RBI Jobs 2023: ರಿಸರ್ವ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ ಕೈ ಬಿಡಬೇಡಿ, ಇಂದೇ ಅರ್ಜಿ ಸಲ್ಲಿಸಿ!

RBI Jobs 2023: ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆಗಾರರು, ತಜ್ಞರು ಮತ್ತು ವಿಶ್ಲೇಷಕರ ಹುದ್ದೆಗಳಿಗೆ ಗುತ್ತಿಗೆ  ಆಧಾರದ ನೇಮಕಾತಿಯನ್ನು ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಇಲ್ಲಿ ಪರಿಶೀಲಿಸಬಹುದು.

Written by - Chetana Devarmani | Last Updated : Jun 21, 2023, 03:32 PM IST
  • ರಿಸರ್ವ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ
  • ಆರ್‌ಬಿಐನಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ
  • ನೇಮಕಾತಿ ಅಧಿಸೂಚನೆ ಬಿಡುಗಡೆ
RBI Jobs 2023: ರಿಸರ್ವ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ ಕೈ ಬಿಡಬೇಡಿ, ಇಂದೇ ಅರ್ಜಿ ಸಲ್ಲಿಸಿ!
RBI

RBI Recruitment 2023: ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ತಯಾರಿ ನಡೆಸುತ್ತಿರುವ ಯುವಕರಿಗೆ ಉತ್ತಮ ಅವಕಾಶವಿದೆ. ನೀವು ರಿಸರ್ವ್ ಬ್ಯಾಂಕ್‌ನಲ್ಲಿ ಸರ್ಕಾರಿ ಕೆಲಸ ಮಾಡಲು ಬಯಸಿದರೆ, ಇದು ನಿಮಗೆ ತುಂಬಾ ಉಪಯುಕ್ತ ಸುದ್ದಿಯಾಗಿದೆ. ವಾಸ್ತವವಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

Add Zee News as a Preferred Source

RBI ಈ ನೇಮಕಾತಿಗಾಗಿ 20 ಜೂನ್ 2023 ರಂದು ಕಿರು ಸೂಚನೆಯನ್ನು ನೀಡಿದೆ. ಅದರಂತೆ, ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ವಿಭಾಗಗಳಲ್ಲಿ ಸಲಹೆಗಾರರು, ತಜ್ಞರು ಮತ್ತು ವಿಶ್ಲೇಷಕರ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಪ್ರಮುಖ ದಿನಾಂಕಗಳು

ಈ ಜಾಹೀರಾತು ಪೋಸ್ಟ್‌ಗಳಿಗೆ ಅರ್ಜಿ ಪ್ರಕ್ರಿಯೆಯು ಜೂನ್ 21, 2023 ರಿಂದ ಪ್ರಾರಂಭಗಿದೆ. 11 ಜುಲೈ 2023 ರ ವರೆಗೂ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಅಧಿಕೃತ ವೆಬ್‌ಸೈಟ್ 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ rbi.org.in ನಲ್ಲಿ ನೇಮಕಾತಿ ವಿಭಾಗದಲ್ಲಿ ಲಿಂಕ್ ಅನ್ನು ಸಕ್ರಿಯಗೊಳಿಸಿದ ನಂತರ ಅಭ್ಯರ್ಥಿಗಳು ಸಂಬಂಧಪಟ್ಟ ಅಪ್ಲಿಕೇಶನ್ ಪುಟಕ್ಕೆ ಭೇಟಿ ನೀಡಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. 

ಇದನ್ನೂ ಓದಿ: ಗೃಹ ಸಚಿವಾಲಯದಲ್ಲಿ 797 ಹುದ್ದೆಗಳು ಖಾಲಿ, 81,000 ರೂ ಸಂಬಳ.. ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!

ಅರ್ಜಿಯ ಪ್ರಕ್ರಿಯೆ

ಮೊದಲಿಗೆ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದರ ನಂತರ, ನೋಂದಾಯಿತ ವಿವರಗಳ ಮೂಲಕ ಲಾಗ್ ಇನ್ ಮಾಡಿ. ಅಭ್ಯರ್ಥಿಗಳು ಸಂಬಂಧಪಟ್ಟ ಹುದ್ದೆಗೆ ತಮ್ಮ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು.

ಖಾಲಿ ಹುದ್ದೆಗಳ ವಿವರ 

ಈ ನೇಮಕಾತಿ ಪ್ರಕ್ರಿಯೆಯ ಮೂಲಕ, ರಿಸರ್ವ್ ಬ್ಯಾಂಕ್‌ನಲ್ಲಿ ಸಲಹೆಗಾರರು, ತಜ್ಞರು ಮತ್ತು ವಿಶ್ಲೇಷಕರು ಸೇರಿ ಒಟ್ಟು 66 ಹುದ್ದೆಗಳನ್ನು ನೇಮಿಸಿಕೊಳ್ಳಲಿದೆ. ಈ ನೇಮಕಾತಿಯನ್ನು ಗುತ್ತಿಗೆ ಆಧಾರದ ಮೇಲೆ ಮಾಡಲಾಗುತ್ತಿದೆ.

ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ 

ಡೇಟಾ ಸೈಂಟಿಸ್ಟ್ - 3 ಪೋಸ್ಟ್‌ಗಳು
ಡೇಟಾ ಇಂಜಿನಿಯರ್ - 1 ಪೋಸ್ಟ್
IT ಭದ್ರತಾ ತಜ್ಞರು - 10 ಪೋಸ್ಟ್‌ಗಳು
IT ಸಿಸ್ಟಮ್ ಅಡ್ಮಿನಿಸ್ಟ್ರೇಟರ್ (DIT) - 8 ಪೋಸ್ಟ್‌ಗಳು
ಐಟಿ ಪ್ರಾಜೆಕ್ಟ್ ಅಡ್ಮಿನಿಸ್ಟ್ರೇಟರ್ (ಡಿಐಟಿ) - 6 ಹುದ್ದೆಗಳು
ನೆಟ್‌ವರ್ಕ್ ನಿರ್ವಾಹಕರು - 3 ಪೋಸ್ಟ್‌ಗಳು
ಅರ್ಥಶಾಸ್ತ್ರ (ಮ್ಯಾಕ್ರೋ-ಎಕನಾಮಿಕ್ ಮಾಡೆಲಿಂಗ್) - 1 ಪೋಸ್ಟ್
ಡೇಟಾ ವಿಶ್ಲೇಷಕ (ಅನ್ವಯಿಕ ಗಣಿತ) - 1 ಪೋಸ್ಟ್
ಡೇಟಾ ವಿಶ್ಲೇಷಕ (ಅನ್ವಯಿಕ ಅರ್ಥಶಾಸ್ತ್ರ) - 2 ಪೋಸ್ಟ್‌ಗಳು
ಡೇಟಾ ವಿಶ್ಲೇಷಕ (TABM/HANK ಮಾದರಿ) - 1 ಪೋಸ್ಟ್
ವಿಶ್ಲೇಷಕ (ಕ್ರೆಡಿಟ್ ರಿಸ್ಕ್) - 1 ಪೋಸ್ಟ್
ವಿಶ್ಲೇಷಕ (ಮಾರ್ಕೆಟ್ ರಿಸ್ಕ್‌) - 1 ಪೋಸ್ಟ್
ವಿಶ್ಲೇಷಕ (ಲಿಕ್ವಿಡಿಟಿ ರಿಸ್ಕ್) - 1 ಪೋಸ್ಟ್
ಹಿರಿಯ ವಿಶ್ಲೇಷಕ (ಕ್ರೆಡಿಟ್ ರಿಸ್ಕ್) - 1 ಪೋಸ್ಟ್
ಹಿರಿಯ ವಿಶ್ಲೇಷಕ (ಮಾರ್ಕೆಟ್ ರಿಸ್ಕ್‌) - 1 ಹುದ್ದೆ
ವಿಶ್ಲೇಷಕ (ಒತ್ತಡ ಪರೀಕ್ಷೆ) - 2 ಪೋಸ್ಟ್‌ಗಳು
ವಿಶ್ಲೇಷಕ (ವಿದೇಶೀ ವಿನಿಮಯ ಮತ್ತು ವ್ಯಾಪಾರ) - 3 ಪೋಸ್ಟ್‌ಗಳು
IT (ಸೈಬರ್ ಭದ್ರತಾ ವಿಶ್ಲೇಷಕ) - 8 ಪೋಸ್ಟ್‌ಗಳು
ಸಲಹೆಗಾರ - ಖಾತೆಗಳು - 3 ಪೋಸ್ಟ್‌ಗಳು
ಸಲಹೆಗಾರ - ಖಾತೆಗಳು/ತೆರಿಗೆ - DICGC - 1 ಪೋಸ್ಟ್
ಕಾನೂನು ಸಲಹೆಗಾರ - ಖಾತೆಗಳು/ತೆರಿಗೆ - DICGC - 1 ಪೋಸ್ಟ್
IT ಸಿಸ್ಟಮ್ ಅಡ್ಮಿನಿಸ್ಟ್ರೇಟರ್ (DICGC) - 1 ಪೋಸ್ಟ್

ಇದನ್ನೂ ಓದಿ: Career Growth: ಗ್ರಾಜ್ಯುಯೇಷನ್‌ ಬಳಿಕ ಲಕ್ಷಗಟ್ಟಲೇ ಸಂಬಳ ಪಡೆಯಲು ಈ ಕೋರ್ಸ್ ಮಾಡಿ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News