ಬೆಂಗಳೂರು: ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಟಿಎಂ ಲೇಔಟ್ ಪಿಜಿ ಒಂದರಲ್ಲಿ ಕೇರಳ ಮೂಲದ ಯುತಿಯೊಬ್ಬಳು ತನ್ನ ಜೊತೆಗಿದ್ದ ವೈದ್ಯೆ ಕನ್ನಡ ಮಾತನಾಡಿದ್ದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಸದ್ಯ ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಜನವರಿ 10ನೇ ತಾರೀಖು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಕುರಿತು ನೊಂದ ಯುವತಿ ಡಾ.ಸೃಷ್ಟಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ- WATCH : ನಡುರಸ್ತೆಯಲ್ಲಿ ಯುವತಿಗೆ ಹೆಲ್ಮೆಟ್‌ನಿಂದ ಹಿಗ್ಗಾಮುಗ್ಗ ಹೊಡೆದ ಯುವಕ, ವಿಡಿಯೋ ವೈರಲ್
ಕೇರಳ ಮೂಲದ ಅಶೀಲಾ ಮತ್ತು ಕರ್ನಾಟಕ ಮೂಲದ ಡಾ. ಸೃಷ್ಟಿ ಎಂಬವರು ಪಿಜಿ ಒಂದರಲ್ಲಿ ಸುಮಾರು ಆರು ತಿಂಗಳಿಂದ ವಾಸವಾಗಿದ್ದರು. ಕಳೆದ ಜನವರಿ 10 ರಂದು ಮಧ್ಯರಾತ್ರಿ ಎರಡು ಗಂಟೆಯಿಂದ 3 ಗಂಟೆವರೆಗೆ ಅಶೀಲಾ ಹುಡುಗನ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದಳಂತೆ. ಈ ವೇಳೆ ವೈದ್ಯೆ ನಿದ್ದೆಯಲ್ಲಿ ಇರುವಾಗ ಅಸಭ್ಯವಾಗಿ ವಿಡಿಯೋ ತೋರಿಸಿದನ್ನ ಕಂಡು ಪ್ರಶ್ನೆ ಮಾಡಿದ್ದಕ್ಕೆ ಅಶೀಲಾ ವೈದ್ಯೆ ಡಾ. ಸೃಷ್ಟಿ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ- 30 ಮಂದಿ ಚರಂಡಿಯಲ್ಲಿದ್ದೇವೆ ಕಾಪಾಡಿ!: ಗಾಂಜಾ ಮತ್ತಿನಲ್ಲಿದ್ದವನ ಮಾತಿಗೆ ಹೈರಾಣದ ಅಗ್ನಿಶಾಮಕ ಸಿಬ್ಬಂದಿ
ಇನ್ನು ಕೇರಳ ಮೂಲದ ಅಶೀಲಾ ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಎಚ್ ಆರ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ. ವೈದ್ಯೆ ಡಾ. ಸೃಷ್ಟಿ ಬೆಂಗಳೂರಿನ ಬಿಬಿಎಂಪಿ ಕಚೇರಿಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಘಟನೆಯ ಬಗ್ಗೆ ಸೃಷ್ಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಲ್ಲದೆ, ಹಲ್ಲೆ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.