ರಕ್ತದ ಮಡುವಿನಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ

ಬಾಗಲಕೋಟೆ ತಾಲೂಕಿನ ಮಲ್ಲಾಪುರ ಗ್ರಾಮದ ಸಮೀಪ ಅಪರಿಚಿತ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 

Written by - Yashaswini V | Last Updated : Mar 30, 2023, 02:54 PM IST
  • ಬಾಗಲಕೋಟೆ ತಾಲೂಕಿನ ಮಲ್ಲಾಪುರ ಗ್ರಾಮದ ಸಮೀಪ ಅಪರಿಚಿತ ವ್ಯಕ್ತಿ ಶವವಾಗಿ ಪತ್ತೆ
  • ಅಪರಿಚಿತ ವ್ಯಕ್ತಿಯ ಶವದ ಪಕ್ಕ ಸಾರಾಯಿ ಪ್ಯಾಕೆಟ್ ಪತ್ತೆ
  • ಕುಡಿದ ಅಮಲಿನಲ್ಲಿ ಈ ಘಟನೆ ನಡೆದಿರಬಹುದು ಎಂಬ ಶಂಕೆ
ರಕ್ತದ ಮಡುವಿನಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ

ಬಾಗಲಕೋಟೆ: ರಕ್ತದ ಮಡುವಿನಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ಮಲ್ಲಾಪುರ ಕ್ರಾಸ್ ಬಳಿ ನಡೆದಿದೆ.

ಬಾಗಲಕೋಟೆ ತಾಲೂಕಿನ ಮಲ್ಲಾಪುರ ಗ್ರಾಮದ ಸಮೀಪ ಅಪರಿಚಿತ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ- ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಆಸ್ತಿ ಕಬಳಿಸಲು ಯತ್ನ ಆರೋಪ..!

ಅಪರಿಚಿತ ವ್ಯಕ್ತಿಯ ಶವದ ಪಕ್ಕ ಸಾರಾಯಿ ಪ್ಯಾಕೆಟ್ ಪತ್ತೆಯಾಗಿದ್ದು, ಕುಡಿದ ಅಮಲಿನಲ್ಲಿ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಇದುವರೆಗೂ ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ, ಆದರೆ ಮೃತನಾಗಿರುವಾ ವ್ಯಕ್ತಿಯ ಎಡಗೈ ಮೇಲೆ ಶಿವು ಎಂಬ ಮತ್ತು ಬಲಗೈ ಮೇಲೆ ಕನಕಶ್ರೀ ಮತ್ತು ಕಲಾವತಿ  ಹಾಗೂ ಎದೆಯ ಮೇಲೆ ಮಾರುತಿ ಎಂಬ ಹಚ್ಚೆಗಳು ಇದ್ದು, ಪೊಲೀಸರು ಅಪರಿಚಿತ ವ್ಯಕ್ತಿಯ ವಿಳಾಸದ ಪತ್ತೆಗಾಗಿ  ತನಿಖೆಯನ್ನ ಕೈಗೊಂಡಿದ್ದಾರೆ. 

ಇದನ್ನೂ ಓದಿ- ಹನಿ ಗ್ಯಾಂಗ್‌ನಿಂದ ʼಮಂಚಕ್ಕೆ ಕರೆದು ಮುಂಜಿʼ ಮಾಡಿಸುವುದಾಗಿ ಧಮ್ಕಿ : ಉದ್ಯಮಿ ಜಸ್ಟ್‌ ಮಿಸ್‌

ಬಾಗಲಕೋಟೆಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧಿಸಿದಂತೆ  ಪೊಲೀಸರು ಹೆಚ್ಚಿನ ತನಿಖೆಯನ್ನ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News