ಅಮೆರಿಕಾದಂತೆ ಬೆಂಗಳೂರಲ್ಲಿ ಕಳ್ಳನೋಟಿನ ಜಾಲ: ಸಿಸಿಬಿ ಪೊಲೀಸರು ಶಾಕ್

ರಾಜ್ಯ ರಾಜಧಾನಿಯಲ್ಲಿ ನಕಲಿ ನೋಟು ಪ್ರಿಂಟ್‌ ಮಾಡುತ್ತಿದ್ದ  ಜಾಲ ಪತ್ತೆಯಾಗಿದೆ. ಕಳ್ಳ ನೋಟು ಪ್ರಿಂಟ್ ಮಾಡುತ್ತಿದ್ದ ಗ್ಯಾಂಗ್ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

Written by - VISHWANATH HARIHARA | Edited by - Ranjitha R K | Last Updated : Dec 14, 2022, 01:11 PM IST
  • ಕಳ್ಳ ನೋಟ್‌ ಪ್ರಿಂಟ್‌ ಮಾಡುತ್ತಿದ್ದ ಜಾಲ ಪತ್ತೆ
  • ಹೆಣ್ಣೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳ್ಳದಂಧೆ
  • ದಂಧೆ ನಡೆಸುತ್ತಿದ್ದ ಆರೋಪಿಗಳು ಪರಾರಿ
ಅಮೆರಿಕಾದಂತೆ ಬೆಂಗಳೂರಲ್ಲಿ ಕಳ್ಳನೋಟಿನ ಜಾಲ: ಸಿಸಿಬಿ ಪೊಲೀಸರು ಶಾಕ್ title=

ಬೆಂಗಳೂರು : ಅಸಲಿ ನೋಟಿನ ತಲೆ‌ ಮೇಲೆ ಹೊಡೆದ ಹಾಗೇ ನಕಲಿ ಅಂದರೆ ಕಳ್ಳ ನೋಟ್‌ ಪ್ರಿಂಟ್‌ ಮಾಡುತ್ತಿದ್ದ ದಂಧೆಯನ್ನು ಕೇಂದ್ರಿಯ ಅಪರಾಧ ದಳದ ಪೊಲೀಸರು ಬೇಧಿಸಿದ್ದಾರೆ. ನಗರದ ಹೆಣ್ಣೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳ್ಳದಂಧೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. 

ರಾಜ್ಯ ರಾಜಧಾನಿಯಲ್ಲಿ ನಕಲಿ ನೋಟು ಪ್ರಿಂಟ್‌ ಮಾಡುತ್ತಿದ್ದ  ಜಾಲ ಪತ್ತೆಯಾಗಿದೆ. ಕಳ್ಳ ನೋಟು ಪ್ರಿಂಟ್ ಮಾಡುತ್ತಿದ್ದ ಗ್ಯಾಂಗ್ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಕಳ್ಳ ನೋಟು ಪ್ರಿಂಟ್ ಮಾಡುತ್ತಿದ್ದ ಸ್ಥಳದಲ್ಲಿ ದಾಳಿ ಮಾಡಿದ ಅಧಿಕಾರಿಗಳು ನೋಟು ಪ್ರಿಂಟ್ ಗೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ನೋಟ್ ಪ್ರಿಂಟ್ ಮಾಡಲು ಬಳಸುತ್ತಿದ್ದ ಕಲರ್ ಪ್ರಿಂಟರ್, ಹಣ ಹಾಗೂ ಕೆಮಿಕಲ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 

ಇದನ್ನೂ ಓದಿ : ಮಲೆ ಮಹದೇಶ್ವರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಿಎಂ ಬೊಮ್ಮಾಯಿ

 ಸದ್ಯ  ಈ ದಂಧೆ ನಡೆಸುತ್ತಿದ್ದ ಆರೋಪಿಗಳು ತಲೆಮಾರಿಸಿಕೊಂಡಿದ್ದಾರೆ.  ಒಂದು ನೋಟ್‌ ಕೊಟ್ಟರೆ ನಾಲ್ಕು ನೋಟ್‌ ಆಗುವಷ್ಟು ಬ್ಲ್ಯಾಕ್‌ ಪೇಪರ್‌ ಅಯೋಡಿನ್ ಹಾಗೂ ಬೇರೆ ಕೆಮಿಕಲ್ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳ ಬಳಿ ಇದ್ದ ಸುಮಾರು ಒಂದು  ಕೋಟಿ ಮೌಲ್ಯದ ನಕಲಿ ಭಾರತೀಯ ಹಾಗೂ ವಿದೇಶಿ ನೋಟುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.ಆರೋಪಿಗಳು ಯು ಎಸ್ ಡಾಲರ್ ಪಡೆದು ಬ್ಲಾಕ್ ಪೇಪರ್ ನೀಡುತ್ತಿದ್ದರು ಎನ್ನಲಾಗಿದೆ. 
 
ಸದ್ಯ ಇಂತಹ ದಂಧೆ ಹೆಚ್ಚಾಗಿ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ನಡೆಯುತ್ತಿದೆ. ಆದರೆ ಇದೀಗ ಭಾರತದಲ್ಲಿ ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಕರಾಳ ದಂಧೆ ಶುರುವಾಗಿರುವ ಬಗ್ಗೆ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಗಡಿ ಜಿಲ್ಲೆಯ 1500 ಕ್ಕೂ ಹೆಚ್ಚಿನ ಗ್ರಾಮ ಪಂಚಾಯತಿಗಳ ಅಭಿವೃದ್ಧಿ: ಸಿಎಂ ಬೊಮ್ಮಾಯಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News