ಸೈಕಲ್‌ನಲ್ಲಿ ದೇಶ ಸುತ್ತಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದ: ಕೊನೆಗೆ ಕಳ್ಳನಾಗಿದ್ದು ಯಾಕ್ ಗೊತ್ತಾ!

ಕೈಯಲ್ಲೊಂದು ಜೋಳಿಗೆ ತಲೆಮೇಲೊಂದು ಟೋಪಿ.. ಉದ್ದ ಕೂದಲು.. ಭಕ್ತರ ಸಾಲಿನಲ್ಲಿ ನಿಂತು ಅತ್ತ ಇತ್ತ ಕಣ್ಣು ಹಾಯಿಸ್ತಾನೆ.. ಭಕ್ತಿ ಭಾವದಿಂದ ನಮಿಸ್ತಾನೆ.. ಚಿಲ್ಲರೆ ಹಣವನ್ನ ಕಾಣಿಕೆಯನ್ನಾಗಿ ಹಾಕ್ತಾನೆ.. ಎರಡ್ಮೂರು ನಿಮಿಷ ಆಗ್ತಿದ್ದಂತೆ ಸೀನ್ ಕಂಪ್ಲೀಟ್ ಚೇಂಜ್.. ಕೈ ಮುಗಿದು ದೇವಸ್ಥಾನದಲ್ಲಿನ ದೇವರ ಬೆಳ್ಳಿ ಮುಕುಟವನ್ನೇ ಜೋಳಿಗೆಗೆ ಇಳಿಸಿಕೊಂಡು ಜೈ ಅಂತಾ ಹೊರಟು ಬಿಡ್ತಾನೆ. 

Written by - VISHWANATH HARIHARA | Edited by - Yashaswini V | Last Updated : Jul 7, 2023, 12:28 PM IST
  • ಸೈಕಲ್ ನಲ್ಲಿ ದೇಶ ವಿದೇಶ ಸುತ್ತಿದ ರವಿ ನಾಯ್ಡುಗೆ ಮಹಾರಾಷ್ಟ್ರದ ಬಾಳಾ ಠಾಕ್ರೆ ಬೈಕ್ ಒಂದನ್ನ ಗಿಫ್ಟ್ ಮಾಡಿದ್ರಂತೆ.
  • ಹೀಗೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಾ ಸುತ್ತಾಡುತ್ತಿದ್ದವನಿಗೆ ಊಟಕ್ಕೂ ಪರದಾಡುವಂತಹ ಸ್ಥಿತಿ ಉಂಟಾಗಿಬಿಟ್ಟಿತ್ತು.
  • ಈತನ ನೆರವಿಗೂ ಯಾರೊಬ್ಬರು ನಿಲ್ಲಲಿಲ್ಲ.

Trending Photos

ಸೈಕಲ್‌ನಲ್ಲಿ ದೇಶ ಸುತ್ತಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದ: ಕೊನೆಗೆ ಕಳ್ಳನಾಗಿದ್ದು ಯಾಕ್ ಗೊತ್ತಾ! title=

ಬೆಂಗಳೂರು: ಆತ ಇಡೀ ದೇಶವನ್ನು ಸೈಕಲ್ ನಲ್ಲೇ ಸುತ್ತಿದ್ದವನು. ಮಾರಕ ಖಾಯಿಲೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದವನು. ಆದ್ರೆ ಆತನಿಗೆ ಬಂದ ಸ್ಥಿತಿ ನೋಡಿದ್ರೆ ನಿಜಕ್ಕೂ ಅಯ್ಯೋ‌ ಅನಿಸುತ್ತೆ. ಬೀದಿಗೆ ಬಿದ್ದ ಸಮಾಜ ಸೇವಕ ಕಳ್ಳನಾಗಿದ್ದೇ ದುರಾದೃಷ್ಟ.

ಕೈಯಲ್ಲೊಂದು ಜೋಳಿಗೆ ತಲೆಮೇಲೊಂದು ಟೋಪಿ.. ಉದ್ದ ಕೂದಲು.. ಭಕ್ತರ ಸಾಲಿನಲ್ಲಿ ನಿಂತು ಅತ್ತ ಇತ್ತ ಕಣ್ಣು ಹಾಯಿಸ್ತಾನೆ.. ಭಕ್ತಿ ಭಾವದಿಂದ ನಮಿಸ್ತಾನೆ.. ಚಿಲ್ಲರೆ ಹಣವನ್ನ ಕಾಣಿಕೆಯನ್ನಾಗಿ ಹಾಕ್ತಾನೆ.. ಎರಡ್ಮೂರು ನಿಮಿಷ ಆಗ್ತಿದ್ದಂತೆ ಸೀನ್ ಕಂಪ್ಲೀಟ್ ಚೇಂಜ್.. ಕೈ ಮುಗಿದು ದೇವಸ್ಥಾನದಲ್ಲಿನ ದೇವರ ಬೆಳ್ಳಿ ಮುಕುಟವನ್ನೇ ಜೋಳಿಗೆಗೆ ಇಳಿಸಿಕೊಂಡು ಜೈ ಅಂತಾ ಹೊರಟು ಬಿಡ್ತಾನೆ. 

ಇದನ್ನೂ ಓದಿ- ಜ್ಯೂಸ್ ಮಾದರಿಯಲ್ಲಿ ಡ್ರಗ್ಸ್ ಮಾರುವ ಜಾಲದ ಸದಸ್ಯನ ಬಂಧನ

ಜೂನ್ 28 ರ ರಾತ್ರಿ‌ 9.10 ರ ಸಮಯ. ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ನಂಜಪ್ಪ ಸರ್ಕಲ್ ನಲ್ಲಿರುವ ಕನ್ನಿಕಾಪರಮೇಶ್ವರಿ‌ ದೇವಸ್ಥಾನ. ಈ ದೇವಸ್ಥಾನಕ್ಕೆ ಭಕ್ತನ ಸೋಗಿನಲ್ಲಿ ಬಂದಿದ್ದ ಆಸಾಮಿ ರವಿ ನಾಯ್ಡು. ಒಂದೂವರೆ ಕೆಜಿ‌ ತೂಕದ ದೇವರ ಮುಕುಟವನ್ನ ಎಗರಿಸಿ ಎಸ್ಕೇಪ್ ಆಗಿದ್ದ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ವಿವಿ ಪುರಂ ಪೊಲೀಸರು 100 ಸಿಸಿಟಿವಿ ಪರಿಶೀಲನೆ ನಡೆಸಿ  ಆರೋಪಿ ರವಿ ನಾಯ್ಡು ನನ್ನ ಬಂಧಿಸಿದ್ದಾರೆ. ವಿಪರ್ಯಾಸ ಅಂದ್ರೆ ಇದೇ ರವಿನಾಯ್ಡು 2000 ದಿಂದ 2006 ರ ವರೆಗೆ ಸೈಕಲ್ ನಲ್ಲೇ ದೇಶ ಸುತ್ತಿ ಏಡ್ಸ್ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸಿದ್ದ.

ಸದ್ಯ ರವಿ ನಾಯ್ಡು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಆತನ ಸ್ಥಿತಿ ಕಂಡು ಅಯ್ಯೋ ಅನಿಸಿದೆ. ಸೈಕಲ್ ನಲ್ಲಿ ದೇಶ ವಿದೇಶ ಸುತ್ತಿದ ರವಿ ನಾಯ್ಡುಗೆ ಮಹಾರಾಷ್ಟ್ರದ ಬಾಳಾ ಠಾಕ್ರೆ ಬೈಕ್ ಒಂದನ್ನ ಗಿಫ್ಟ್ ಮಾಡಿದ್ರಂತೆ. ಹೀಗೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಾ ಸುತ್ತಾಡುತ್ತಿದ್ದವನಿಗೆ ಊಟಕ್ಕೂ ಪರದಾಡುವಂತಹ ಸ್ಥಿತಿ ಉಂಟಾಗಿಬಿಟ್ಟಿತ್ತು. ಈತನ ನೆರವಿಗೂ ಯಾರೊಬ್ಬರು ನಿಲ್ಲಲಿಲ್ಲ. ಹೀಗಾಗಿ ಚಿಂದಿ ಆಯುತ್ತಾ ಅದರಿಂದ ಬರುವ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ತಿದ್ದ. ಹೀಗಿದ್ದವನು ಕಳ್ಳತನದ ಹಾದಿ ಹಿಡಿದು ಅಂದರ್ ಆಗಿದ್ದಾನೆ. 

ಇದನ್ನೂ ಓದಿ- ಪೂರಕ ಪರೀಕ್ಷೆಯಲ್ಲಿಯೂ ಫೇಲ್‌ ಆಗಿದ್ದಕ್ಕೆ ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿ..!

ಸದ್ಯ ಬಂಧಿತ ರವಿ ನಾಯ್ಡು ನಿಂದ‌ ಒಂದೂವರೆ ಕೆಜಿ ತೂಕದ ಬೆಳ್ಳಿ ದೇವರ ಮುಕುಟ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸ್ತಿದ್ದಾರೆ. ಸದ್ಯ ಆರೋಪಿ ರವಿ ನಾಯ್ಡು ಜೈಲು ಪಾಲಾಗಿದ್ದು ಆತನ ಬಿಡುಗಡೆ ಬಳಿಕ ವಿವಿ ಪುರಂ ಪೊಲೀಸರು ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು ಊಟ ,ವಸತಿ ನೀಡಲು ಮುಂದಾಗಿದ್ದಾರೆ. ಆದರೆ ಆರೋಪಿಯಾಗಲ್ಲ ಓರ್ವ ಕೆಲಸಗಾರನಾಗಿ. ಸದ್ಯ ರವಿ ಕೂಡ ಠಾಣೆಯಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸಬಹುದು. ಬೀದಿಪಾಲಾಗಿರುವ ರವಿಗೆ ಕೆಲಸ ಕೊಟ್ಟು ಪೊಲೀಸರು ಸದ್ಯ ಮಾನವೀಯತೆ ಮೆರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News