Assault Video: ಕೋರ್ಟ್‌ ಆವರಣದಲ್ಲೇ ಯುವತಿಗೆ ಕ್ರೂರವಾಗಿ ಥಳಿಸಿದ ವ್ಯಕ್ತಿ!

ಕೋರ್ಟ್‌ ಆವರಣದಲ್ಲಿಯೇ ಯುವತಿಯೋರ್ವಳ ಮೇಲೆ ವಕೀಲನೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ. ಇನ್ನು ಆಕೆಯ ಮೇಲೆ ಹಲ್ಲೆ ನಡೆಸುತ್ತದ್ದರೂ ಸಹಯಾರೋಬ್ಬರು ಆಕೆಯ ಸಹಾಯಕ್ಕೆ ಬಾರದೆ ಸುಮ್ಮನೆ ನೋಡಿಕೊಂಡು ನಿಂತಿರುವುದು ವಿಡಿಯೋದಲ್ಲಿ ಕಾಣಬಹುದು. ಹೆಣ್ಣಿಗೆ ರಕ್ಷಣೆ ಇದೆ ಎಂದು ಹೇಳುವ ಜನರ ಮಧ್ಯೆಯೇ ಇಂತಹ ಘಟನೆ ನಡೆದಿರುವುದು ನಿಜಕ್ಕೂ ವಿಷಾದನೀಯ.  

Written by - Bhavishya Shetty | Last Updated : May 15, 2022, 12:36 PM IST
  • ಕೋರ್ಟ್‌ ಆವರಣದಲ್ಲಿ ಯುವತಿ ಮೇಲೆ ಹಲ್ಲೆ
  • ಮಧ್ಯಪ್ರದೇಶದಲ್ಲಿ ನಡೆದ ಘಟನೆ
  • ಕಳೆದ ದಿನದ ಹಿಂದೆ ರಾಜ್ಯದ ಬಾಗಲಕೋಟೆಯಲ್ಲಿಯೂ ನಡೆದಿದ್ದ ಕೃತ್ಯ
 Assault Video: ಕೋರ್ಟ್‌ ಆವರಣದಲ್ಲೇ ಯುವತಿಗೆ ಕ್ರೂರವಾಗಿ ಥಳಿಸಿದ ವ್ಯಕ್ತಿ!   title=
Attack on woman

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಸಮಾನತೆ ಇದೆ ಎಂದು ಹೇಳುವುದನ್ನು ಕೇಳುತ್ತೇವೆ. ಆದರೆ ಆಕೆ ಮೇಲಾಗುವ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಅಧಿಕಾರ ಬಳಕೆ ಮಾಡಿಕೊಂಡು, ಕಾನೂನಿಗೆ ವಿರುದ್ಧವಾಗಿ ನಡೆಯುವ ಅನೇಕರನ್ನು ನಾವು ನೋಡಿರುತ್ತೇವೆ. ಇತ್ತೀಚಿಗೆ ರಾಜ್ಯದ ಬಾಗಲಕೋಟೆಯಲ್ಲಿ ವಕೀಲೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ಅಂತಹದ್ದೇ ಪ್ರಕರಣ ಮಧ್ಯಪ್ರದೇಶದಲ್ಲೂ ಇದೀಗ ನಡೆದಿದೆ. 

ಇದನ್ನು ಓದಿ: ಸೌತ್ ಸಿನಿ ಇಂಡಸ್ಟ್ರಿ ಎಂಟ್ರಿಗೆ ಆರತಿ ಬೇಡಿ ರೆಡಿ... ಯಾರು ಗೊತ್ತಾ ಈ ಬ್ಯೂಟಿ..?

ಕೋರ್ಟ್‌ ಆವರಣದಲ್ಲಿಯೇ ಯುವತಿಯೋರ್ವಳ ಮೇಲೆ ವಕೀಲನೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ. ಇನ್ನು ಆಕೆಯ ಮೇಲೆ ಹಲ್ಲೆ ನಡೆಸುತ್ತದ್ದರೂ ಸಹಯಾರೋಬ್ಬರು ಆಕೆಯ ಸಹಾಯಕ್ಕೆ ಬಾರದೆ ಸುಮ್ಮನೆ ನೋಡಿಕೊಂಡು ನಿಂತಿರುವುದು ವಿಡಿಯೋದಲ್ಲಿ ಕಾಣಬಹುದು. ಹೆಣ್ಣಿಗೆ ರಕ್ಷಣೆ ಇದೆ ಎಂದು ಹೇಳುವ ಜನರ ಮಧ್ಯೆಯೇ ಇಂತಹ ಘಟನೆ ನಡೆದಿರುವುದು ನಿಜಕ್ಕೂ ವಿಷಾದನೀಯ. 

 

ಸದ್ಯ ಯುವತಿ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್‌ 355ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶಾಹ್ದೋಲ್‌ನ ಎಸ್‌ಡಿಪಿಒ ರವಿ ಪ್ರಸಾದ್‌ ಕೋಲ್‌ ಹೇಳಿದ್ದಾರೆ. 

ಕರ್ನಾಟಕದಲ್ಲೂ ನಡೆದಿದ್ದ ಘಟನೆ: 
ಹಾಡಹಗಲೇ ಸಾರ್ವಜನಿಕರ ಎದುರು ವಕೀಲೆಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆಯ ವಿನಾಯಕನಗರ ಕ್ರಾಸ್‍ನಲ್ಲಿ ನಡೆದಿತ್ತು. ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಎಂಬಾತ ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಆಕೆ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. 

ಇದನ್ನು ಓದಿ: ಶಾಸಕ ಜಿ.ಟಿ.ದೇವೇಗೌಡರ 3 ವರ್ಷದ ಮೊಮ್ಮಗಳು ನಿಧನ

ಸದ್ಯ ಪ್ರಕರಣ ಸಂಬಂಧ ಬಾಗಲಕೋಟೆ ನಗರ ಠಾಣೆ ಪೊಲೀಸರು ಆರೋಪಿ ಮಹಾಂತೇಶ್‍ನನ್ನು ಬಂಧಿಸಿದ್ದಾರೆ. ಮಹಿಳೆ ಎಂಬುದನ್ನೂ ನೋಡದೆ ಸಾರ್ವಜನಿಕ ಎದುರೇ ವಕೀಲೆಗೆ ಥಳಿಸಿ ಹಲ್ಲೆ ನಡೆಸಿದ್ದ. ಪರಿಣಾಮ ದಂಪತಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಕೀಲೆ ಮೇಲೆ ನಡುರಸ್ತೆಯಲ್ಲಿ ಮೃಗೀಯವಾಗಿ ವರ್ತಿಸಿ ಹಲ್ಲೆ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರೋಪಿ ಮಹಾಂತೇಶ್‍ನ ಮೃಗೀಯ ವರ್ತನೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಈ ಬಗ್ಗೆ ವಕೀಲೆ ಸಂಗೀತಾ ದೂರು ನೀಡಿದ್ದು, ಆರೋಪಿ ಮಹಾಂತೇಶ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತಿದೆ ಎಂದು ಎಸ್ಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News