ಉಚಿತ ಬಿ.ಎಸ್.ಸಿ.ಪದವಿ ವ್ಯಾಸಂಗದ ಜೊತೆಗೆ ಉದ್ಯೋಗವಕಾಶಕ್ಕೂ ಉಂಟು ಅವಕಾಶ..!

ಬೆಳಿಗ್ಗೆ 10-30 ಗಂಟೆಯಿಂದ 12-30 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2-30 ಗಂಟೆಯಿಂದ ಸಾಯಂಕಾಲ 4-30 ಗಂಟೆಯವರೆಗೆ 2 ಅಧಿವೇಶನಗಳಲ್ಲಿ ಪರೀಕ್ಷೆಗಳನ್ನು ಜರುಗಿಸಲಾಗುವುದು.

Written by - Manjunath N | Last Updated : Jul 26, 2023, 09:21 PM IST
  • ಆಸಕ್ತರು https://www.eklakshya.com/apply/susandhi-application-2022 ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು
  • ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.eklakshya.com ಹಾಗೂ ದೂರವಾಣಿ ಸಂಖ್ಯೆ 8050050183, 8050050185 ಹಾಗೂ 9972440183 ಗೆ ಸಂಪರ್ಕಿಸಬಹುದಾಗಿದೆ
 ಉಚಿತ ಬಿ.ಎಸ್.ಸಿ.ಪದವಿ ವ್ಯಾಸಂಗದ ಜೊತೆಗೆ ಉದ್ಯೋಗವಕಾಶಕ್ಕೂ ಉಂಟು ಅವಕಾಶ..! title=
ಸಾಂದರ್ಭಿಕ ಚಿತ್ರ

ಧಾರವಾಡ : ಕೆ.ಎಲ್.ಇ ಟೆಕ್ ಯುನಿವರ್ಸಿಟಿ ಹುಬ್ಬಳ್ಳಿ, ಏಕಲಕ್ಷ ಇನ್ನೊವೆಶನ್ ಲ್ಯಾಬ್ಸ್, ಇವಾಲ್ವ ಲೈವ್ಸ್, ಫೌಂಡೆಶನ್, ದೇಶಪಾಂಡೆ ಫೌಂಡೆಶನ್, ವಿದ್ಯಾಪೊಷಕ ಹಾಗೂ ಇತರೆ ಕೈಗಾರಿಕಾ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯ ಪ್ರತಿಭಾವಂತ ದ್ವೀತಿಯ ಪಿಯುಸಿ ಹಾಗೂ ಡಿಪ್ಲೊಮಾ ಇಲೆಕ್ಟ್ರಾನಿಕ್ಸ್ ಇಲೆಕ್ಟ್ರಿಕಲ್ & ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಉತ್ತೀರ್ಣ ಹೊಂದಿದ ವಿಧ್ಯಾರ್ಥಿಗಳಿಗೆ ಈಗಾಗಲೇ ಕಳೆದ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿದ ಪಠ್ಯಪುಸ್ತಕಗಳ ಆಧಾರದ ಮೇಲೆ 30-07-2023 ರಂದು ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ಏಕಲಕ್ಷ ಇನ್ನೊವೇಶನ್ ಲ್ಯಾಬ್ಸ್ ಪ್ರೈವೆಟ ಲಿಮಿಟೆಡ್, ಸಿ ಲೈಟ್ ಕಟ್ಟಡದಲ್ಲಿ ಬೆಳಿಗ್ಗೆ 10-30 ಗಂಟೆಯಿಂದ 12-30 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2-30 ಗಂಟೆಯಿಂದ ಸಾಯಂಕಾಲ 4-30 ಗಂಟೆಯವರೆಗೆ 2 ಅಧಿವೇಶನಗಳಲ್ಲಿ ಪರೀಕ್ಷೆಗಳನ್ನು ಜರುಗಿಸಲಾಗುವುದು.

ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಅರ್ಜಿ ವಿಚಾರಣೆ ಜುಲೈ 31ಕ್ಕೆ ಮುಂದೂಡಿಕೆ

ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉಚಿತವಾಗಿ ಹುಬ್ಬಳ್ಳಿಯ ಬಿ.ವಿ.ಬಿ. ಕ್ಯಾಂಪಸ್‍ದಲ್ಲಿರುವ ಕೆ.ಎಲ್.ಇ. ಟೆಕ್ ಯುನಿವರ್ಸಿಟಿಯಲ್ಲಿ 3 ವರ್ಷದ ಬಿ.ಎಸ್.ಸಿ. ಪದವಿ, 8 ತಿಂಗಳ ತಾಂತ್ರಿಕ ತರಬೇತಿ, 4 ತಿಂಗಳ ಪನ್ರ್ಸಾಲಿಟಿ ಡೆವೆಲಪಮೆಂಟ್ ತರಬೇತಿ, 1 ವರ್ಷ ಕೈಗಾರಿಕಾ ತರಬೇತಿ ಇರುತ್ತದೆ. ಇದು ಒಟ್ಟು 5 ವರ್ಷದ ಅವಧಿ ಇದ್ದು, ಅವಧಿಯಲ್ಲಿ ಉಚಿತ ಶಿಕ್ಷಣ, ವಸತಿ ಹಾಗೂ ಊಟದ ವ್ಯವಸ್ಥೆ ಹಾಗೂ ಸ್ಟ್ಯಾಪಂಡ ಇರುತ್ತದೆ. 5 ವರ್ಷದ ಅವಧಿ ಪೂರ್ಣಗೊಂಡ ನಂತರ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗವಕಾಶ ಹೊಂದಬಹುದಾಗಿದೆ.

ಇದನ್ನೂ ಓದಿ: ಬ್ರ‍್ಯಾಂಡ್ ಬೆಂಗಳೂರು ಯೋಜನೆ/ ಆಕರ್ಷಕ ಬೆಂಗಳೂರಿಗಾಗಿ ಪ್ರತ್ಯೇಕ ಸಮಿತಿ ಜೊತೆ ಸಭೆ

ಆಸಕ್ತರು https://www.eklakshya.com/apply/susandhi-application-2022 ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.eklakshya.com ಹಾಗೂ ದೂರವಾಣಿ ಸಂಖ್ಯೆ 8050050183, 8050050185 ಹಾಗೂ 9972440183 ಗೆ ಸಂಪರ್ಕಿಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News