ಬೆಂಗಳೂರು: ಅದು ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಡಬ್ಬಲ್ ಮರ್ಡರ್ ಪ್ರಕರಣ. ಇದೇ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ.ಹಂತಕರು ಖಾಕಿ ಬಲೆಗೆ ಬಿದ್ದಿದ್ದು ಕ್ಷಣಕ್ಕೊಂದು ಕಥೆ ಹೇಳ್ತಿದ್ದಾರೆ. ಭೀಕರ ಹತ್ಯೆ ದುಡ್ಡಿಗಾಗಿ ನಡೀತಾ ಅಥವಾ ವ್ಯವಹಾರಕ್ಕಾಗಿ, ಇಲ್ಲಾ ಹೆಣ್ಣಿಗಾಗಿ ನಡೀತಾ ಅನ್ನೋದೆ ಕುತೂಹಲ ಮೂಡಿಸ್ತಿದೆ. ಯಾಕೆಂದರೆ ಆರೋಪಿಗಳು ಬೇರೆ ಬೇರೆಯದ್ದೇ ಕಥೆ ಹೇಳೋಕೆ ಶುರುಮಾಡಿದ್ದಾರೆ.
ಇನ್ಸ್ಟಾಗ್ರಾಮ್ ಗೆ ಬಂದ್ರೆ ಸಾಕು ಇವನದ್ದೇ ಆರ್ಭಟ..ಒಮ್ಮೊಮ್ಮೆ ಲವ್ ಟಿಪ್ಸ್ ಕೊಡ್ತಾನೆ..ಕೆಲವೊಮ್ಮೆ ರ್ಯಾಪ್ ಮಾಡ್ತಾನೆ..ಕಟ್ ಮಾಡಿ ನೋಡಿದ್ರೆ ಹಿತವಚನ ನುಡಿತಾನೆ..ಇದೇ ಚಿತ್ರ ವಿಚಿತ್ರ ರೀತಿಯಲ್ಲಿರೊ ಶಬರೀಶ್ ಅಲಿಯಾಸ್ ಜೋಕರ್ ಫಿಲಿಕ್ಸ್ ಇಬ್ಬರ ಹೆಣ ಉರುಳಿಸಿದ್ದಾನೆ. ನಿನ್ನೆ ಸಂಜೆ ಮೂರುವರೆಯಿಂದ ನಾಲ್ಕು ಗಂಟೆ ಸುಮಾರಿಗೆ ಅಮೃತಹಳ್ಳಿಯ ಪಂಪಾನಗರದಲ್ಲಿರುವ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಬಂದಿದ್ದ ಮೂವರು ಆರೋಪಿಗಳು ಎಂಡಿ ಫಣೀಂದ್ರ ಮತ್ತು ಸಿಇಓ ವಿನು ಕುಮಾರ್ ನನ್ನ ಕೊಚ್ಚಿ ಕೊಲೆ ಮಾಡಿದ್ರು.
ಇದನ್ನೂ ಓದಿ: ಕರ್ನಾಟಕದಲ್ಲಿ ಮೊದಲ ಬಾರಿಗೆ ರೂ. 13,666 ಕೋಟಿ ರಾಜಸ್ವ ಕೊರತೆ..!
ನಂತರ ಹಿಂಬದಿ ಗೋಡೆ ಜಂಪ್ ಮಾಡಿ ಟ್ರೈನ್ ನಲ್ಲಿ ತೆರಳಿ ಕುಣಿಗಲ್ ನಲ್ಲಿ ಲಾಡ್ಜ್ ಮಾಡಿಕೊಂಡು ವಾಸವಿದ್ರು. ಅಲ್ಲಿಗೆ ಲಗ್ಗೆ ಇಟ್ಟ ಅಮೃತಹಳ್ಳಿ ಪೊಲೀಸರು ಆರೋಪಿಗಳಾದ ಶಬರೀಷ್ ಅಲಿಯಾಸ್ ಫಿಲಿಕ್ಸ್, ಸಂತೋಷ್ ಮತ್ತು ವಿನಯ್ ಕುಮಾರ್ ನನ್ನ ಬಂಧಿಸಿ ಕರೆತಂದಿದ್ದಾರೆ. ಕೊಲೆಗೆ ಕಾರಣ ಹೆಣ್ಣೋ, ವ್ಯವಹಾರ ವೈಷಮ್ಯವೋ ಎಂಬ ಕನ್ಫ್ಯೂಷನ್ ಪೊಲೀಸರಿಗೆ ಶುರುವಾಗಿದೆ. ಆರೋಪಿ ಫೆಲಿಕ್ಸ್ ಪೊಲೀಸರ ಮುಂದೆ ಕೊಡ್ತಿರೊ ಹೇಳಿಕೆ ಇಂತಹ ಪ್ರಶ್ನೆಯನ್ನ ಹುಟ್ಟು ಹಾಕಿದೆ. ಯಾಕಂದ್ರೆ ಖಾಕಿ ಎದುರು ಕ್ಷಣಕ್ಕೊಂದು ಹೇಳಿಕೆ ನೀಡ್ತಿದ್ದಾನೆ.
ಜೋಕರ್ ಫಿಲಿಕ್ಸ್ ಹೇಳಿಕೆ ಏನು?
ನಾನು, ಫಣೀಂದ್ರ, ವಿನು ಕುಮಾರ್ ಎಲ್ಲರೂ ಬನ್ನೇರುಘಟ್ಟ ರಸ್ತೆಯಲ್ಲಿರುವ ಜಿ ನೆಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ವಿ. ಅದರ ಮಾಲೀಕ ಅರುಣ್ ಕುಮಾರ್ ಆಗಿದ್ದ. 8 ತಿಂಗಳ ಹಿಂದೆ ಫಣೀಂದ್ರ ಮತ್ತು ವಿನು ಕುಮಾರ್ ಅಮೃತಹಳ್ಳಿಯ ಪಂಪಾ ನಗರದಲ್ಲಿ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಶುರು ಮಾಡಿದ್ದರು.ಇದರಿಂದ ಜಿ ನೆಟ್ ಕಂಪನಿ ನಷ್ಟ ಅನುಭವಿಸಿತ್ತು. ಜಿ ನೆಟ್ ನಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿಗಳೆಲ್ಲ ಫಣೀಂದ್ರ ಕಂಪನಿಗೆ ಹೋಗೋಕೆ ಶುರು ಮಾಡಿದರು ಎಂದಿದ್ದಾನೆ.
ಇದೇ ವಿಚಾರವಾಗಿ ಫಣೀಂದ್ರಗೆ ವಾರ್ನ್ ಕೂಡ ಮಾಡಲಾಗಿತ್ತು.ಮಾತು ಕೇಳದಿದ್ದಾಗ ಕೊಲೆ ಮಾಡುವ ನಿರ್ಧಾರ ಮಾಡಿದ್ವಿ ಎಂದಿದ್ದ. ಆದರೆ ಕೆಲ ಹೊತ್ತಲ್ಲಿ ಜಿ ನೆಟ್ ನಲ್ಲಿ ಕೆಲಸ ಮಾಡುವಾಗ ಒಂದು ಹುಡುಗಿ ಜೊತೆಗೆ ನಾನು ಸಲುಗೆಯಿಂದ ಇದ್ದೆ. ಫಣೀಂದ್ರ ಆತನ ಪತ್ನಿಯಿಂದ ವಿಚ್ಛೇದನ ಪಡೆದು ಒಂಟಿಯಾಗಿದ್ದ. ನಾನು ಸಲುಗೆಯಿಂದ ಇದ್ದ ಹುಡುಗಿ ಜೊತೆಗೆ ಆತನೂ ಆತ್ಮೀಯವಾಗಿದ್ದ. ಆಕೆಯನ್ನ ಮಾತನಾಡಿಸೋದು, ಛೇಡಿಸೋದು ಮಾಡ್ತಿದ್ದ. ಇದೇ ವಿಚಾರವಾಗಿ ಈ ಹಿಂದೆ ಕೂಡ ಗಲಾಟೆ ಆಗಿತ್ತು. ಅದೇ ದ್ವೇಷದಿಂದ ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: ಸ್ಟಂಟ್ ಅಳವಡಿಕೆ ನಂತರ ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಆರೋಗ್ಯದಲ್ಲಿ ಚೇತರಿಕೆ
ಇದ್ರಲ್ಲಿ ಸತ್ಯ ಯಾವುದು,ಸುಳ್ಳು ಯಾವುದು ಅನ್ನೋದೆ ಗೊಂದಲದಿಂದ ಕೂಡಿದೆ. ಪೊಲೀಸರ ದಿಕ್ಕು ತಪ್ಪಿಸಲು ಕ್ಷಣಕ್ಕೊಂದು ಹೇಳಿಕೆ ನೀಡ್ತಿದ್ದಾನೆ ಅನ್ನೋದು ಕೂಡ ಸ್ಪಷ್ಟವಾಗ್ತಿದೆ.. ಇದಿಷ್ಟೇ ಅಲ್ಲ ಜಿ ನೆಟ್ ಕಂಪನಿ ಮಾಲೀಕ ಅರುಣ್ ಕೂಡ ಈ ಕೊಲೆ ಕೇಸ್ ನಲ್ಲಿ ಕಾನ್ಸ್ಪರಸಿ ನಡೆಸಿರೋ ಶಂಕೆ ಕೂಡ ಇದೆ.ಮೇಲ್ನೋಟಕ್ಕೆ ವ್ಯವಹಾರ ಸಂಬಂಧ ನಡೆದಿರುವ ಮರ್ಡರ್ ಅನ್ನೋದು ದೃಢವಾಗ್ತಿದೆ.. ಸದ್ಯ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿರುವ ಅಮೃತಹಳ್ಳಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.ವಿಚಾರಣೆ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ಏನು ಅನ್ನೋದು ಗೊತ್ತಾಗಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.