ಪಿಎಸ್‌ಐ ತಲೆಗೆ ನಕಲಿ ಗನ್ ಇಟ್ಟು ಎಸ್ಕೇಪ್ ಆಗಿದ್ದ ಚಾಲಾಕಿ ಡ್ರಗ್ ಪೆಡ್ಲರ್​ ಬಂಧನ

ವಶಕ್ಕೆ ಪಡೆಯಲು ಬಂದಿದ್ದ ಪಿಎಸ್ಐ​ ತಲೆಗೆ ಮಕ್ಕಳಾಡುವ ಗನ್ ಇಟ್ಟು ಬೆದರಿಸಿ ಪರಾರಿಯಾಗಿದ್ದ ಡ್ರಗ್ ಪೆಡ್ಲರ್‌ನನ್ನು ಹೆಚ್ಎಸ್ಆರ್ ಲೇಔಟ್ ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Written by - Krishna N K | Last Updated : Sep 8, 2022, 02:23 PM IST
  • ಹೆಚ್ಎಸ್ಆರ್ ಲೇಔಟ್ ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ
  • ಪಿಎಸ್ಐ​ ತಲೆಗೆ ನಕಲಿ ಗನ್ ಇಟ್ಟು ಬೆದರಿಸಿ ಪರಾರಿಯಾಗಿದ್ದ ಡ್ರಗ್ ಪೆಡ್ಲರ್‌ ಬಂಧನ
  • ಕೇರಳ ಮೂಲದ ಜಾಫರ್ ಬಂಧಿತ ಆರೋಪಿ
ಪಿಎಸ್‌ಐ ತಲೆಗೆ ನಕಲಿ ಗನ್ ಇಟ್ಟು ಎಸ್ಕೇಪ್ ಆಗಿದ್ದ ಚಾಲಾಕಿ ಡ್ರಗ್ ಪೆಡ್ಲರ್​ ಬಂಧನ  title=

ಬೆಂಗಳೂರು: ವಶಕ್ಕೆ ಪಡೆಯಲು ಬಂದಿದ್ದ ಪಿಎಸ್ಐ​ ತಲೆಗೆ ಮಕ್ಕಳಾಡುವ ಗನ್ ಇಟ್ಟು ಬೆದರಿಸಿ ಪರಾರಿಯಾಗಿದ್ದ ಡ್ರಗ್ ಪೆಡ್ಲರ್‌ನನ್ನು ಹೆಚ್ಎಸ್ಆರ್ ಲೇಔಟ್ ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳ ಮೂಲದ ಜಾಫರ್ ಬಂಧಿತ ಆರೋಪಿ. ಕೇರಳದ ಕುರತಿಕಾಡ್ ಠಾಣೆಯಲ್ಲಿ ದಾಖಲಾಗಿದ್ದ ಎನ್‌ಡಿಪಿಎಸ್ ಪ್ರಕರಣದ ಆರೋಪಿಯಾಗಿದ್ದ ಜಾಫರ್ ನನ್ನ ವಶಕ್ಕೆ ಪಡೆಯಲು ಕೇರಳ ಪೊಲೀಸ್ ಬಂದಿದ್ದರು. ಆಗಸ್ಟ್ 24ರ ರಾತ್ರಿ ಹೆಚ್ಎಸ್ಆರ್ ಲೇಔಟ್ ವ್ಯಾಪ್ತಿಯಲ್ಲಿದ್ದ ಆರೋಪಿಯನ್ನ ವಶಕ್ಕೆ ಪಡೆಯಲು ಯತ್ನಿಸಿದ್ದರು. ಈ ವೇಳೆ ಪಿಎಸ್ಐ ಸುನುಮಾನ್‌ ಎಂಬುವವರಿಗೆ ಸ್ಥಳೀಯ ಅಂಗಡಿಯಲ್ಲಿ ಖರೀದಿಸಿದ್ದ ರಿವಾಲ್ವಾರ್ ತೋರಿಸಿ ತನ್ನ ಸಹಚರನೊಂದಿಗೆ ಕಾರಿನಲ್ಲಿ ಎಸ್ಕೇಪ್ ಆಗುವಲ್ಲಿ ಆರೋಪಿ ಯಶಸ್ವಿಯಾಗಿದ್ದ.

ಇದನ್ನೂ ಓದಿ: ಮುಳುಗಿದ ಜನರಿಗೆ ಸ್ಪಂದಿಸದ ಬಿಜೆಪಿ ʼಜನಸ್ಪಂದನʼ ಸಮಾವೇಶ ಮಾಡುತ್ತಿದೆ

ಘಟನೆ ಸಂಬಂಧ ಕುರತಿಕಾಡ್ ಠಾಣಾ ಪಿಎಸ್ಐ ಸುನುಮಾನ್ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಶಸ್ತ್ರಾಸ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಕೇರಳ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಹೆಚ್ಎಸ್ಆರ್ ಲೇಔಟ್ ಪೊಲೀಸರು ಕೋಲಾರ ಬಳಿ ಆರೋಪಿಯನ್ನ ಬಂಧಿಸಿ ಈಗ ಜೈಲಿಗಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News