ಸರ್ ಕೊಲೆ ಮಾಡ್ತಾರೆ ಬದುಕಿಸಿ: ಪೊಲೀಸರಿಗೆ ಗೋಗರೆದು ಶರಣಾದ ರೌಡಿ ಶೀಟರ್ ಸ್ಟಾರ್ ನವೀನ್

ಬೆಂಗಳೂರು ಸಿಸಿಬಿ ಮತ್ತು ಸೌಥ್ ಪೊಲೀಸರು ಹುಡುಕಾಡುತ್ತಿದ್ದ ರೌಡಿ ಶೀಟರ್ ನವೀನ್ ಅಲಿಯಾಸ್ ಸ್ಟಾರ್  ಇದ್ದಕ್ಕಿದ್ದಂತೆ ಸಿದ್ದಾಪುರ ಪೊಲೀಸರಿಗೆ  ಕರೆ  ಮಾಡಿ ಸಾರ್ ನನ್ನ ಉಳಿಸಿ, ಇಲ್ಲದಿದ್ದರೆ ನನ್ನ ಕೊಲೆ ಮಾಡುತ್ತಾರೆ ಎಂದು ಗೋಗರೆದಿದ್ದ.

Written by - VISHWANATH HARIHARA | Edited by - Zee Kannada News Desk | Last Updated : Dec 26, 2022, 07:56 PM IST
  • ಪೊಲೀಸರು ಹುಡುಕಾಡುತ್ತಿದ್ದ ರೌಡಿ ಶೀಟರ್ ನವೀನ್
  • ಸರ್ ನನ್ನ ಉಳಿಸಿ, ಇಲ್ಲದಿದ್ದರೆ ನನ್ನ ಕೊಲೆ ಮಾಡುತ್ತಾರೆ
  • ಪೊಲೀಸರಿಗೆ ಗೋಗರೆದು ಶರಣಾದ ರೌಡಿ ಶೀಟರ್
ಸರ್ ಕೊಲೆ ಮಾಡ್ತಾರೆ ಬದುಕಿಸಿ: ಪೊಲೀಸರಿಗೆ ಗೋಗರೆದು ಶರಣಾದ ರೌಡಿ ಶೀಟರ್ ಸ್ಟಾರ್ ನವೀನ್  title=
ರೌಡಿ ಶೀಟರ್ ನವೀನ್ 

ಬೆಂಗಳೂರು : ಬೆಂಗಳೂರು ಸಿಸಿಬಿ ಮತ್ತು ಸೌಥ್ ಪೊಲೀಸರು ಹುಡುಕಾಡುತ್ತಿದ್ದ ರೌಡಿ ಶೀಟರ್ ನವೀನ್ ಅಲಿಯಾಸ್ ಸ್ಟಾರ್  ಇದ್ದಕ್ಕಿದ್ದಂತೆ ಸಿದ್ದಾಪುರ ಪೊಲೀಸರಿಗೆ  ಕರೆ  ಮಾಡಿ ಸರ್ ನನ್ನ ಉಳಿಸಿ, ಇಲ್ಲದಿದ್ದರೆ ನನ್ನ ಕೊಲೆ ಮಾಡುತ್ತಾರೆ ಎಂದು ಗೋಗರೆದಿದ್ದ. ಇನ್ನೂ ನವೀನ ತಮಿಳುನಾಡಿನಿಂದ ಮೈಸೂರಿಗೆ ಬರುವಾಗ ಫಾಲೋ ಮಾಡಿದ ಗ್ಯಾಂಗ್‌ನಿಂದ ಈತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಮೈಸೂರಿಗೆ ಎದುರಾಳಿಗಳಿಗೆ ಮೆಸೇಜ್  ಪಾಸ್​  ಮಾಡಿದ್ದ ವಿಷಯ ಕೇಳಿಸಿಕೊಂಡು ಜಾಗೃತನಾದ ರೌಡಿಶೀಟರ್ ನವೀನ ತಕ್ಷಣ ಸಿಸಿಬಿ ಹಾಗೂ ಸಿದ್ದಾಪುರ ಪೊಲೀಸರಿಗೆ ಸಹಾಯ ಬೇಡಿದ್ದಾನೆ. ಇತ್ತ ಪೊಲೀಸರು ಕೂಡ ನವೀನನಿಗೆ ಹತ್ತಿರವಿರುವ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.ಪೊಲೀಸರ ಸಲಹೆ ಮೇರೆಗೆ ಪ್ರಾಣ ಉಳಿಸಕೊಂಡು ರೌಡಿಶೀಟರ್ ಸ್ಟಾರ್ ನವೀನ್ ಸದ್ಯ ಸಿದ್ದಾಪುರ ಪೊಲೀಸರ ವಶದಲ್ಲಿದ್ದಾನೆ.

ಇದನ್ನೂ ಓದಿ: ರಾಜ್ಯಕ್ಕೆ ಮತ್ತೆ ಸೈಕ್ಲೋನ್ ಎಫೆಕ್ಟ್- ಇನ್ನೂ ಎರಡು ಮೂರು ದಿನ ಮಳೆ ಸಾಧ್ಯತೆ

ಸಿದ್ದಾಪುರ, ಬನಶಂಕರಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಸ್ಟಾರ್​ ನವೀನ್ ಕೊಲೆ, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ. ನವೀನ್ ಹಲವು ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದ. ಸೋಮವಾರ ಚಾಮರಾಜನಗರದ ರಾಂಪುರ ಬಳಿ ಬಸ್‌​ನಲ್ಲಿ ಹೋಗುತ್ತಿದ್ದ ಸ್ಟಾರ್ ನವೀನ್ ಮೇಲೆ ಎರಡು ಕಾರಿನಲ್ಲಿ ಬಂದ ಗ್ಯಾಂಗ್‌ ಅಟ್ಯಾಕ್ ಮಾಡಿತ್ತು. ಸದ್ಯ ಅಲ್ಲಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ನವೀನ ಪ್ರಾಣ ಭಯದಿಂದ ಚಾಮರಾಜನಗರದ ರಾಂಪುರ ಪೊಲೀಸ್ ಠಾಣೆಯೊಳಕ್ಕೆ ಓಡಿ ರಕ್ಷಣೆ ಬೇಡಿದ್ದಾನೆ. ಬಳಿಕ ಸ್ಟಾರ್ ನವೀನ್ ವಿಚಾರಣೆ ನಡೆಸಿದ ರಾಂಪುರ ಪೊಲೀಸರಿಗೆ ಇದೇ ನವೀನ ಸಿದ್ದಾಪುರ ಪೊಲೀಸ್ ಠಾಣೆ ರೌಡಿಶೀಟರ್ ಎಂದು ಹೇಳಿದ್ದಾನೆ. 

ಬೆಂಗಳೂರು ಸಿದ್ದಾಪುರ ಪೊಲೀಸರ ಸಂಪರ್ಕ ಮಾಡಿದ ರಾಂಪುರ ಪೊಲೀಸರು ಸಿದ್ದಾಪುರ ರೌಡಿಶೀಟರ್ ಎಂದು ಕನ್ಫರ್ಮ್​ ಮಾಡಿಕೊಂಡಿದ್ದಾರೆ. ನಂತರ ನವೀನ್ ವಶಕ್ಕೆ ಪಡೆದ ರಾಂಪುರ ಪೊಲೀಸರು ಸಿದ್ದಾಪುರ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.ಸ್ಟಾರ್ ನವೀನ್ ಮೇಲೆ ಅಟ್ಯಾಕ್ ಮಾಡಿದ್ದು ಮೋಸ್ಟ್‌ ವಾಟೆಂಡ್ ರೌಡಿಶೀಟರ್​ ಸೈಕಲ್ ರವಿ ಗ್ಯಾಂಗ್​ ಎಂ ಶಂಕೆ ವ್ಯಕ್ತವಾಗಿದೆ. ರೌಡಿಶೀಟರ್ ಬೇಕರಿ ರಘು ಮೇಲೆ ಅಟ್ಯಾಕ್‌ಗೆ ಸ್ಕೆಚ್ ಹಾಕಿದ್ದ ಸ್ಟಾರ್ ನವೀನ್ ಮತ್ತು ಅವನ ಸಹಚರ ಮೇಲೆ ಸ್ಟಾರ್ ರಾಹುಲ್ ಹಗೆ ಸಾಧಿಸುತ್ತಿದ್ದ. ಈ ಹಿಂದೆ ಬಸವನಗುಡಿ ಬಳಿ ಅಟ್ಯಾಕ್ ಮಾಡಲು ಮುಂದಾಗಿದ್ದಾಗ ಎಸ್ಕೇಪ್ ಅಗದ್ದ ಬೇಕರಿ ರಘು ಇದೇ ದ್ವೇಷಕ್ಕೆ ಸ್ಟಾರ್ ನವೀನ್ ಮೇಲೆ ಅಟ್ಯಾಕ್ ಮಾಡಿಸಿರುವ ಶಂಕೆಯಿದ್ದು, ಸದ್ಯ ಸ್ಟಾರ್ ನವೀನ ಬಂಧನ ಮಾಡಿ ಸಿದ್ದಾಪುರ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ಎಸ್ ಸಿ, ಎಸ್ ಟಿ ಮೀಸಲಾತಿ ವಿಧೇಯಕ ಅಂಗೀಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News