Good News: ಮತ್ತೆ ಬಿಡುಗಡೆಯಾಗಲಿದೆ Yamaha RX100..!

Yamaha RX 100: ಯಮಹಾ ಆರ್‌ಎಕ್ಸ್ 100 ಹೆಚ್ಚಿನ ಜನರಿಗೆ ಪರಿಚಿತ ಬೈಕ್. ಇದರ ಉತ್ಪಾದನೆ ಸ್ಥಗಿತಗೊಂಡ ಬಳಿಕ ಅನೇಕ ಜನರಿಗೆ ನಿರಾಸೆಯುಂಟಾಗಿತ್ತು. ಆದರೆ ಈ ಬೈಕ್‍ನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ.

Written by - Puttaraj K Alur | Last Updated : Jan 23, 2023, 08:27 PM IST
  • Yamaha RX 100 ಬೈಕ್‍ನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ
  • ಮತ್ತೆ ಮಾರುಕಟ್ಟೆಗೆ ಬರಲಿದೆ Yamaha RX 100 ಬೈಕ್‍
  • ದೊಡ್ಡ ಎಂಜಿನ್ ಜೊತೆಗೆ ಉತ್ಪಾದನೆಯಾಗಲಿರುವ RX 100
Good News: ಮತ್ತೆ ಬಿಡುಗಡೆಯಾಗಲಿದೆ Yamaha RX100..! title=
Yamaha RX 100

ನವದೆಹಲಿ: Yamaha RX 100 ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಈಗಲೂ ಸುದ್ದಿಯಲ್ಲಿರುವ ಬೈಕ್. ಬಹುಶಃ ಪ್ರತಿಯೊಬ್ಬ ವ್ಯಕ್ತಿಯು ಇದರ ಹೆಸರು ಕೇಳಿರುತ್ತಾರೆ. ಬಹುತೇಕ ಜನರಿಗೆ Yamaha RX 100 ಪರಿಚಯವಿರುತ್ತದೆ. ಆದರೆ ಕಂಪನಿ ಇದರ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬಳಿಕ ಕೆಲವರು ನಿರಾಸೆ ಅನುಭವಿಸಿದ್ದರು.

ಈಗಲೂ ಸಹ ಈ ಬೈಕ್ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ಭಾರತದಲ್ಲಿ ಯಮಹಾ ಬೈಕ್ ಅತ್ಯಂತ ಜನಪ್ರಿಯವಾಗಿತ್ತು. ಈ ಬೈಕ್ ಜನರ ಹೃದಯ ಆಳುತ್ತಿದ್ದ ಕಾಲವೊಂದಿತ್ತು. ಇಂದಿಗೂ ಜನರು ಅದನ್ನು ಇಷ್ಟಪಡುತ್ತಾರೆ. ಇದು ಮತ್ತೆ ಯಾವಾಗ ಮಾರುಕಟ್ಟೆಗೆ ಬರುತ್ತೆ ಅಂತಾ ಕಾಯುತ್ತಿದ್ದಾರೆ. ಹಾಗಾದರೆ ಯಮಹಾ RX 100 ಮರು ಉತ್ಪಾದನೆಯಾಗಲಿದೆಯಾ?

ಇದನ್ನೂ ಓದಿ: Pension Scheme : ವಿವಾಹಿತರೆ ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ, ಪ್ರತಿ ತಿಂಗಳಿಗೆ ಪಡೆಯಿರಿ ₹800 ಪಿಂಚಣಿ!

ವರದಿಗಳ ಪ್ರಕಾರ ಯಮಹಾ ಇಂಡಿಯಾ ಅಧ್ಯಕ್ಷ ಇಶಿನ್ ಚಿಹಾನಾ, ಯಮಹಾ RX100 ಮರುಉತ್ಪಾದನೆಯ ಭವಿಷ್ಯದ ಯೋಜನೆ ಹೊಂದಿರುವ ಬಗ್ಗೆ ತಿಳಿಸಿದ್ದರು. ಅವರ ಹೇಳಿಕೆ ಗಮನಿಸಿದರೆ RX100 ಮತ್ತೆ ಮಾರುಕಟ್ಟೆಗೆ ಎಂಟ್ರಿಯಾಗುವ ಸುಳಿವು ದೊರೆತಿದೆ ಅಂತಾ ಹೇಳಬಹುದು. ಹಳೆಯ ಯಮಹಾ RX100 2-ಸ್ಟ್ರೋಕ್ ಎಂಜಿನ್ ಆಧರಿಸಿದ ಕಾರಣ ಅದನ್ನು ಮರುಹೊಂದಿಸಲು ಸಾಧ್ಯವಿಲ್ಲ. ಯಾಕೆಂದರೆ ಇದು ಕಟ್ಟುನಿಟ್ಟಾದ BS6 ಎಮಿಷನ್ ಮಾನದಂಡಗಳನ್ನು ಪೂರೈಸದಿರಬಹುದು.

ಎಂಜಿನ್‍ನಲ್ಲಿ ಅಪ್‍ಡೇಟ್‍ ಮಾಡಬೇಕಿದೆ   

ಯಮಹಾ RX 100 ಮತ್ತೆ ಉತ್ಪಾದನೆ ಮಾಡಿದ್ರೆ ಅದಕ್ಕೆ ದೊಡ್ಡ ಎಂಜಿನ್ ನೀಡಬಹುದು. ವರದಿಗಳ ಪ್ರಕಾರ ಕಂಪನಿಯು ಈ ದಿಕ್ಕಿನಲ್ಲಿ ಪ್ಲಾನ್ ಮಾಡುತ್ತಿದೆಯಂತೆ. ಆದರೆ ಯಾವ ಎಂಜಿನ್ ನೀಡಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಮಹಾ ಪ್ರಸ್ತುತ 125 cc, 150 cc ಮತ್ತು 250 cc ಎಂಜಿನ್‌ಗಳನ್ನು ಹೊಂದಿದೆ. ಇವುಗಳಲ್ಲಿ ಯಾವುದಾದರೂ ಎಂಜಿನ್‌ಗಳನ್ನು ಬಳಸುವ ನಿರೀಕ್ಷೆಯಿದೆ. 125 ಸಿಸಿ ಎಂಜಿನ್ ಅಥವಾ 150 ಸಿಸಿ ಎಂಜಿನ್ ಬಳಸುವ ಹೆಚ್ಚಿನ ಸಂಭವನೀಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Honda Activa: ಹೊಸ ಅಗ್ಗದ ಹೋಂಡಾ ಆಕ್ಟಿವಾ ಬಿಡುಗಡೆ, ವೈಶಿಷ್ಟ್ಯಗಳು ಮತ್ತು ಬೆಲೆ ತಿಳಿಯಿರಿ

RX100 ಮರು ಉತ್ಪಾದನೆಯ ಸಮಯ ಇನ್ನೂ ದೂರವಿದೆ. ಇದಕ್ಕಾಗಿ ಜನರು ಬಹಳ ದಿನ ಕಾಯಬೇಕು. ವರದಿಗಳ ಪ್ರಕಾರ ಯಮಹಾ ತನ್ನ RX100 ಉತ್ಪಾದನೆ ಶುರು ಮಾಡಿದ್ರೆ ಅದನ್ನು 2025ರ ಮೊದಲು ತರಲು ಸಾಧ್ಯವಾಗುವುದಿಲ್ಲ. ಕಂಪನಿಯು ಇದನ್ನು 2026ಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News