Women's Day 2022 ಅಂಗವಾಗಿ ನೀವೂ ಕೂಡ ನಿಮ್ಮ ಪತ್ನಿಗೆ ಈ ಉಡುಗೊರೆ ಕೊಡಿ, ತಿಂಗಳಿಗೆ 44, 793 ರೂ.ಸಂಪಾದಿಸಿ

New Pension Scheme - NPS ಹೂಡಿಕೆಯ ಮೇಲೆ ವಾರ್ಷಿಕವಾಗಿ ಶೇ.10ರಷ್ಟು ಆದಾಯ ಬಂದರೆ, 60ನೇ ವಯಸ್ಸಿನಲ್ಲಿ ಪತ್ನಿಯ ಖಾತೆಯಲ್ಲಿ ಒಟ್ಟು 1.12 ಕೋಟಿ ರೂ. ಜಮೆಯಾಗುತ್ತದೆ (Savings). ಇದರಿಂದ ಅವರು 45 ಲಕ್ಷ ರೂ. ಪಡೆಯಬಹುದು. ಇದಲ್ಲದೆ, ಅವರು ಪ್ರತಿ ತಿಂಗಳು ಸುಮಾರು 45,000 ರೂಪಾಯಿ ಪಿಂಚಣಿ ಪಡೆಯಬಹುದು.

Written by - Nitin Tabib | Last Updated : Mar 6, 2022, 02:02 PM IST
  • ನಿಮ್ಮ ಹೆಂಡತಿಯನ್ನು ಸ್ವಾವಲಂಬಿಯಾಗಿಸಲು ಈ ಕೆಲಸ ಮಾಡಿ
  • ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿ
  • ಪ್ರತಿ ತಿಂಗಳು ದೊಡ್ಡ ಮೊತ್ತ ಸಿಗುತ್ತದೆ
Women's Day 2022 ಅಂಗವಾಗಿ ನೀವೂ ಕೂಡ ನಿಮ್ಮ ಪತ್ನಿಗೆ ಈ ಉಡುಗೊರೆ ಕೊಡಿ, ತಿಂಗಳಿಗೆ 44, 793 ರೂ.ಸಂಪಾದಿಸಿ title=
National Pension Scheme (File Photo)

ನವದೆಹಲಿ: National Pension Scheme - ಮಾರ್ಚ್ 8 ಮಹಿಳಾ ದಿನ. ಈ ವಿಶೇಷ ದಿನದಂದು ನಿಮ್ಮ ಬಾಳಸಂಗಾತಿಗೆ  ನೀವು ಉಡುಗೊರೆಯೊಂದನ್ನು (Investment) ನೀಡಿದರೆ, ಅವರು ಭವಿಷ್ಯದಲ್ಲಿ ಸ್ವಾವಲಂಬಿಯಾಗಲಿದ್ದಾರೆ. ನಿಮ್ಮ ಅನುಪಸ್ಥಿತಿಯಲ್ಲಿ ಮನೆಯಲ್ಲಿ ನಿಯಮಿತ ಆದಾಯವಿದ್ದರೆ ಮತ್ತು ಭವಿಷ್ಯದಲ್ಲಿ ನಿಮ್ಮ ಪತ್ನಿ ಹಣಕ್ಕಾಗಿ ಯಾರನ್ನೂ ಅವಲಂಭಿಸಬೇಕಾಗಿಲ್ಲ. ನೀವು ಇಂದೇ ನಿಮ್ಮ ಪತ್ನಿಗೆ ನಿಯಮಿತ ಆದಾಯದ ವ್ಯವಸ್ಥೆ ಮಾಡಬಹುದು. ಇದಕ್ಕಾಗಿ ನೀವು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಹೂಡಿಕೆ ಮಾಡಬೇಕು. ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಹೆಂಡತಿಯ ಹೆಸರಿನಲ್ಲಿ ಹೊಸ ಪಿಂಚಣಿ ವ್ಯವಸ್ಥೆಯ ಖಾತೆ ತೆರೆಯಿರಿ
ನಿಮ್ಮ ಹೆಂಡತಿಯ ಹೆಸರಿನಲ್ಲಿ ನೀವು ಹೊಸ ಪಿಂಚಣಿ ವ್ಯವಸ್ಥೆ (NPS) ಖಾತೆಯನ್ನು ತೆರೆಯಬಹುದು. NPS ಖಾತೆಯು ನಿಮ್ಮ ಹೆಂಡತಿಗೆ 60 ವರ್ಷ ವಯಸ್ಸಾದ ಮೇಲೆ ಒಂದು ದೊಡ್ಡ ಮೊತ್ತವನ್ನು ನೀಡುತ್ತದೆ. ಇದರೊಂದಿಗೆ, ಅವರು ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ನಿಯಮಿತ ಆದಾಯವನ್ನು ಕೂಡ ಪಡೆಯುತ್ತಾರೆ. ಅಷ್ಟೇ ಅಲ್ಲ, NPS ಖಾತೆಯೊಂದಿಗೆ ನಿಮ್ಮ ಹೆಂಡತಿಗೆ ಪ್ರತಿ ತಿಂಗಳು ಎಷ್ಟು ಪಿಂಚಣಿ ಸಿಗುತ್ತದೆ ಎಂಬುದನ್ನು ಸಹ ನೀವು ನಿರ್ಧರಿಸಬಹುದು. ಇದರಿಂದ ನಿಮ್ಮ ಪತ್ನಿ  60 ವರ್ಷದ ನಂತರ ಹಣಕ್ಕಾಗಿ ಯಾರನ್ನೂ ಅವಲಂಬಿಸಬೇಕಾಗುವುದಿಲ್ಲ. ಈ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೂಡಿಕೆ ಮಾಡುವುದು ಕೂಡ ತುಂಬಾ ಸುಲಭ
ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಹೊಸ ಪಿಂಚಣಿ ವ್ಯವಸ್ಥೆ (NPS) ಖಾತೆಯಲ್ಲಿ ಹಣವನ್ನು ಠೇವಣಿ ಮಾಡಬಹುದು. ಕೇವಲ 1,000 ರೂಪಾಯಿಗಳಲ್ಲಿ ನಿಮ್ಮ ಪತ್ನಿಯ ಹೆಸರಿನಲ್ಲಿ ನೀವು NPS ಖಾತೆಯನ್ನು ತೆರೆಯಬಹುದು. NPS ಖಾತೆಯು 60 ನೇ ವಯಸ್ಸಿನಲ್ಲಿ ಮ್ಯಾಚೂರ್ ಆಗುತ್ತದೆ. ಹೊಸ ನಿಯಮಗಳ ಪ್ರಕಾರ, ನೀವು ಬಯಸಿದರೆ, ನೀವು ಪತ್ನಿಯ ವಯಸ್ಸಿನ  65 ವರ್ಷಗಳವರೆಗೆ NPS ಖಾತೆಯನ್ನು ಮುನ್ನಡೆಸಿಕೊಂಡು ಹೋಗಬಹುದು.

ಇದನ್ನೂ ಓದಿ-

45 ಸಾವಿರದವರೆಗೆ ಮಾಸಿಕ ಆದಾಯ
ಉದಾಹರಣೆಗೆ, ನಿಮ್ಮ ಪತ್ನಿ 30 ವರ್ಷ ವಯಸ್ಸಿನವರಾಗಿದ್ದರೆ ಮತ್ತು ನೀವು ಅವರ NPS ಖಾತೆಯಲ್ಲಿ ಪ್ರತಿ ತಿಂಗಳು 5000 ರೂ. ಠೇವಣಿ ಮಾಡಿದರೆ ಮತ್ತು ವಾರ್ಷಿಕವಾಗಿ ಈ ಹೂಡಿಕೆಗೆ ಶೇ.10ರಷ್ಟು ಲಾಭ ಬಂದರೆ, 60ನೇ ವಯಸ್ಸಿನಲ್ಲಿ ಅವರ ಖಾತೆಯಲ್ಲಿ ಒಟ್ಟು 1.12 ಕೋಟಿ ರೂ. ಇರಲಿದೆ. ಈ ಪೈಕಿ ಸುಮಾರು 45 ಲಕ್ಷ ರೂ.ಗಳನ್ನು ಅವರು ಪದೆಯಬಹ್ದು.  ಇದಲ್ಲದೆ, ಅವರು ಪ್ರತಿ ತಿಂಗಳು ಸುಮಾರು 45,000 ರೂಪಾಯಿ ಪಿಂಚಣಿಯೂ ಕೂಡ ಅವರಿಗೆ. ಈ ಪಿಂಚಣಿಯನ್ನು ಅವರು ಜೀವನಪರ್ಯಂತ ಪಡೆಯುತ್ತಲೇ ಇರುತ್ತಾರೆ ಎಂಬುದು ಇಲ್ಲಿ ಅತ್ಯಂತ ಮುಖ್ಯವಾದ ವಿಷಯ.

ಇದನ್ನೂ ಓದಿ-

ಪಿಂಚಣಿ ಮತ್ತು ಒಟ್ಟು ಮೊತ್ತದ ಲೆಕ್ಕಾಚಾರ ಇಲ್ಲಿದೆ
>> ವಯಸ್ಸು - 30 ವರ್ಷಗಳು
>> ಒಟ್ಟು ಹೂಡಿಕೆಯ ಅವಧಿ - 30 ವರ್ಷಗಳು
>> ಮಾಸಿಕ ಕೊಡುಗೆ - ರೂ 5,000
>> ಹೂಡಿಕೆಯ ಮೇಲೆ ಅಂದಾಜು ಲಾಭ - 10%
>> ಒಟ್ಟು ಪಿಂಚಣಿ ನಿಧಿ - ರೂ 1,11,98,471 (ಮೆಚ್ಯೂರಿಟಿಯಲ್ಲಿ ಮೊತ್ತವನ್ನು ಹಿಂಪಡೆಯಬಹುದು)
>> ಅನೂಟಿ ಪ್ಲಾನ್ ಖರೀದಿಸುವ ಮೊತ್ತ - ರೂ 44,79,388
>> ಅಂದಾಜು ಅನೂಟಿ ದರ 8% - ರೂ 67,19,083
>> ಮಾಸಿಕ ಪಿಂಚಣಿ- 44,793 ರೂ.

ಇದನ್ನೂ ಓದಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News