ನವದೆಹಲಿ: ರತನ್ ಟಾಟಾ(Ratan Tata) ಅವರು ಪ್ರಸಿದ್ಧ ವ್ಯಕ್ತಿಯಾಗಿದ್ದು, ಅವರಿಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಭಾರತದಲ್ಲಿ ಈ ಹೆಸರನ್ನು ಕೇಳದ ವ್ಯಕ್ತಿಯೇ ಇಲ್ಲ. ಅನೇಕ ಉದ್ಯಮಿಗಳಿಗೆ ಇವರ ವ್ಯಕ್ತಿತ್ವ ಮತ್ತು ಸಾಧನೆ ಸ್ಫೂರ್ತಿಯಾಗಿದೆ. ರತನ್ ಟಾಟಾ ಉದಾತ್ತ ಕುಟುಂಬದಿಂದ ಬಂದಿದ್ದರೂ ಅವರು ಎಂದಿಗೂ ಅಧಿಕಾರ ಅಥವಾ ಹಣದ ಹಿಂದೆ ಬಿದ್ದವರಲ್ಲ.
ಟಾಟಾ ಹೆಸರಿನಲ್ಲಿ ಅನೇಕ ಕಂಪನಿಗಳನ್ನು ದೊಡ್ಡದಾಗಿ ಬೆಳೆಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು ರತನ್ ಟಾಟಾ. ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ ಇಂದಿನ ಯುವ ಜನತೆಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷರಾದ ಅವರು ಚಿಂತನೆ ಮತ್ತು ಶಕ್ತಿಯಲ್ಲಿ ದೊಡ್ಡ ನಂಬಿಕೆಯುಳ್ಳವರು. ಅವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಟಾಟಾ ಮೋಟಾರ್ಸ್ ಫೋರ್ಡ್ ಮೋಟಾರ್ಸ್‌ನೊಂದಿಗೆ ಐತಿಹಾಸಿಕ ಒಪ್ಪಂದವನ್ನು ಪಡೆಯಲು ಸಾಧ್ಯವಾಯಿತು. ರತನ್ ಟಾಟಾ ಅವರಿಗೆ ಸಂಬಂಧಿಸಿದ 5 ವಿಶೇಷ ವಿಷಯಗಳ ನೀವೂ ತಿಳಿದುಕೊಳ್ಳಿರಿ.
ರತನ್ ಟಾಟಾ ಅವರ ಬಾಲ್ಯ ಹೇಗಿತ್ತು?
1937ರಲ್ಲಿ ಜನಿಸಿದ ರತನ್ ಟಾಟಾರ ತಂದೆ ನವಲ್ ಟಾಟಾ ಅವರು ಜಮ್‍ಸೆಟ್‍ಜಿ ಟಾಟ(Jamsetji Tata) ಅವರ ದತ್ತು ಮೊಮ್ಮಗರಾಗಿದ್ದರು. ಇವರ ತಾಯಿಯ ಹೆಸರು ಸೂನಿ ಟಾಟಾ. ರತನ್ ಟಾಟಾ ಅವರು ಟಾಟಾ ಗ್ರೂಪ್ ಅನ್ನು ಸ್ಥಾಪಿಸಿದ ಜಮ್‍ಸೆಟ್‍ಜಿ ಟಾಟಾರ ಮರಿ ಮೊಮ್ಮಗ. ಅವರು ಕೇವಲ 10 ವರ್ಷದವರಾಗಿದ್ದಾಗ ಅವರ ಪೋಷಕರು 1948ರಲ್ಲಿ ಬೇರ್ಪಟ್ಟರು. ಅವರನ್ನು ಅವರ ಅಜ್ಜಿ ನವಾಜ್ಬಾಯಿ ಟಾಟಾ ಅವರು ಬೆಳೆಸಿದರು.
ಇದನ್ನೂ ಓದಿ: ಕೊಟ್ಟ ಕುದುರೆ ಏರದೇ ಮತ್ತೊಂದು ಕುದುರೆ ಬಯಸುವವ ವೀರನೂ ಅಲ್ಲ, ಧೀರನೂ ಅಲ್ಲ: ಬಿಜೆಪಿ
ಮದುವೆಯಾಗದ ರತನ್ ಟಾಟಾ ಇಂದಿಗೂ ಸಿಂಗಲ್!
ಉದ್ಯಮಿ ರತನ್ ಟಾಟಾ ಮದುವೆಯಾಗಿಲ್ಲ. ತಮ್ಮ ಮದುವೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದರು. ಅವರಿಗೆ 4 ಬಾರಿ ಮದುವೆ ಪ್ರಸ್ತಾಪ ಬಂದಿತ್ತು. ಆದರೆ ಕಾರಣಾಂತರಗಳಿಂದ ಮದುವೆ ಆಗಲಿಲ್ಲ ಎಂದು ಹೇಳಿದ್ದರು. ಇವತ್ತಿಗೂ ಸಿಂಗಲ್ ಆಗಿರುವ ರತನ್ ಟಾಟಾ ಅವರು 25ನೇ ವಯಸ್ಸಿನಲ್ಲಿದ್ದಾಗ ಸುಂದರವಾದ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದರು. ಆ ಹುಡುಗಿ ಕೂಡ ರತನ್ ಟಾಟಾರನ್ನು ಮನಸಾರೆ ಇಷ್ಟಪಟ್ಟಿದ್ದಳು. ಆದರೆ ಆ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ.
ಹೌದು, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ರತನ್ ಟಾಟಾ(Ratan Tata) ಅವರು ಮುದ್ದಾದ ಹುಡುಗಿಯೊಬ್ಬಳಿಗೆ ಮನಸೋತಿದ್ದರು(Ratan Tata Marriage). ಇಬ್ಬರು ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕು ಅನ್ನೋ ವೇಳೆ ಭಾರತ ಮತ್ತು ಚೀನಾ ನಡುವೆ ಯುದ್ಧ ಶುರುವಾಗಿತ್ತು. ಅಮೆರಿಕದಿಂದ ಭಾರತಕ್ಕೆ ಮರಳುವ ಯೋಚನೆಯಲ್ಲಿದ್ದ ರತನ್ ಟಾಟಾ ಅವರು ಆ ಹುಡುಗಿಯನ್ನು ಮದುವೆಯಾಗಿ ಸ್ವದೇಶಕ್ಕೆ ತೆರಳಲು ಸಿದ್ಧವಾಗಿದ್ದರು. ಆದರೆ ಆ ಹುಡುಗಿಯ ಪೋಷಕರು ತಮ್ಮ ಪುತ್ರಿಯನ್ನು ಭಾರತಕ್ಕೆ ಕಳುಹಿಸಲು ಹಿಂದೇಟು ಹಾಕಿದರು. ಅಲ್ಲದೆ ಬೇರೊಬ್ಬ ಹುಡುಗನೊಂದಿಗೆ ಆಕೆಯ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದನ್ನು ತಿಳಿದ ರತನ್ ಟಾಟಾ ಅವರು ಜೀವನದಲ್ಲಿ ಮದುವೆಯೇ ಆಗುವುದಿಲ್ಲವೆಂದು ನಿರ್ಧಾರ ತೆಗೆದುಕೊಂಡಿದ್ದರು.
ಇದನ್ನೂ ಓದಿ: ಬ್ಯಾಂಕ್ ಗ್ರಾಹಕರ ಗಮನಕ್ಕೆ! ATM ಸೇವಾ ಶುಲ್ಕದಲ್ಲಿ ಭಾರಿ ಬದಲಾವಣೆ!
ರತನ್ ಟಾಟಾ ಅಧ್ಯಯನದಲ್ಲಿ ಹೇಗಿದ್ದರು?
ರತನ್ ಟಾಟಾ ಅವರು 8ನೇ ತರಗತಿಯವರೆಗೆ ಮುಂಬೈನ ಕ್ಯಾಂಪಿಯನ್ ಶಾಲೆಯಲ್ಲಿ ಅಧ್ಯಯನ ಮಾಡಿದರು(Ratan Tata Childhood). ನಂತರ ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆ ಮತ್ತು ಶಿಮ್ಲಾದ ಬಿಷಪ್ ಕಾಟನ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಇದರ ನಂತರ ಅವರು 1955ರಲ್ಲಿ ನ್ಯೂಯಾರ್ಕ್ ನಗರದ ರಿವರ್‌ಡೇಲ್ ಕಂಟ್ರಿ ಸ್ಕೂಲ್‌ನಿಂದ ಪದವಿ ಪಡೆದರು. ಅವರು ಆರ್ಕಿಟೆಕ್ಚರ್ ಮತ್ತು ಸ್ಟ್ರಕ್ಚರಲ್ ಇಂಜಿನಿಯರಿಂಗ್ ಅನ್ನು ಅಧ್ಯಯನ ಮಾಡಲು 1959ರಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯಕ್ಕೆ ಹೋದರು. ನಂತರ 1975ರಲ್ಲಿ ಅವರು ಹಾರ್ವರ್ಡ್ ಬಿಸಿನೆಸ್ ಸ್ಕೂಲ್ನಿಂದ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದರು.
ರತನ್ ಟಾಟಾ ಅವರ ಮೊದಲ ಕೆಲಸ ಯಾವುದು?
ಟಾಟಾ ಸ್ಟೀಲ್(Tata Steel)ನಲ್ಲಿ ರತನ್ ಟಾಟಾ ಅವರು ಮೊದಲ ಕೆಲಸ ಮಾಡಿದ್ದರು. ಅವರು 1961ರಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಬ್ಲಾಸ್ಟ್ ಫರ್ನೇಸ್ ಮತ್ತು ಸುಣ್ಣದಕಲ್ಲು ಉತ್ಖನನದ ನಿರ್ವಹಣೆ ಅವರ ಮೊದಲ ಜವಾಬ್ದಾರಿಯಾಗಿತ್ತು.
ಬಹುರಾಷ್ಟ್ರೀಯ ಕಂಪನಿಯ ಆಫರ್ ತಿರಸ್ಕರಿಸಿದ್ದ ಟಾಟಾ
ರತನ್ ಟಾಟಾ ಅವರು ಐಬಿಎಂನಿಂದ ಉದ್ಯೋಗಾವ(IBM Job)ಕಾಶವನ್ನು ತಿರಸ್ಕರಿಸಿದ್ದರು. ಬದಲಾಗಿ ಅವರು ಟಾಟಾ ಸ್ಟೀಲ್‌ನಲ್ಲಿ ತಮ್ಮ ಕುಟುಂಬದ ವ್ಯಾಪಾರವನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ತೆಗೆದುಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.