Electricity Payment: ಕರ್ನಾಟಕ ಸೇರಿದಂತೆ ದೇಶದ ಈ 13 ರಾಜ್ಯಗಳಲ್ಲಿ ತಲೆದೂರಲಿದೆಯಾ ವಿದ್ಯುತ್ ಕ್ಷಾಮ? ಕಾರಣ ಇಲ್ಲಿದೆ

Electricity Payment:  ಈ ನಿರ್ಧಾರದಿಂದ ದೇಶದ ಒಟ್ಟು 13 ರಾಜ್ಯಗಳಲ್ಲಿ ವಿದ್ಯುತ್ ಬಿಕ್ಕಟ್ಟು ಉಲ್ಭಣಿಸುವ ಸಾಧ್ಯತೆ ಇದ್ದು, ಜನರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎನ್ನಲಾಗಿದೆ.  

Written by - Nitin Tabib | Last Updated : Aug 19, 2022, 04:11 PM IST
  • ಕರ್ನಾಟಕ ಸೇರಿದಂತೆ 13 ರಾಜ್ಯಗಳಲ್ಲಿ ತಲೆದೂರಲಿದೆಯಾ ವಿದ್ಯುತ್ ಬರ
  • ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ಉತ್ಪಾದಕ ಕಂಪನಿಗಳ ಸಾಕಷ್ಟು ಹಣ ಬಾಕಿ ಉಳಿಸಿಕೊಂಡಿವೆ
  • ಈ ಕುರಿತು ವಿದ್ಯುತ್ ಉತ್ಪಾದಕ ಕಂಪನಿಗಳಿಗೆ POSOCO ಹೇಳಿದ್ದೇನು?
Electricity Payment: ಕರ್ನಾಟಕ ಸೇರಿದಂತೆ ದೇಶದ ಈ 13 ರಾಜ್ಯಗಳಲ್ಲಿ ತಲೆದೂರಲಿದೆಯಾ ವಿದ್ಯುತ್ ಕ್ಷಾಮ? ಕಾರಣ ಇಲ್ಲಿದೆ title=
Electricity Payment

Electricity Payment: ಪಬ್ಲಿಕ್ ಸೆಕ್ಟರ್ ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್. (POSOCO) ದೆಹ್ಸದ 13 ರಾಜ್ಯಗಳ 27 ವಿದ್ಯುತ್ ವಿತರಣಾ ಕಂಪನಿಗಳ ವಿದ್ಯುತ್ ವ್ಯವಹಾರವನ್ನು ನಿಲ್ಲಿಸಲು IEX, PXIL ಮತ್ತು HPX ಎಂಬ ಮೂರು ವಿದ್ಯುತ್ ಮಾರುಕಟ್ಟೆಗಳಿಗೆ ಆದೇಶ ನೀಡಿದೆ. ಈ ವಿತರಣಾ ಕಂಪನಿಗಳು, ವಿದ್ಯುತ್ ಉತ್ಪಾದಿಸುವ ಕಂಪನಿಗಳ ಸಾಕಷ್ಟು ಹಣ ಬಾಕಿ ಉಳಿಸಿಕೊಂಡಿವೆ ಎಂದು ಅಂದು ಹೇಳಿದೆ.  ವಾಸ್ತವದಲಿ, ಈ 13 ರಾಜ್ಯಗಳು ಒಟ್ಟು 5000 ಕೋಟಿ ರೂ.ಗಿಂತ ಹೆಚ್ಚಿನ ಬಾಕಿಯನ್ನು ಹೊಂದಿದ್ದು, ಅದನ್ನು ಇದುವರೆಗೆ ಪಾವತಿಸಿಲ್ಲ ಎನ್ನಲಾಗಿದೆ.

ಈ ರಾಜ್ಯಗಳನ್ನು ಒಳಗೊಂಡಿದೆ
POSOCO 13 ರಾಜ್ಯಗಳ ವಿತರಣಾ ಕಂಪನಿಗಳ ವ್ಯಾಪಾರವನ್ನು ನಿರ್ಬಂಧಿಸಲು ಇಂಡಿಯನ್ ಎನರ್ಜಿ ಎಕ್ಸ್ಚೇಂಜ್ (IEX), ಪವರ್ ಎಕ್ಸ್ಚೇಂಜ್ ಆಫ್ ಇಂಡಿಯಾ (PXIL) ಮತ್ತು ಹಿಂದೂಸ್ತಾನ್ ಪವರ್ ಎಕ್ಸ್ಚೇಂಜ್ (HPX) ಗೆ ನಿರ್ದೇಶನಗಳನ್ನು ನೀಡಿದೆ. ಈ ರಾಜ್ಯಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಬಿಹಾರ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ಶಾಮೀಲಾಗಿವೆ.ಇದೇ ವೇಳೆ, ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬರುವ POSOCO, ದೇಶದಲ್ಲಿ ವಿದ್ಯುತ್ ವ್ಯವಸ್ಥೆಯ ಸಮಗ್ರ ಕಾರ್ಯಾಚರಣೆಯನ್ನು ನಿರ್ವಹಿಸುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-State Bank Of India ನ 45 ಕೋಟಿ ಗ್ರಾಹಕರಿಗೊಂದು ಮಹತ್ವದ ಸುದ್ದಿ, ವಹಿವಾಟಿನ ನಿಯಮಗಳು ಬದಲಾಗಿವೆಯಾ?

ಬಾಕಿ ಪಾವತಿಸದಿರುವ ನಿರ್ಧಾರ
ಮತ್ತೊಂದೆಡೆ, POSOCO ಮೂರು ವಿದ್ಯುತ್ ಮಾರುಕಟ್ಟೆಗಳಿಗೆ ತನ್ನ ಪತ್ರದಲ್ಲಿ 13 ರಾಜ್ಯಗಳ 27 ವಿತರಣಾ ಕಂಪನಿಗಳಿಗೆ ವಿದ್ಯುತ್ ಮಾರುಕಟ್ಟೆಯ ಎಲ್ಲಾ ಉತ್ಪನ್ನಗಳ ಖರೀದಿ ಮತ್ತು ಮಾರಾಟವನ್ನು ದಿನಾಂಕ 19 ಆಗಸ್ಟ್ 2022 ರಿಂದ ಮುಂದಿನ ಸೂಚನೆಯವರೆಗೆ ಸಂಪೂರ್ಣವಾಗಿ ನಿಷೇಧಿಸಲು ಸೂಚಿಸಿದೆ. ಪ್ರಾಪ್ತಿ  (ಪಾವತಿ ದೃಢೀಕರಣ ಮತ್ತು ಉತ್ಪಾದಕರ ಇನ್‌ವಾಯ್ಸಿಂಗ್‌ನಲ್ಲಿ ಪಾರದರ್ಶಕತೆ ತರಲು ವಿದ್ಯುತ್ ಖರೀದಿ ವಿಶ್ಲೇಷಣೆ) ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ವಿದ್ಯುತ್ ವಿತರಣಾ ಕಂಪನಿಗಳು, ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಪಾವತಿಸಬೇಕಿರುವ ಬಾಕಿಯನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ-Car Subscription Plan: ಕೇವಲ 27 ಸಾವಿರ ಪಾವತಿಸಿ ಈ ಹೊಚ್ಚ ಹೊಸ ಕಾರನ್ನು ನಿಮ್ಮ ಮನೆಗೆ ತನ್ನಿ

ಸಾರ್ವಜನಿಕರಿಗೆ ತೊಂದರೆ
ಪಾವತಿ ಭದ್ರತಾ ವ್ಯವಸ್ಥೆಯಡಿಯಲ್ಲಿ, ಸಾರ್ವಜನಿಕ ವಲಯದ ವಿದ್ಯುತ್ ವಿತರಣಾ ಕಂಪನಿಗಳು, ವಿದ್ಯುತ್ ಉತ್ಪಾದಿಸುವ ಕಂಪನಿಗಳಿಗೆ ಬಾಕಿ ಪಾವತಿಸದಿದ್ದಕ್ಕಾಗಿ ವಿದ್ಯುತ್ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಬಹುದು. ಇದರ ಅಡಿಯಲ್ಲಿ, "ಸಾಕಷ್ಟು ಪಾವತಿಯ ಮೂಲಕ ಭದ್ರತಾ ವ್ಯವಸ್ಥೆಗಳನ್ನು ನಿರ್ವಹಿಸಿದರೆ ಅಥವಾ ಅದರ ಅನುಪಸ್ಥಿತಿಯಲ್ಲಿ ಮುಂಗಡ ಪಾವತಿಯನ್ನು ಮಾಡಿದರೆ ಮಾತ್ರ ವಿದ್ಯುತ್ ಸರಬರಾಜು ಮತ್ತೆ ಆರಂಭಿಸಲಾಗುವುದು" ಎನ್ನಲಾಗಿದೆ. ಈ ನಿರ್ಧಾರದಿಂದ, ಈ 13 ರಾಜ್ಯಗಳಲ್ಲಿ ವಿದ್ಯುತ್ ಬಿಕ್ಕಟ್ಟು ತೀವ್ರಗೊಳ್ಳಬಹುದು, ಇದರಿಂದಾಗಿ ಜನರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News