲಾಗಬಹುದು. ಇದಕ್ಕಾಗಿ, ನೀವು ವಿಮಾ ಕಂಪನಿಯ ವೆಬ್‌ಸೈಟ್‌ನಿಂದ ನಾಮಿನಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಈ ಫಾರ್ಮ್ ಅನ್ನು ಕಚೇರಿಯಿಂದ ಸಂಗ್ರಹಿಸಿ. ಫಾರ್ಮ್‌ನಲ್ಲಿ ನಾಮಿನಿಯ ವಿವರಗಳನ್ನು ಭರ್ತಿ ಮಾಡಿ ಮತ್ತು ಪಾಲಿಸಿ ಡಾಕ್ಯುಮೆಂಟ್‌ನ ಪ್ರತಿ ಮತ್ತು ನಾಮಿನಿಯೊಂದಿಗೆ ನಿಮ್ಮ ಸಂಬಂಧದ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಿ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಒಂದಕ್ಕಿಂತ ಹೆಚ್ಚು ನಾಮಿನಿ ಇದ್ದರೆ, ಪ್ರತಿಯೊಬ್ಬರ ಪಾಲನ್ನು ಸಹ ನಿರ್ಧರಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News