ಹ್ಯೂಮನ್ ರೈಟ್ಸ್ ಆಫೀಸರ್ ಹೆಸರಿನಲ್ಲಿ ಹಣ ವಸೂಲಿ: ಆರೋಪಿಗಳ ಬಂಧನ

ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳ ಹೆಸರಲ್ಲಿ  ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ 7 ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Written by - VISHWANATH HARIHARA | Edited by - Puttaraj K Alur | Last Updated : Nov 18, 2022, 03:32 PM IST
  • ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳ ಹೆಸರಲ್ಲಿ ಸಾರ್ವಜನಿಕರಿಂದ ಹಣ ವಸೂಲಿ
  • ಹಣ ಪೀಕುತ್ತಿದ್ದ 7 ಆರೋಪಿಗಳ ಬಂಧಿಸಿದ ಕೊಡಿಗೇಹಳ್ಳಿ ಪೊಲೀಸರು
  • ಬಂಧಿತ ಆರೋಪಿಗಳಿಂದ ಹುಂಡೈ ಕಾರು, 2 ಸಾವಿರ ರೂ. ನಗದು ಸೀಜ್ ಮಾಡಿದ ಖಾಕಿ
ಹ್ಯೂಮನ್ ರೈಟ್ಸ್ ಆಫೀಸರ್ ಹೆಸರಿನಲ್ಲಿ ಹಣ ವಸೂಲಿ: ಆರೋಪಿಗಳ ಬಂಧನ title=
ಖತರ್ನಾಕ್ ಖದೀಮರ ಬಂಧನ!

ಬೆಂಗಳೂರು: ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳ ಹೆಸರಲ್ಲಿ  ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಮೂರ್ತಿ, ಪ್ರದೀಪ್, ಧ್ರುವರಾಜ್, ರಮ್ಯ, ಸುಶ್ಮಿತಾ, ಜಯಲಕ್ಷ್ಮಿ ಮತ್ತು ಇಂದ್ರ ಬಂಧಿತರು.

ಆರೋಪಿಗಳು ಇದೇ ತಿಂಗಳ 14ರಂದು ಭದ್ರಪ್ಪ ಲೇಔಟ್ ಮಾತಾಜಿ ಹೋಂ ಅಪ್ರೈಯನ್ಸ್ ಅಂಗಡಿಗೆ ತೆರಳಿದ್ದರು. ನಾವು ಹ್ಯೂಮನ್ ರೈಟ್ಸ್ ಆಫೀಸರ್‍ಗಳು ಎಂದು ಅಂಗಡಿ ಮಾಲೀಕರಿಗೆ ಹೇಳಿದ್ದ ಅವರು, ನಿಮ್ಮ ಶಾಪ್‌ನಲ್ಲಿ ಗ್ಯಾಸ್‌ ಸಿಲಿಂಡರ್‌ಗಳನ್ನು ಸೇಲ್‌ ಮಾಡುತ್ತಿದ್ದೀರಾ. ನಿಮ್ಮ ಮೇಲೆ ಕೇಸ್ ಹಾಕುತ್ತೇವೆಂದು ಬೆದರಿಸಿ  2 ಸಾವಿರ ರೂ. ಹಣ ಪಡೆದು ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ: Love jihad: 7 ವರ್ಷದ ಮಗು ಬಿಟ್ಟು ನಾಪತ್ತೆಯಾಗಿದ್ದ ಶಿಕ್ಷಕಿ ಪತ್ತೆ, ಪೋಷಕರಿಗೆ ಒಪ್ಪಿಸಿದ ಪೊಲೀಸರು!

ನಂತರ ನರೇಶ್ ಜಿ.ಪಟೇಲ್ ಎಂಬುವರ ರಾಜಲಕ್ಷ್ಮಿ ಫ್ಯಾನ್ಸಿ ಸ್ಟೋರ್ ಮತ್ತು ಸುವಾಲಾಲ್ ಎಂಬುವರ ಬಾಲಾಜಿ ಹೋಂ ಅಪ್ರೈಯನ್ಸ್‌ಗೂ ನುಗ್ಗಿದ್ದ ಆರೋಪಿಗಳು ಹೆದರಿಸಿ ಬೆದರಿಸಿ 5 ಸಾವಿರ ರೂ. ಹಣ ಪಡೆದು ಎಸ್ಕೇಪ್ ಆಗಿದ್ದರು.

ಈ ಬಗ್ಗೆ ಅನುಮಾನ ಬಂದು ವಂಚನೆಗೊಳಗಾದ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದ ಕೊಡಿಗೇಹಳ್ಳಿ ಪೊಲೀಸರು, 7 ಮಂದಿ ಆರೋಪಿಗಳನ್ನು  ಬಂಧಿಸಿದ್ದಾರೆ. ಖತರ್ನಾಕ್ ಖದೀಮರಿಂದ ಕೃತ್ಯಕ್ಕೆ ಬಳಸಿದ್ದ ಹುಂಡೈ ಕಾರು, 2 ಸಾವಿರ ರೂ. ನಗದು ಸೀಜ್ ಮಾಡಲಾಗಿದೆ‌.

ಇದನ್ನೂ ಓದಿ: Road Accident: ವಿದ್ಯಾರ್ಥಿಗಳನ್ನು ಶಾಲೆಗೆ ಹೊತ್ತೊಯ್ಯುತ್ತಿದ್ದ ಖಾಸಗಿ ವಾಹನ ಪಲ್ಟಿ, 07 ಮಕ್ಕಳ ಸ್ಥಿತಿ ಗಂಭೀರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News