ಬೆಂಗಳೂರು : ಅನೇಕ ಬಾರಿ ಪ್ರಯಾಣಿಕರು ಮರೆತುಹೋದ ವಸ್ತುಗಳನ್ನ ಆಟೋ ಚಾಲಕರು ಹಿಂದಿರುಗಿಸಿ ಮಾನವೀಯತೆ ಮರೆದಿದ್ದಾರೆ. ಆದರೆ ಇಲ್ಲೊಬ್ಬ ಆಟೋ ಚಾಲಕನೊಬ್ಬ ಪ್ರಯಾಣಿಕನ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದನು.
ಜನವರಿ 24ರಂದು ಗಾಂಧಿ ಬಜಾರ್ ನಿಂದ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿರುವ ಕ್ಲಿನಿಕ್ ಗೆ ತೆರಳಲು ಆರೋಪಿಯ ಆಟೋ ಹತ್ತಿದ್ದ ಪ್ರಯಾಣಿಕರೊಬ್ಬರು, ತಮ್ಮ ಬ್ಯಾಗನ್ನು ಆಟೋದಲ್ಲೇ ಇರಿಸಿ ಪಾರ್ಕಿಂಗ್ ಸ್ಥಳದಲ್ಲೇ ಸ್ವಲ್ಪ ಸಮಯ ಕಾಯುವಂತೆ ಆಟೋ ಚಾಲಕ ರಂಗಸ್ವಾಮಿಗೆ ತಿಳಿಸಿದ್ದರು. ಆದರೆ ಖತರ್ನಾಕ್ ಬುದ್ದಿ ತೋರಿದ್ದ ರಂಗಸ್ವಾಮಿಯು , ಪ್ರಯಾಣಿಕನ ಬ್ಯಾಗಿನಲ್ಲಿದ್ದ ಲಕ್ಷ ಅಧಿಕ ಹಣವನ್ನು ಗಮನಿಸಿದ್ದನು.
ಇದನ್ನೂ ಓದಿ:'ನಾನು ಉತ್ತರ ಕರ್ನಾಟಕ ಭಾಗದ 112 ಕ್ಷೇತ್ರದಲ್ಲಿ ಯಾತ್ರೆ ಮಾಡುತ್ತೆನೆ'
ಆಟೋ ಚಾಲಕನು ಮಾಡಿದ ಸಾಲ ತೀರಿಸಲು ಬ್ಯಾಗ್ ಸಮೇತ ಪರಾರಿಯಾಗಿದ್ದನು. ಕ್ಲಿನಿಕ್ ನಿಂದ ಬಂದು ನೋಡಿದಾಗ ಬ್ಯಾಗ್ ಜೊತೆ ಆಟೋ ಚಾಲಕ ಪರಾರಿಯಾಗಿದ್ದನ್ನ ಕಂಡ ಪ್ರಯಾಣಿಕರು ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಮಲ್ಲೇಶ್ವರಂ ಪೊಲೀಸರು ಆಟೋ ಚಾಲಕ ರಂಗಸ್ವಾಮಿಯನ್ನ ಬಂಧಿಸಿ 1.5 ಲಕ್ಷ ರೂ ನಗದು, ಆಟೋ ರಿಕ್ಷಾವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಸಿ.ಟಿ.ರವಿಗೆ ಜೆಡಿಎಸ್ ಟಿಕೆಟ್ ಆಫರ್ ಕೊಟ್ಟ ಬಂಡೆಪ್ಪ ಕಾಶೆಂಪೂರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.