Bangalore Crime : ಹೌಸಿಂಗ್ ಸೊಸೈಟಿ ಹೆಸರಲ್ಲಿ ವಂಚನೆ : ಸಿಲಿಕಾನ್‌ ಸಿಟಿಯಲ್ಲಿ ಇಬ್ಬರ ಅರೆಸ್ಟ್  

ಹೌಸಿಂಗ್ ಸೊಸೈಟಿಯೇ ಬೋಗಸ್ ಮಾಡಿ ವಂಚಿಸಿರು ಪ್ರಕರಣ ಸಿಲಿಕಾನ್‌ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೈಟಿ ನಿರ್ದೇಶಕ ಹಾಗೂ ಸಿಇಓರನ್ನ ಬಂಧಿಸಿದ್ದಾರೆ. 

Written by - VISHWANATH HARIHARA | Last Updated : Oct 1, 2022, 07:33 PM IST
  • ಹೌಸಿಂಗ್ ಸೊಸೈಟಿಯೇ ಬೋಗಸ್ ಪ್ರಕರಣ
  • ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು
  • ಸೊಸೈಟಿ ನಿರ್ದೇಶಕ ಹಾಗೂ ಸಿಇಓರನ್ನ ಬಂಧಿಸಿದ್ದಾರೆ.
Bangalore Crime : ಹೌಸಿಂಗ್ ಸೊಸೈಟಿ ಹೆಸರಲ್ಲಿ ವಂಚನೆ : ಸಿಲಿಕಾನ್‌ ಸಿಟಿಯಲ್ಲಿ ಇಬ್ಬರ ಅರೆಸ್ಟ್   title=

ಬೆಂಗಳೂರು : ಹೌಸಿಂಗ್ ಸೊಸೈಟಿಯೇ ಬೋಗಸ್ ಮಾಡಿ ವಂಚಿಸಿರುವ ಪ್ರಕರಣ ಸಿಲಿಕಾನ್‌ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೈಟಿ ನಿರ್ದೇಶಕ ಹಾಗೂ ಸಿಇಓರನ್ನ ಬಂಧಿಸಿದ್ದಾರೆ. 

ಸದ್ಯ ಬೆಂಗಳೂರಲ್ಲಿ ಸೈಟ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದ್ದಂತೆ ಮತ್ತೊಂದು ಕಡೆ  ಭೂಗಳ್ಳರ ಹಾವಳಿ ಹೆಚ್ಚಾಗಿ ನಕಲಿ ದಾಖಲೆ ವೀರರಿಂದ ವಂಚನೆ ಹೆಚ್ಚಾಗುತ್ತಿದೆ. ಹೀಗೆ ವಂಚಿಸಿದ್ದ ಸೊಸೈಟಿಯ ಹಾಲಿ ನಿರ್ದೇಶಕ ಕಂ ಸಿಇಓ ಪ್ರತಾಪ್ ಚಂದ್ ರಾಥೋಡ್ ನ ಅರೆಸ್ಟ್ ಆಗಿದ್ದಾನೆ. ಶೇಷಾದ್ರಿಪುರಂ ರೈಲ್ವೇ ಪ್ಯಾರರಲ್ ರಸ್ತೆಯಲ್ಲಿರುವ ನ್ಯಾಷನಲ್ ಟೆಕ್ನಿಕಲ್ ಇನ್ಸ್ಟಿಟ್ಯೂಷನ್‌ನ ಹೌಸಿಂಗ್ ಸೊಸೈಟಿಯಲ್ಲಿ ಹಾಲಿ ನಿರ್ದೇಶಕರಾಗಿ ಹಾಗೂ ಸಿಇಓ ಆಗಿ ಕೆಲ್ಸ ಮಾಡುತ್ತಿದ್ದ. 

ಇದನ್ನೂ ಓದಿ : ಬೆಂಗಳೂರಿನಲ್ಲಿ ಪುಣೆ ಪೊಲೀಸರ ಕಾರ್ಯಾಚರಣೆ : ಲೋನ್ ಆ‌ಪ್‌ ಕಾಲ್‌ ಸೆಂಟರ್‌ನ 11 ಮಂದಿ ಅರೆಸ್ಟ್..!‌

ಇವರ ಅವಧಿಯಲ್ಲಿ ಎನ್ಐಟಿಯಿಂದ ಕೊಡಿಗೇಹಳ್ಳಿ ಬಳಿ ನಿರ್ಮಿಸಿರುವ ಲೇಔಟ್‌ನಲ್ಲಿ ಬಿಡಿಎ ಅನುಮೋದಿತ ನಕ್ಷೆಯಲ್ಲಿರುವ ನಿವೇಶನಗಳನ್ನ ಮಾರಾಟ ಮಾಡಲು  ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅನುಮತಿಯಿತ್ತು. ಆದರೆ ಬಿಡಿಎ ನಕ್ಷೆಯಲ್ಲಿ ಅನುಮೋದನೆ ಪಡೆಯದೇ ಇರುವ ಸೈಟ್‌ಗಳನ್ನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಅಧ್ಯಕ್ಷ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡಿದ್ದ ಶೇಷಾದ್ರಿಪುರಂ ಪೊಲೀಸರು ತನಿಖೆ ಕೈಗೊಂಡಾಗ ನಕಲಿ ದಾಖಲೆ ಸೃಷ್ಟಿಸಿ ಎನ್ಐಟಿ ಗೃಹ ನಿರ್ಮಾಣ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾರಾಟ ಮಾಡಿರುವ ಅಂಶ ಬೆಳಕಿಗೆ ಬಂದಿದೆ. 

ಈ ಹಿನ್ನೆಲೆ ಸಂಘದ ಹಾಲಿ ನಿರ್ದೇಶಕರಾದ ರಾಮಕೃಷ್ಣರೆಡ್ಡಿ,‌ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಾಪ್ ಚಂದ್ ರಾಥೋಡರನ್ನ ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದಿರುವ ಪೊಲೀಸರು ಇದೇ ರೀತಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಇನ್ನೆಷ್ಟು ಮಂದಿಗೆ ವಂಚಿಸಿದ್ದಾರೆ ಎಂಬುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಅಷ್ಟೇ ಅಲ್ಲದೇ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಮಾಜಿ ಅಧ್ಯಕ್ಷ ಶೃಂಗೇಶ್ವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ : Bangalore : ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News