Teacher Viral Video: ಸಾಮಾನ್ಯವಾಗಿ ಭಾರತದಂತಹ ದೇಶದಲ್ಲಿ ಗುರುವಿಗೆ ತಂದೆ ತಾಯಿಯ ನಂತರದ ಉನ್ನತ ಸ್ಥಾನಮಾನ ನೀಡಲಾಗಿದೆ. ವಿದ್ಯಾರ್ಥಿಯ ಬದುಕನ್ನು ರೂಪಿಸುವಲ್ಲಿ ಶಿಕ್ಷಕನ ಪಾತ್ರ ದೊಡ್ಡದಾಗಿರುತ್ತದೆ. ಆದರೆ, ಕೆಲವೊಮ್ಮೆ ಕೆಲ ಶಿಕ್ಷಕರನ್ನು ನೋಡಿದರೆ ಅವರು ಹೇಳಿಕೊಡುವ ಶಿಕ್ಷಣಕ್ಕೆ ಅವರು ಕಳಂಕ ತರುತ್ತಾರೆ. ಇಂತಹ ಶಿಕ್ಷಕರು ವಿದ್ಯಾರ್ಥಿಗಳಿಗಷ್ಟೇ ಅಲ್ಲ ಸಮಾಜಕ್ಕೂ ಅಪಾಯಕಾರಿ. ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಿ ಯಾವುದು ಮತ್ತು ತಪ್ಪು ಯಾವುದು ಎಂಬುದನ್ನು ಕಲಿಸುತ್ತಾರೆ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ (Viral Video) ಓರ್ವ ಶಿಕ್ಷಕ ತಾನು ಮಾಡುತ್ತಿರುವ ತಪ್ಪನ್ನು ಸರಿ ಎಂದು ವಾದಿಸುತ್ತಿದ್ದಾನೆ. ಈ ವಿಡಿಯೋ ಛತ್ತೀಸ್ಗಡ್ ನಿಂದ ಹೊರಹೊಮ್ಮಿದೆ ಎನ್ನಲಾಗುತ್ತಿದ್ದು, ಅಲ್ಲಿನ ಶಾಲೆಯಿಂದರ ಶಿಕ್ಷಕ ಶಾಲೆಯಲ್ಲಿಯೇ ಕುಳಿತು ಮದ್ಯಪಾನ ಮಾಡುತ್ತಿದ್ದಾರೆ. (Teacher Drinking In School Viral Video)
ಇದನ್ನೂ ಓದಿ-Viral Video: ಈ ರೀತಿ ಕೂಡ ಪೊಲೀಸರು ಟ್ರಾಫಿಕ್ ಕಂಟ್ರೋಲ್ ಮಾಡಬಹುದಾ?
ಶಾಲೆಯ ಮೇಜಿನ ಮೇಲೆ ಶಿಕ್ಷಕನ ಮದ್ಯಪಾನ
ಶಿಕ್ಷಕರ ಕೆಲಸ ಶಾಲೆಗೆ ಹೋಗಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದಾಗಿರುತ್ತದೆ ಅವರ ಭವಿಷ್ಯವನ್ನು ನಿರ್ಮಿಸಲು ಅವರಿಗೆ ಉತ್ತಮ ಶಿಕ್ಷಣ ನೀಡುವುದು ಅವರ ಕಾರ್ಯ. ಆದರೆ ಶಿಕ್ಷಕನಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದರ ಅರಿವೆ ಇಲ್ಲ ಎಂದಾದರೆ? ಅಂತಹ ಶಿಕ್ಷಕ ವಿದ್ಯಾರ್ಥಿಗಳಿಗೆ ಯಾವ ರೀತಿ ಪಾಠ ಹೇಳಿಕೊಡಬಹುದು? ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಶಿಕ್ಷಕರೊಬ್ಬರು ಶಾಲೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯದ್ದು ಎನ್ನಲಾಗಿದೆ. ಅಲ್ಲಿ ಒಬ್ಬ ಟೀಚರ್ ತನ್ನ ಶಾಲಾ ಕಚೇರಿಯ ಟೇಬಲ್ ನಲ್ಲಿ ಕುಳಿತು ಪೆಗ್ ತಯಾರಿಸುತ್ತಿದ್ದಾನೆ ಮತ್ತು ಅದರ ಜೊತೆಗೆ ತಿನ್ನಲು ಕುರುಕಲು ಪದಾರ್ಥಗಳನ್ನು ಕೂಡ ತಂದಿದ್ದಾನೆ. ವೀಡಿಯೋ (Trending Video) ಚಿತ್ರೀಕರಿಸುತ್ತಿರುವ ವ್ಯಕ್ತಿ ಶಿಕ್ಷಕರಿಗೆ 'ಶಾಲೆಯಲ್ಲಿ ಮದ್ಯಪಾನ ಮಾಡುತ್ತಿದ್ದೀರಾ?' ಎಂದು ಪ್ರಶ್ನಿಸುತ್ತಾನೆ ಮತ್ತು ಈ ರೀತಿ ಮಾಡುವುದು ತಪ್ಪು ಎಂದು ಹೇಳುತ್ತಾನೆ. ಅದಕ್ಕೆ ಶಿಕ್ಷಕ 'ನಾನು ಇಂದು ಟೆನ್ಶನ್‌ನಲ್ಲಿದ್ದೇನೆ ಅದಕ್ಕಾಗಿಯೇ ಶಾಲೆಯಲ್ಲಿ ಕುಡಿಯುತ್ತಿದ್ದೇನೆ, ಇಲ್ಲದಿದ್ದರೆ ಸಾಮಾನ್ಯವಾಗಿ ನಾನು ಮನೆಯಲ್ಲಿ ಕುಡಿಯುತ್ತೇನೆ ಎಂದು ಸಮರ್ಥಿಸಿಕೊಳ್ಳುತ್ತಾನೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ತಮಾಷೆಯಲ್ಲಿ ನಿರತರಾದ ಜನ
ಈ ವೀಡಿಯೊ ವೈರಲ್ ಆಗುತ್ತಿದೆ ಮತ್ತು @govindprataps12 ಹೆಸರಿನ ಖಾತೆಯೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ಸುಮಾರು 4 ಸಾವಿರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವೀಡಿಯೋಗೆ ಜನರು ತರಹೇವಾರಿ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ಇಂತಹ ಶಿಕ್ಷಕರಿಗೆ ಶಾಲೆಯ ಹೊರಗೆ ಪ್ರತ್ಯೇಕ ಕೊಠಡಿ ಇರಬೇಕು ಇದರಿಂದ ಅವರು ಯಾವುದೇ ಶಬ್ದವಿಲ್ಲದೆ ಶಾಂತಿಯುತವಾಗಿ ಅವರು ಸೋಮರಸ ಆನಂದಿಸಬಹುದು' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ನೀವು ತುಂಬಾ ಆಯಾಸಗೊಂಡಿರುವಂತಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೇ ಬಳಕೆದಾರ, 'ನೀವು ಕೇವಲ ಪೆಗ್ ಅಲ್ಲ, ನೌಕರಿ ಮತ್ತು ಗೌರವ ಎರಡನ್ನೂ ಪೆಗ್ ಜೊತೆ ಕುಡಿದು ಬಿಟ್ಟಿರುವಿರಿ' ಎಂದು ಬರೆದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ-
"जीवन में बहुत टेंशन चल रही है"
ये कहते हुए सरकारी स्कूल के टीचर ने शराब का एक पैग गटक लिया.
📍छत्तीसगढ़ pic.twitter.com/wNCg5x9jDb
— Govind Pratap Singh | GPS (@govindprataps12) February 29, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ