ದುಬಾರಿಯಾಗಲಿದೆ ನಿಮ್ಮ ನೆಚ್ಚಿನ ಕಾರು, ನವೆಂಬರ್ 1ರೊಳಗೆ ಬೆಲೆಗಳು ಹೆಚ್ಚಾಗುವ ಸಾಧ್ಯತೆ

ನೀವು ದುಬಾರಿ ಕಾರುಗಳ ಬಗ್ಗೆ ಒಲವು ಹೊಂದಿದ್ದರೆ, ಸ್ವಲ್ಪ ಹೆಚ್ಚು ಬೆಲೆ ನೀಡಲು ಸಿದ್ಧರಾಗಿರಿ. ಭವ್ಯವಾದ ವೈಶಿಷ್ಟ್ಯಗಳು ಸೌಕರ್ಯ ಮತ್ತು ನೋಟಕ್ಕೆ ಹೆಸರುವಾಸಿಯಾದ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ.

Last Updated : Oct 2, 2020, 01:57 PM IST
  • ನೀವು ದುಬಾರಿ ಕಾರುಗಳ ಬಗ್ಗೆ ಒಲವು ಹೊಂದಿದ್ದರೆ, ಸ್ವಲ್ಪ ಹೆಚ್ಚು ಬೆಲೆ ನೀಡಲು ಸಿದ್ಧರಾಗಿರಿ.
  • 2020ರ ಸೆಪ್ಟೆಂಬರ್‌ನಲ್ಲಿ ಆಟೋ ವಲಯವು ಉತ್ತಮ ಮಾರಾಟವನ್ನು ದಾಖಲಿಸಿದೆ
  • ನವೆಂಬರ್ 1 ರಿಂದ ತನ್ನ ವಾಹನಗಳ ಬೆಲೆ ಶೇ. 3 ರಷ್ಟು ಹೆಚ್ಚಾಗುತ್ತದೆ ಎಂದು ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಪ್ರಕಟಿಸಿದೆ.
ದುಬಾರಿಯಾಗಲಿದೆ ನಿಮ್ಮ ನೆಚ್ಚಿನ ಕಾರು, ನವೆಂಬರ್ 1ರೊಳಗೆ ಬೆಲೆಗಳು ಹೆಚ್ಚಾಗುವ ಸಾಧ್ಯತೆ title=
File Image

ನವದೆಹಲಿ: ಕರೋನಾ ಸಾಂಕ್ರಾಮಿಕದ ಮಧ್ಯೆ ಆಟೋ ಕಂಪನಿಗಳು ನಿಧಾನವಾಗಿ ಮತ್ತೆ ಜಾರಿಗೆ ಬರುತ್ತಿವೆ, 2020ರ ಸೆಪ್ಟೆಂಬರ್‌ನಲ್ಲಿ ಆಟೋ ವಲಯವು ಉತ್ತಮ ಮಾರಾಟವನ್ನು ದಾಖಲಿಸಿದೆ. ಏತನ್ಮಧ್ಯೆ ಐಷಾರಾಮಿ ವಾಹನಗಳನ್ನು ತಯಾರಿಸುವ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ತನ್ನ ಬಿಎಂಡಬ್ಲ್ಯು (BMW) ಮತ್ತು ಮಿನಿ ಉತ್ಪನ್ನಗಳ ಬಂಡವಾಳದ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿದೆ.

ನವೆಂಬರ್ 1 ರಿಂದ ಬಿಎಂಡಬ್ಲ್ಯು ಕಾರುಗಳು ಹೆಚ್ಚು ದುಬಾರಿಯಾಗಲಿವೆ!
ನವೆಂಬರ್ 1 ರಿಂದ ತನ್ನ ವಾಹನಗಳ ಬೆಲೆ ಶೇ. 3 ರಷ್ಟು ಹೆಚ್ಚಾಗುತ್ತದೆ ಎಂದು ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಪ್ರಕಟಿಸಿದೆ. ಬೆಲೆಗಳ ಹೆಚ್ಚಳದ ಹಿಂದೆ ವಾಹನಗಳ ನಿರ್ಮಾಣ ವೆಚ್ಚ ಹೆಚ್ಚಳ ಮತ್ತು ಡಾಲರ್ ಎದುರು ರೂಪಾಯಿ ದೌರ್ಬಲ್ಯದಿಂದಾಗಿ ನಾವು ಕಾರುಗಳ ಬೆಲೆಯನ್ನು ಹೆಚ್ಚಿಸಬೇಕಾಗಿದೆ ಎಂದು ಕಂಪನಿ ಹೇಳುತ್ತದೆ. ಕಂಪನಿಯ ಪರವಾಗಿ ಹಣದ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 73.14 ರೂ.ಗೆ ವಹಿವಾಟು ನಡೆಸುತ್ತಿದೆ ಎಂದು ಹೇಳಲಾಗಿದೆ. ಇದು ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಕಾರುಗಳ (Cars) ಬೆಲೆಯನ್ನು ಹೆಚ್ಚಿಸುವುದರಿಂದ ಮಾತ್ರ ನಷ್ಟವನ್ನು ಕಡಿಮೆ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಈ ಬಿಎಂಡಬ್ಲ್ಯು ಕಾರುಗಳು ದುಬಾರಿಯಾಗಲಿವೆ!
ಭಾರತದಲ್ಲಿ ತಯಾರಿಸಿದ ಬಿಎಂಡಬ್ಲ್ಯು ಕಾರುಗಳಲ್ಲಿ ಬಿಎಂಡಬ್ಲ್ಯು 3 ಸರಣಿ, ಬಿಎಂಡಬ್ಲ್ಯು 3 ಸರಣಿ ಗ್ರ್ಯಾನ್ ಟ್ಯುರಿಸ್ಮೊ, ಬಿಎಂಡಬ್ಲ್ಯು 5 ಸರಣಿ, ಬಿಎಂಡಬ್ಲ್ಯು 6 ಸರಣಿ ಗ್ರ್ಯಾನ್ ಟ್ಯುರಿಸ್ಮೊ, ಬಿಎಂಡಬ್ಲ್ಯು 7 ಸರಣಿಗಳು ಸೇರಿವೆ. ಈ ಎಲ್ಲ ಕಾರುಗಳ ಬೆಲೆ ನವೆಂಬರ್ 1 ರಿಂದ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ 2 ತಿಂಗಳಿಗೊಮ್ಮೆ ದುಬಾರಿ ಕಾರು ಬದಲಿಸುತ್ತಿದ್ದ ಮಗನನ್ನು ತಡೆದ ತಂದೆ, ಆತ ಮಾಡಿದ್ದೇನು ಗೊತ್ತೇ?

ಇದಲ್ಲದೆ ಬಿಎಂಡಬ್ಲ್ಯು ಎಕ್ಸ್ 1, ಬಿಎಂಡಬ್ಲ್ಯು ಎಕ್ಸ್ 3, ಬಿಎಂಡಬ್ಲ್ಯು ಎಕ್ಸ್ 4, ಬಿಎಂಡಬ್ಲ್ಯು ಎಕ್ಸ್ 5, ಬಿಎಂಡಬ್ಲ್ಯು ಎಕ್ಸ್ 7 ಮತ್ತು ಮಿನಿ ಕಂಟ್ರಿ ಮ್ಯಾನ್ ಸಹ ಭಾರತದಲ್ಲಿ ತಯಾರಿಸಲಾಗುತ್ತದೆ. ಅಕ್ಟೋಬರ್ 15ರಂದು ಬಿಎಂಡಬ್ಲ್ಯು ಎರಡು ಗ್ರ್ಯಾನ್ ಕೂಪೆ ಸರಣಿಗಳನ್ನು ಭಾರತದಲ್ಲಿ ನಿರ್ಮಿಸಲಿದೆ. 

ಬಿಎಂಡಬ್ಲ್ಯು ಭಾರತದಲ್ಲಿ 5.2 ಬಿಲಿಯನ್ ಹೂಡಿಕೆ ಮಾಡಿದೆ. ಚೆನ್ನೈ ಕಾರ್ಖಾನೆಯಲ್ಲಿ ಬಿಎಂಡಬ್ಲ್ಯು ಕಾರುಗಳನ್ನು ತಯಾರಿಸಲಾಗುತ್ತದೆ. ಇದಲ್ಲದೆ ಗುರುಗ್ರಾಮ್ನಲ್ಲಿ ಕಂಪನಿಯ ತರಬೇತಿ ಕೇಂದ್ರವಾದ ಮುಂಬೈನಲ್ಲಿ ಬಿಎಂಡಬ್ಲ್ಯು ಗೋದಾಮಿನನ್ನೂ ಸಹ ಹೊಂದಿದೆ. ಪ್ರಸ್ತುತ ಬಿಎಂಡಬ್ಲ್ಯು ಭಾರತದಾದ್ಯಂತ 80 ಟಚ್ ಪಾಯಿಂಟ್‌ಗಳನ್ನು ಹೊಂದಿದ್ದು, ಬಿಎಂಡಬ್ಲ್ಯು ಭಾರತದಲ್ಲಿ 650 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

ಬಿಎಂಡಬ್ಲ್ಯೂ ಅವಳಿ ಅಡ್ವೆಂಚರ್ ಬೈಕ್'ಗಳ -Photos

Trending News