Bengaluru: ಚಿಂದಿ ಆಯುವ ವ್ಯಕ್ತಿಗೆ ಸಿಕ್ತು 25 ಲಕ್ಷ ಅಮೆರಿಕನ್ ಡಾಲರ್..!

US Dollars Case: ಭಾನುವಾರ ಬಾಕ್ಸ್ ನಲ್ಲಿ 2.5 ಮಿಲಿಯನ್ ಡಾಲರ್ ಹಣ ಪತ್ತೆಯಾಗಿದೆ. ಚಿಂದಿ ಆಯುವಾಗ ರೈಲು ಹಳಿ ಪಕ್ಕವೇ ಈ ಡಾಲರ್‍ಗಳು ಪತ್ತೆಯಾಗಿವೆ. ಡಾಲರ್‍ಗಳ ಕಟ್ಟು ಕಂಡು ಚಿಂದಿ ಆಯುತಿದ್ದ ವ್ಯಕ್ತಿ ಮಾಲೀಕನಿಗೆ ಮಾಹಿತಿ ನೀಡಿದ್ದಾನೆ.  

Written by - Puttaraj K Alur | Last Updated : Nov 9, 2023, 11:39 AM IST
  • ಬೆಂಗಳೂರಿನಲ್ಲಿ ಚಿಂದಿ ಆಯುವ ವ್ಯಕ್ತಿಗೆ 2.5 ಮಿಲಿಯನ್ ಅಮೆರಿಕನ್ ಡಾಲರ್ ಸಿಕ್ಕಿದೆ
  • ರೈಲ್ವೆ ಹಳಿ ಪಕ್ಕದ ಪೊದೆಯಲ್ಲಿ ಯುಎಸ್‍ ಡಾಲರ್‍ಗಳ ಹಲವು ಕಟ್ಟುಗಳು ದೊರೆತಿವೆ
  • ಬೆಂಗಳೂರಿನ ಹೆಬ್ಬಾಳ ಪೊಲೀಸರಿಗೆ ಮಿಲಿಯನ್ ಡಾಲರ್ ಪ್ರಶ್ನೆ ಕಾಡುತ್ತಿದೆ
Bengaluru: ಚಿಂದಿ ಆಯುವ ವ್ಯಕ್ತಿಗೆ ಸಿಕ್ತು 25 ಲಕ್ಷ ಅಮೆರಿಕನ್ ಡಾಲರ್..! title=
25 ಲಕ್ಷ ಅಮೆರಿಕನ್ ಡಾಲರ್ ಪತ್ತೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿಂದಿ ಆಯುವ ವ್ಯಕ್ತಿಯೊಬ್ಬನಿಗೆ 2.5 ಮಿಲಿಯನ್ ಅಮೆರಿಕನ್ ಡಾಲರ್ ಸಿಕ್ಕಿದೆ. ರೈಲ್ವೆ ಹಳಿ ಪಕ್ಕದ ಪೊದೆಯಲ್ಲಿ ಡಾಲರ್‍ಗಳ ಹಲವು ಕಟ್ಟುಗಳು ಸಿಕ್ಕಿವೆ. ಹೀಗಾಗಿ ಬೆಂಗಳೂರಿನ ಹೆಬ್ಬಾಳ ಪೊಲೀಸರಿಗೆ ಮಿಲಿಯನ್ ಡಾಲರ್ ಪ್ರಶ್ನೆ ಕಾಡುತ್ತಿದೆ. ಖುದ್ದು ಕಮಿಷನರ್ ಮಾಹಿತಿ ನೀಡಿದ ಬೆನ್ನಲ್ಲೇ ತೆರಳಿದ ಹೆಬ್ಬಾಳ ಪೊಲೀಸರಿಗೆ ಶಾಕ್ ಆಗಿದೆ. ದೊಡ್ಡ ಮೊತ್ತದ ಡಾಲರ್ ಸಿಕ್ಕಿರುವ ಪ್ರಕರಣ ಸಂಬಂಧ RBIಗೆ ಪತ್ರ ಬರೆಯುವ ಮೂಲಕ ಸತ್ಯ ಹುಡುಕಲು ಹೆಬ್ಬಾಳ ಪೊಲೀಸರು ಮುಂದಾಗಿದ್ದಾರೆ.

ಪೊದೆಯಲ್ಲಿ ಸಿಕ್ಕ 25 ಲಕ್ಷ ಅಮೆರಿಕನ್ ಡಾಲರ್ ಹಣದ ಮೂಲ ಯಾವುದು..? ಅನ್ನೋ ಪ್ರಶ್ನೆ ಮೂಡಿದೆ. ಮತ್ತೊಂದೆಡೆ ಸಿಕ್ಕ ಅಮೇರಿಕನ್ ಡಾಲರ್‍ಗಳು ನಕಲಿ ಎಂಬ ಶಂಕೆ ಮೂಡಿದೆ. ಜೆರಾಕ್ಸ್ ಗಳನ್ನು ಬಿಸಾಕಿ ಹೊಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ. ಈ ಹಿನ್ನೆಲೆ ಈಗಾಗಲೇ RBIಗೆ ಹೆಬ್ಬಾಳ ಪೊಲೀಸರು ಪತ್ರ ಬರೆದಿದ್ದಾರೆ.

ಇದನ್ನೂ ಓದಿ: 2024ರಿಂದ 8ನೇ ವೇತನ ಆಯೋಗ ! ಕೈ ಸೇರುವ ವೇತನದಲ್ಲಿ 44.44 ಶೇ. ದಷ್ಟು ಹೆಚ್ಚಳ

RBIಗೆ ಪತ್ರ ಬರೆದ ಹೆಬ್ಬಾಳ ಪೊಲೀಸರಿಗೆ ಮಿಲಿಯನ್ ಡಾಲರ್‍ನದ್ದೇ ಪ್ರಶ್ನೆಯಾಗಿದೆ. ಭಾನುವಾರ ಬಾಕ್ಸ್ ನಲ್ಲಿ 2.5 ಮಿಲಿಯನ್ ಡಾಲರ್ ಹಣ ಪತ್ತೆಯಾಗಿದೆ. ಚಿಂದಿ ಆಯುವಾಗ ರೈಲು ಹಳಿ ಪಕ್ಕವೇ ಈ ಡಾಲರ್‍ಗಳು ಪತ್ತೆಯಾಗಿವೆ. ಡಾಲರ್‍ಗಳ ಕಟ್ಟು ಕಂಡು ಚಿಂದಿ ಆಯುತಿದ್ದ ವ್ಯಕ್ತಿ ಮಾಲೀಕನಿಗೆ ಮಾಹಿತಿ ನೀಡಿದ್ದಾನೆ.  

ಈ ನಡುವೆ ವಿಚಾರ ತಿಳಿದ ಮತ್ತೊರ್ವ ವ್ಯಕ್ತಿಯಿಂದ ಕಮಿಷನರ್‍ಗೆ ಮಾಹಿತಿ ನೀಡಲಾಗಿದೆ. ಮಾಹಿತಿ ಬಂದ ಕೂಡಲೇ ಹೆಬ್ಬಾಳ ಠಾಣೆಗೆ ಸಂಗತಿ ರವಾನೆಯಾಗಿದೆ. ಹೆಬ್ಬಾಳ ಪೊಲೀಸರು ಸಿಕ್ಕಿರುವ ದೊಡ್ಡಮೊತ್ತದ ಡಾಲರ್‍ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ವಶಕ್ಕೆ ಪಡೆದ ಡಾಲರ್‍ಗಳ ಜೊತೆಗೆ ವಿಶ್ವ ಸಂಸ್ಥೆಯ ಲೆಟರ್ ಹೆರ್‍ನಲ್ಲಿರುವ ಪತ್ರವೂ ದೊರೆತಿದೆ. 

ಇದನ್ನೂ ಓದಿ: PPF Account: ನಿಮ್ಮ ಪಿ‌ಪಿ‌ಎಫ್ ಖಾತೆ ಬಂದ್ ಆಗಿದೆಯೇ? ಇಂದೇ ಈ ಕೆಲಸ ಮಾಡಿ, ಇಲ್ಲವೇ ಭಾರೀ ನಷ್ಟ

ಇದರಲ್ಲಿ ಅಭಿವೃದ್ಧಿಗಾಗಿ ಅಮೆರಿಕದಿಂದ ಕಳುಹಿಸಲಾದ ಹಣವೆಂದು ನಮೂದಿಸಲಾಗಿದೆ. ಈ ಮಿಲಿಯನ್ಸ್ ಆಫ್ ಡಾಲರ್ಸ್ ಬಗ್ಗೆ ಗೌಪ್ಯತೆ ಕಾಪಾಡಿ ಎಂದು ಲೆಟರ್‍ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಡಾಲರ್ಸ್‍ಗಳ ನೋಟಿನ ಸಿರಿಯಲ್‍ಗಳನ್ನು ಸಹ ಉಲ್ಲೇಖ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಇವು ನಕಲಿ ಡಾಲರ್ಸ್ ಎಂಬ ಶಂಕೆ ಮೂಡಿದೆ. ಮತ್ತೊಂದೆಡೆ ಈ ಯುಎಸ್ ಕರೆನ್ಸಿ ಅಸಲಿಯತ್ತು RBIನಿಂದ ಬಯಲಾಗುತ್ತಾ ಎಂಬ ಗೊಂದಲ ಮೂಡಿದೆ. ಸದ್ಯ ಹೆಬ್ಬಾಳ ಪೊಲೀಸರಿಗೆ ಮಿಲಿಯನ್ ಡಾಲರ್ ಪ್ರಶ್ನೆ ಕಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News