ಗಾಂಜಾ ಪ್ರಕರಣ: ಪಾಳು ಬಿದ್ದ ಕಟ್ಟಡದಲ್ಲಿ ಠಿಕಾಣಿ ಹೂಡಿದ್ದ 12 ಜನರ ಬಂಧನ

ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರಿಗೆ ಸಿಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಒಂದು ಲಕ್ಷ ಮೌಲ್ಯದ ಗಾಂಜಾ, 9 ಮೊಬೈಲ್, ಮೂರು ಬೈಕ್, ಎರಡು ಸಾವಿರ ಹಣ ಒಟ್ಟು 4.52  ಸಾವಿರ ಮೌಲ್ಯದ ಸಾಮಾಗ್ರಿ ಜಪ್ತಿ ಮಾಡಲಾಗಿದೆ. 

Written by - Yashaswini V | Last Updated : Jul 25, 2024, 01:08 PM IST
  • ಹಳೇ ಹುಬ್ಬಳ್ಳಿ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ
  • ಗಾಂಜಾ ಮಾರಾಟ ಮಾಡುತ್ತಿದ್ದ ಹನ್ನೆರಡು ಜನರ ಬಂಧನ`
  • ಹಳೆ ಹುಬ್ಬಳ್ಳಿಯ ಅರವಿಂದ ನಗರದಲ್ಲಿ ನಡೆದ ಘಟನೆ
ಗಾಂಜಾ ಪ್ರಕರಣ: ಪಾಳು ಬಿದ್ದ ಕಟ್ಟಡದಲ್ಲಿ ಠಿಕಾಣಿ ಹೂಡಿದ್ದ 12 ಜನರ ಬಂಧನ title=

Ganja Case:  ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರವಿಂದನಗರದ ಪಿ.ಟಿ.ಕ್ವಾಟರ್ಸ್ ನ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 12ಜನರನ್ನು ಬಂಧಿಸಿ, 1 ಕೆಜಿ 365 ಗ್ರಾಂ ಗಾಂಜಾವಶಪಡಿಸಿಕೊಳ್ಳಲಾಗಿದೆ. 

ಹಳೇಹುಬ್ಬಳ್ಳಿ ಪೊಲೀಸ್ ಠಾಣೆ (Old Hubli Police Station) ಪೊಲೀಸರಿಗೆ ಸಿಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು,  ಒಂದು ಲಕ್ಷ ಮೌಲ್ಯದ ಗಾಂಜಾ (Cannabis), 2 ಲಕ್ಷ ರೂಪಾಯಿ ಮೌಲ್ಯದ 09 ಮೊಬೈಲ್ ಫೋನ್, 1.50 ಲಕ್ಷ ಮೌಲ್ಯದ 3 ಬೈಕ್, 2 ಸಾವಿರ ನಗದು ಸೇರಿದಂತೆ ಒಟ್ಟು 4.52  ಸಾವಿರ ಮೌಲ್ಯದ ಸಾಮಾಗ್ರಿ ಜಪ್ತಿ ಮಾಡಲಾಗಿದೆ. 

ಇದನ್ನೂ ಓದಿ- ಪ್ರೇಯಸಿ ಜೊತೆ ಹೆಡ್‌ಕಾನ್ಸ್‌ಟೇಬಲ್‌ ಲವ್ವಿಡವ್ವಿ..! ಪತ್ನಿ ಕೈಯಲ್ಲಿ ಸಿಕ್ಕಿ ಬಿದ್ದ 'ಪೋಲಿ'ಸಪ್ಪ

ನಗರದ ವಿವಿಧ ಬಡವಾಣೆಯ ಅಭಿಷೇಕ ಹನಮಂತ, ಮಹ್ಮದಆಯಾಜ್ ಜೈನುಲಾಬುದ್ದೀನ, ಇಸ್ಮಾಯಿಲ್ ಮೆಹಬೂಬಾಲಿ, ಜಾಪರ @ ಬಾಂಬೆಜಾಫರ ಮಕ್ಕುಲ್, ಜುಬೇರಹ್ಮದ ದಾದಾಪೀರ, ಪುರಕಾನ್ ನಿಸಾರಹ್ಮದ, ಶಾನವಾಜ ಗೌಸಮೋದಿನ, ಸೋಹಿಲ್ ನಜೀರಹ್ಮದ, ಮಹ್ಮದಸಾಧೀಕ ರೀಯಾಜ, ರೋಶನ್ ಸೋಯಬ@ಬಬ್ಲೂ ಜಮೀಲಾಅಹ್ಮದ್, ಸಲೀಂ ಹಜರತಸಾಬ, ಕರೀಂ ಜಾಂಗೀರಖಾನ ಬಂಧಿತರು.

ಬುಧವಾರ ರಾತ್ರಿ 10:30ರ ಸುಮಾರಿಗೆ ಬಂದ ಮಾಹಿತಿ ಆಧರಿಸಿ ಆರೋಪಿತರನ್ನು ಬಂಧಿಸಿದ್ದು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ತಿಳಿಸಿದ್ದಾರೆ.

ಇದನ್ನೂ ಓದಿ- ಕಲಘಟಗಿ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: 32 ಲಕ್ಷ‌ ರೂ. ಮೌಲ್ಯದ ಅಕ್ರಮ ಸಾರಾಯಿ ಜಪ್ತಿ, ನಾಲ್ವರ ಬಂಧನ

ಹಳೇಹುಬ್ಬಳ್ಳಿ ಠಾಣೆ ಸಿಪಿಐ ಸುರೇಶ ಯಳ್ಳೂರ ಅವರ ತಂಡ ಆರೋಪಿಸಿ ಬಂಧಿಸಿದೆ. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್. ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಇದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News