ಜಲೀಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು: ಸಿದ್ದರಾಮಯ್ಯ ಅಗ್ರಹ

ಒಂದು ಕಡೆ ಕೊಲೆ ಆದರೆ ಸಿಎಂ ಪರಿಹಾರ ಕೊಡ್ತಾರೆ. ಮತ್ತೊಂದು ಕಡೆ ಮುಸ್ಲಿಂಮರ ಕೊಲೆ ಆದರೆ ಪರಿಹಾರ ಇಲ್ಲ. ಈ ತಾರತಮ್ಯ ಏಕೆ? ಪರಿಹಾರ ಎರಡೂ ಕಡೆಗೂ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Dec 26, 2022, 11:27 PM IST
  • ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‍ನಲ್ಲಿ ನಡೆದ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣ
  • ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸಿದ್ದರಾಮಯ್ಯ ಆಗ್ರಹ
  • ಅಬ್ದುಲ್ ಜಲೀಲ್ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯ
ಜಲೀಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು: ಸಿದ್ದರಾಮಯ್ಯ ಅಗ್ರಹ   title=
ಅಬ್ದುಲ್ ಜಲೀಲ್ ಹತ್ಯೆ ಪ್ರಕರಣ

ಬೆಳಗಾವಿ: ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‍ನಲ್ಲಿ ನಡೆದ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ UAPA ಕಾಯ್ದೆಯಡಿ  ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಜಲೀಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದ್ದಾರೆ.

ವಿಧಾನಸಭೆಯ ಶೂನ್ಯವೇಳೆಯಲ್ಲಿ ಈ ವಿಚಾರವನ್ನು ಮಾಜಿ ಸಚಿವ ಯು.ಟಿ.ಖಾದರ್ ಪ್ರಸ್ತಾಪ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ‘ಬೇರೆ ಬೇರೆ ಕಡೆಗಳಲ್ಲಿ ನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ. ಭಜರಂಗದಳವರು ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜಲೀಲ್ ಕೊಲೆ ಪ್ರಕರಣ ಸುರತ್ಕಲ್‍ನಲ್ಲಿ ನಡೆದಿದೆ. ಅದೇ ಜಾಗದಲ್ಲಿ ಮತ್ತೊಂದು ಹತ್ಯೆಯೂ‌ ನಡೆದಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿಗೆ 2 ಬಾರಿ ಹೋದಾಗಲೂ ಕೊಲೆ ಆಗಿತ್ತು.ಇದಕ್ಕೆ ಕೊನೆ ಯಾವಾಗ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿ, ಅಮಿತ್ ಶಾ ಮುಂದೆ ನಿಮ್ಮ ಧಮ್, ತಾಕತ್ ತೋರಿಸಿ: ಸಿಎಂ ಬೊಮ್ಮಾಯಿಗೆ ಎಚ್‍ಡಿಕೆ ಸವಾಲು!

ನೈತಿಕ ಪೊಲೀಸ್‍ಗಿರಿಯನ್ನು ಹತ್ತಿಕ್ಕದಿದ್ದರೆ ಇದು ಹೀಗೆಯೇ ಮುಂದುವರಿಯುತ್ತದೆ. ಸಿಎಂ ಪ್ರಚೋದನಾತ್ಮಕ ಹೇಳಿಕೆ ಕೊಡುತ್ತಿದ್ದಾರೆ. ಆಕ್ಷನ್ ಗೆ ರಿಯಾಕ್ಷನ್ ಎಂದು ಹೇಳಿದ್ದಾರೆ. ಈ ತರ ಬೆಂಬಲಿಸುವ ಹೇಳಿಕೆ ಕೊಟ್ಟರೆ ಇವೆಲ್ಲಾ ಎಲ್ಲಿ ನಿಲ್ಲುತ್ತವೆ? ರಾಜ್ಯದಲ್ಲಿ ಪೊಲೀಸ್‌ ಇಲಾಖೆ ಇರೋದು ಏಕೆ? ಇದಕ್ಕೆ ಉತ್ತೇಜನ ಕೊಟ್ಟರೆ ಎಲ್ಲಿ ನಿಲ್ಲುತ್ತೆ? ಒಂದು ಕಡೆ ಕೊಲೆ ಆದರೆ ಸಿಎಂ ಪರಿಹಾರ ಕೊಡ್ತಾರೆ. ಮತ್ತೊಂದು ಕಡೆ ಮುಸ್ಲಿಂಮರ ಕೊಲೆ ಆದರೆ ಪರಿಹಾರ ಇಲ್ಲ. ಈ ತಾರತಮ್ಯ ಏಕೆ? ಪರಿಹಾರ ಎರಡೂ ಕಡೆಗೂ ಕೊಡಬೇಕು. ಮುಸ್ಲಿಮರಿಗೆ ಏಕೆ ಪರಿಹಾರ ಕೊಡಲ್ಲ? ಯುಎಪಿಎ ಹಾಕುವಲ್ಲೂ ತಾರತಮ್ಯ ಏಕೆ? ಕರಾವಳಿ ಪ್ರದೇಶದಲ್ಲಿ ಇಂತಹ ಪ್ರಕರಣ ಹೆಚ್ಚಾಗುತ್ತಿದೆ. ನೈತಿಕ ಪೊಲೀಸ್‍ಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಅಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಕಾನೂನು ಹಾಗೂ ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ‘ಸರ್ಕಾರ ಯಾರಿಗಾದರೂ ಇಂತಹ ಕಾಯ್ದೆಯಡಿ ಕೇಸ್ ಹಾಕಿ ಎಂದು ಮಾಡಲು ಸಾಧ್ಯವಿಲ್ಲ. ಪೊಲೀಸರು ಪ್ರಕರಣಕ್ಕೆ ತಕ್ಕಂತೆ ಕೇಸ್ ಹಾಕುತ್ತಾರೆ. ಪರಿಹಾರ ಸಂತ್ರಸ್ತರಿಗೆ ಕೊಡುವುದು, ಆರೋಪಿಗಳಿಗೆ ಅಲ್ಲ. ಹಿಂದೆ ಯಾವುದಾದರೂ ಕ್ರಿಮಿನಲ್ ಚಟುವಟಿಗೆಗಳಲ್ಲಿ ಭಾಗಿಯಾಗಿದ್ದರೆ ಪರಿಹಾರ ನೀಡಲು ಸಾಧ್ಯವಿಲ್ಲ. ಈ ಪ್ರಕಾರಣದಲ್ಲಿ ನಿಜವಾದ ಸಂತ್ರಸ್ತರಿದ್ದರೆ ಪರಿಗಣಿಸಲು ಗೃಹ ಸಚಿವರಿಗೆ ತಿಳಿಸುತ್ತೇನೆ’ ಎಂದು ಹೇಳಿದರು.

ಇದನ್ನೂ ಓದಿ: "ಶೇ. 3ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರೇನು ಭಿಕ್ಷುಕರಲ್ಲ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News