ಬೆಂಗಳೂರು: ಲಿಪ್ ಸ್ಟಿಕ್ ಹಚ್ಚಿಕೊಂಡು ಮಹಿಳೆಯರ ಒಳ ಉಡುಪು ಧರಿಸಿ ವಿಚಿತ್ರ ವರ್ತಿಸುವ ಗಂಡನ ವಿರುದ್ಧ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಅಲ್ಲದೆ ವರದಕ್ಷಿಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿ ಗಂಡ ಹಾಗೂ ಆತನ ಮನೆಯವರ ವಿರುದ್ದವೂ ಸಹ ಹೆಂಡತಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ: ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ : ಈ ಲಿಂಕ್ ಮೂಲಕ ರಿಸಲ್ಟ್ ತಿಳಿಯಿರಿ
25 ವರ್ಷದ ವನುಷಾ ಎಂಬಾಕೆ ದೂರು ನೀಡಿದ ಮೇರೆಗೆ ಪತಿ ಪ್ರಣವ್, ಮಾವ ಮೂರ್ತಿ ಹಾಗೂ ಅತ್ತೆ ಶ್ರೀದೇವಿ ಎಂಬುವರ ವಿರುದ್ಧ ವರದಕ್ಷಣೆ ಕಿರುಕುಳದಡಿ ಎಫ್ಐಆರ್ ದಾಖಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಮ್ಯಾಟ್ರಿಮೋನಿ ಪ್ರಣವ್ ಪರಿಚಯಗೊಂಡಿದ್ದ.ತಾನು ಎಂಟೆಕ್ ಪದವೀಧರ, ಒಳ್ಳೆ ಕೆಲಸದಲ್ಲಿ ಇರುವುದಾಗಿ ಹೇಳಿದ್ದ.ಕ್ರಮೇಣ ಗುರು-ಹಿರಿಯರ ಸಮ್ಮುಖದಲ್ಲಿ 2020ರಲ್ಲಿ ಇಬ್ಬರ ಮದುವೆಯಾಗಿತ್ತು. ವರದಕ್ಷಿಣೆ ರೂಪದಲ್ಲಿ 800 ಗ್ರಾಂ ಚಿನ್ನ, ಒಂದು ಕೆ.ಜಿ.ಬೆಳ್ಳಿ ಹಾಗೂ ಐದು ಲಕ್ಷ ಹಣ ನೀಡಲಾಗಿತ್ತು.
ಇದನ್ನೂ ಓದಿ : ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ಪರೀಕ್ಷಗೂ ಮುನ್ನವೇ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್
ವಿವಾಹವಾದ ಫಸ್ಟ್ ನೈಟ್ ನಲ್ಲಿ ತನ್ನ ಗಂಡ ಕನ್ನಡಿ ಮುಂದೆ ನಿಂತು ಲಿಪ್ ಸ್ಟಿಕ್ ಹಚ್ಚಿಕೊಂಡಿದ್ದ.ಬಳಿಕ ಮಹಿಳೆಯರ ಒಳ ಉಡುಪು ಧರಿಸಿದ್ದ. ಇದನ್ನ ಪ್ರಶ್ನಿಸಿದರೆ ತನಗೆ ಗಂಡಸರು ಎಂದರೆ ತುಂಬಾ ಇಷ್ಟ ಎಂದಿದ್ದಾನೆ. ಇದೇ ವೇಳೆ ಲಾಕ್ ಡೌನ್ ಆದ ಹಿನ್ನೆಲೆ ಗಂಡನ ವಿಚಾರವಾಗಿ ಪ್ರತಿದಿನ ಜಗಳವಾಗುತಿತ್ತು.ಅತ್ತೆ-ಮಾವ ಸಹ ನನಗೆ ಜಿರಳೆ ಚೌಷಧಿ ಸಿಂಪಡಿಸಿ ಅನಾರೋಗ್ಯಕ್ಕೆ ಕಾರಣವಾಗಿದ್ದರು. ಪ್ರತಿದಿನ ಪತಿಯ ವಿಚಿತ್ರ ವರ್ತನೆ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ತೋರಿಸಲು 10 ಲಕ್ಷ ಹಣ ತೆಗೆದುಕೊಂಡು ಬರುವಂತೆ ಪೀಡಿಸುತ್ತಿದ್ದರು.ಕಿರುಕುಳ ತಾಳಲಾರದೆ ಮನೆಯಿಂದ ಹೊರಬಂದು ಸೋದರಮಾವನ ಮನೆಯಲ್ಲಿ ವಾಸ್ತವ್ಯ ಹೂಡಿದರೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾಳೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.