ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಖದೀಮನ ಬಂಧನ

ಈತ ಬೈಕ್ ನಲ್ಲೇ ದಿನದ ಬಹುತೇಕ ಸಮಯ ಕಳೆಯಲಿದ್ದು ಜೀವನ ದೂಡಲು ಬೇಕಾದ ವಸ್ತುಗಳನ್ನು ಬೈಕ್ ನಲ್ಲೇ ಇಟ್ಟುಕೊಂಡಿರುತ್ತಾನೆ‌.ವಿಳಾಸ ಕೇಳುವ ನೆಪ, ನೀರು ಬೇಕೆನ್ನುವುದು, ಜಮೀನು ಖರೀದಿ ಹೀಗೆ ಒಂಟಿ ಮಹಿಳೆಯರನ್ನು ಮಾತನಾಡಿಸಿ ಚಾಕು ಇಟ್ಟು ಹೆದರಿಸಿ ಸರ ಎಗರಿಸುತ್ತಾನೆ‌.

Written by - Manjunath N | Last Updated : Aug 27, 2024, 06:32 PM IST
  • ಬಂಧಿತ ಸುರೇಶ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಸರಗಳ್ಳತನ, ಹುಂಡಿಗೆ ಕನ್ನ, ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ‌.
  • ಕಳ್ಳತನವನ್ನೇ ಕಸುಬಾಗಿ ಮಾಡಿಕೊಂಡಿರುವ ಈತನನ್ನು ಪೊಲೀಸರು ಹೆಡೆಮುರಿ ಕಟ್ಟಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
  • ಇನ್ನು, ಈತನನ್ನು ಬಂಧಿಸಿದ ಪೊಲೀಸ್ ತಂಡಕ್ಕೆ 25 ಸಾವಿರ ರೂ. ನಗದು ಬಹುಮಾನವನ್ನು ಎಸ್ಪಿ ಡಾ.ಬಿ.ಟಿ‌.ಕವಿತಾ ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಖದೀಮನ ಬಂಧನ title=

ಚಾಮರಾಜನಗರ: ಚಾಮರಾಜನಗರ, ಮೈಸೂರು, ಮಂಡ್ಯ ಹೀಗೆ ಸಿಕ್ಕ ಸಿಕ್ಕ ಕಡೆಯಲ್ಲಿ ಕಳ್ಳತನ ಮಾಡುತ್ತಿದ್ದ ಈ ಅಸಾಮಿಗೆ ಕಳ್ಳತನವೇ ಕಸುಬಾಗಿತ್ತು. ಜೈಲಿಂದ ಹೊರಬಂದರೂ ಈತ ಬುದ್ಧಿ ಕಲಿಯದೇ 12 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದವನನ್ನು ಗಡಿಜಿಲ್ಲೆ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.

ಚಾಮರಾಜನಗರ ತಾಲೂಕಿನ ಮೇಗಲಹುಂಡಿ ಗ್ರಾಮದ ಸುರೇಶ್ ಎಂಬಾತ ಬಂಧಿತ ಕಳ್ಳ. ಈತ ಬೇರೆ ಬೇರೆ ಕಳವು ಪ್ರಕರಣಗಳಲ್ಲಿ ಜೈಲುಪಾಲಾಗಿ ಬಂದ ಕೆಲವೇ ತಿಂಗಳುಗಳಲ್ಲಿ ಮತ್ತೇ 12 ಕಡೆ ಕಳವು ಮಾಡಿರುವುದು ಈತನ ಖತರ್ನಾಕ್ ಬುದ್ಧಿಗೆ ನಿದರ್ಶನವಾಗಿದೆ‌.

ವಿಳಾಸ ಕೇಳ್ತಾನೆ- ಚಾಕು ತೋರಿಸ್ತಾನೆ ಸುರೇಶ: 

ಈತ ಬೈಕ್ ನಲ್ಲೇ ದಿನದ ಬಹುತೇಕ ಸಮಯ ಕಳೆಯಲಿದ್ದು ಜೀವನ ದೂಡಲು ಬೇಕಾದ ವಸ್ತುಗಳನ್ನು ಬೈಕ್ ನಲ್ಲೇ ಇಟ್ಟುಕೊಂಡಿರುತ್ತಾನೆ‌.ವಿಳಾಸ ಕೇಳುವ ನೆಪ, ನೀರು ಬೇಕೆನ್ನುವುದು, ಜಮೀನು ಖರೀದಿ ಹೀಗೆ ಒಂಟಿ ಮಹಿಳೆಯರನ್ನು ಮಾತನಾಡಿಸಿ ಚಾಕು ಇಟ್ಟು ಹೆದರಿಸಿ ಸರ ಎಗರಿಸುತ್ತಾನೆ‌.

ಇದನ್ನೂ ಓದಿ- K-SET: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 28 ರವರೆಗೆ ಅವಕಾಶ..!

ಇದೇ ರೀತಿ ಕಳೆದ 23 ರಂದು ಚಾಮರಾಜನಗರ ತಾಲೂಕಿನ ಕಣ್ಣೇಗಾಲ ಗ್ರಾಮದ ಮಂಜುಳಾ ಎಂಬವರು ಬಹಿರ್ದೆಸೆಗೆ ತೆರಳಿ ಹಿಂತಿರುಗುವಾಗ ಅಡ್ಡಹಾಕಿದ ಈತ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ 4 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ. ಬಳಿಕ, ಅಂದೇ ಚಾಮರಾಜನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲೂ ಕಳವು ಪ್ರಕರಣ ನಡೆಸಿದ್ದನು.ಸರಗಳ್ಳ ಸುರೇಶ್ ಗಾಗಿ ಬೆನ್ನತ್ತಿದ್ದ ಪೊಲೀಸರು ಇಂದು ಮುಂಜಾನೆ ಮನೆ ಹಿಂಭಾಗದ ಬೇಲಿಯಲ್ಲಿ ಅಡಗಿದ್ದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಈತನನ್ನು ವಿಶೇಷ ತಂಡ ಬಂಧಿಸಿದೆ. 

ಬಂಧಿತ ಸುರೇಶ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಸರಗಳ್ಳತನ, ಹುಂಡಿಗೆ ಕನ್ನ, ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ‌.ಕಳ್ಳತನವನ್ನೇ ಕಸುಬಾಗಿ ಮಾಡಿಕೊಂಡಿರುವ ಈತನನ್ನು ಪೊಲೀಸರು ಹೆಡೆಮುರಿ ಕಟ್ಟಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು, ಈತನನ್ನು ಬಂಧಿಸಿದ ಪೊಲೀಸ್ ತಂಡಕ್ಕೆ 25 ಸಾವಿರ ರೂ. ನಗದು ಬಹುಮಾನವನ್ನು ಎಸ್ಪಿ ಡಾ.ಬಿ.ಟಿ‌.ಕವಿತಾ ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News