ಮಹಾರಾಷ್ಟ್ರ: ಪ್ರೀತಿಯನ್ನು ತಿರಸ್ಕರಿಸಿದ ಯುವತಿಯನ್ನು ಕೊಲೆ ಮಾಡಿದ ಯುವಕನೊಬ್ಬ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿಯೇ ಈ ಘಟನೆ ನಡೆದಿದೆ. ಪ್ರಭಾಕರ್ ವಾಘರೆ (22) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಅರ್ಚನಾ (18) ಎಂಬಾಕೆಯನ್ನು ಪ್ರಭಾಕರ್ ಪ್ರೀತಿಸುತ್ತಿದ್ದ. ಆದರೆ ಅರ್ಚನಾ ಪ್ರಭಾಕರ್ನ ಪ್ರೀತಿಯನ್ನು ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡ ಆತ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ. ಹೇಗಾದರೂ ಮಾಡಿ ಅರ್ಚನಾಳನ್ನು ಕೊಲೆ ಮಾಡಬೇಕೆಂದು ತೀರ್ಮಾನಿಸಿದ್ದ ಪ್ರಭಾಕರ್ ಸರಿಯಾದ ಸಮಯಕ್ಕೆ ಕಾಯುತ್ತಿದ್ದ.
ಇದನ್ನೂ ಓದಿ: Viral Video: ಅರೆಬೆತ್ತಲಾಗಿ ವಿಮಾನ ಏರಲು ಬಂದ ಮಹಿಳೆ, ಪ್ರಯಾಣಿಕರಿಗೆ ಶಾಕ್..!
ಅದರಂತೆ ಒಂದು ದಿನ ಅರ್ಚನಾ ತನ್ನ ಸಹಪಾಠಿಯೊಂದಿಗೆ ಕಾಲೇಜಿಗೆ ತೆರಳುವಾಗಿ ಆಕೆಯ ಮೇಲೆ ದಾಳಿ ನಡೆಸಿದ ಪ್ರಭಾಕರ್, ಆಕೆಯ ಕತ್ತು ಸೀಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅರ್ಚನಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಅರ್ಚನಾ ಸಾವನ್ನಪ್ಪಿದ ಕೆಲವೇ ಗಂಟೆಯಲ್ಲೇ ಪ್ರಭಾಕರ್ ತಾನೂ ಸಹ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಾಲ್ಘರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಭಯಬಿದ್ದು ಬಿಜೆಪಿ ರಾವಣನ ಹೆಸರು ತಂದಿದೆ: ಡಿಸಿಎಂ ಡಿಕೆಶಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.