ಮೊಬೈಲ್ ಕಳೆದು ಹೋದ್ರೆ ಪೊಲೀಸ್ ಠಾಣೆಗೆ ಹೋಗಬೇಡಿ: ಹೀಗೆ ಮಾಡಿದ್ರೆ ಸಾಕು ನಿಮ್ಮ ಮೊಬೈಲ್ ಸಿಗುತ್ತೆ..!

Lost Phone Solutions: ನಿಮ್ಮ ಮೊಬೈಲ್ ಕಳೆದುಹೋಗಿದೀಯಾ..? ಹಾಗಾದ್ರೆ ಇನ್ಮುಂದೆ ನೀವು ಭಯಪಡುವ ಅವಶ್ಯಕತೆ ಇಲ್ಲಾ‌.    

Written by - VISHWANATH HARIHARA | Last Updated : Mar 13, 2024, 12:13 PM IST
  • ಮೊಬೈಲ್ ಕಳೆದುಹೋಗಿದೀಯಾ..?
  • ಇನ್ಮುಂದೆ ನೀವು ಭಯಪಡುವ ಅವಶ್ಯಕತೆ ಇಲ್ಲಾ
  • ಜಸ್ಟ್ ಒಂದು ಮೇಸೆಜ್ ಮಾಡಿದ್ರೆ ಸಾಕು!
ಮೊಬೈಲ್ ಕಳೆದು ಹೋದ್ರೆ ಪೊಲೀಸ್ ಠಾಣೆಗೆ ಹೋಗಬೇಡಿ: ಹೀಗೆ ಮಾಡಿದ್ರೆ ಸಾಕು ನಿಮ್ಮ ಮೊಬೈಲ್ ಸಿಗುತ್ತೆ..! title=

ಬೆಂಗಳೂರು: ನಿಮ್ಮ ಮೊಬೈಲ್ ಕಳೆದುಹೋಗಿದೀಯಾ..? ಮನೆಯಲ್ಲಿ ಇಟ್ಟಾಗ ಮಿಸ್ ಆಗಿದೆಯಾ..? ಬಸ್ ನಲ್ಲಿ ಕಳ್ಳತನವಾಗಿದೇಯಾ..?  ಹಾಗಾದ್ರೆ ಇನ್ಮುಂದೆ ನೀವು ಭಯಪಡುವ ಅವಶ್ಯಕತೆ ಇಲ್ಲಾ‌. ಜಸ್ಟ್ ಒಂದು ಮೇಸೆಜ್ ಮಾಡಿದ್ರೆ ಸಾಕು ನಿಮ್ಮ ಮೊಬೈಲ್ ನಿಮ್ಮ ಕೈ ಸೇರುತ್ತೆ. 

ಹೌದು  ಮೊಬೈಲ್ ಕಳೆದುಹೋಗಿದೆ ಅಂತಾ ಠಾಣೆಗೆ ಹೋದ್ರೆ ಮೊಬೈಲ್ ಕೇಸು ಅಂತ ಪೊಲೀಸ್ರು ಸರಿಯಾಗಿ ರೆಸ್ಪಾನ್ಸ್ ಮಾಡಲ್ಲ ಅಂತ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಇನ್ನೂ ಪೊಲೀಸ್ ಸ್ಟೇಷನ್ ಗೆ ದೂರು ಕೊಟ್ರೆ ಅವ್ರು  ಹುಡುಕಲ್ಲ.  ಟೈಮ್ ವೇಸ್ಟ್ ಅಂತ ಅದೆಷ್ಟೋ ಜನ ಸುಮ್ಮನಾಗುತ್ತಾರೆ. ಆದರೆ ಇನ್ನೂ ಮುಂದೆ ಹಾಗಾಗಲ್ಲ. 

ಇದನ್ನೂ ಓದಿ : ಜಗಳ ಬಿಡಿಸಿದ ಕಾರಣಕ್ಕೆ ದೋಸೆ ಹಂಚಿನಿಂದ ಹೊಡೆದು ಮಹಿಳೆಯ ಕೊಲೆ 

ಮೊಬೈಲ್ ಮಿಸ್ ಆದರೆ ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಬಗ್ಗೆ ದೂರು ನೀಡಬಹುದು.  ನೀವು ಮಾಡಬೇಕಿರೋದು ಇಷ್ಟೇ 94492 95555 ಮೊಬೈಲ್ ನಂಬರ್ ಗೆ ಜಸ್ಟ್ ವಾಟ್ಸ್ ಆಪ್ ನಲ್ಲಿ ಹಾಯ್ ಅಂತಾ ಮೆಸೇಜ್ ಕಳುಹಿಸಬೇಕು. ಈ ವ್ಯವಸ್ಥೆಗೆ ಪೊಲೀಸ್ ಇಲಾಖೆ ಈ ಸ್ಪಂದನ ಅಂತ ಹೆಸರಿಟ್ಟಿದ್ದು ಈ ಕಾರ್ಯಕ್ರಮವನ್ನ ಖುದ್ದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಇದೇ ತಿಂಗಳ 6ನೇ ತಾರೀಖು ಚಾಲನೇ ನೀಡಿದ್ದಾರೆ. 

ಇನ್ನೂ ಮೇಲಿನ ಮೊಬೈಲ್ ನಂಬರ್ ಗೆ ಮೇಸೇಜ್ ಮಾಡಿದ ಕೆಲ ಸೆಕೆಂಡ್ ನಲ್ಲಿ ಒಂದು ಡಿಜಿಟಲ್ ಅರ್ಜಿ ಬರುತ್ತೆ. ಇದರಲ್ಲಿ ನಿಮ್ಮ  ನಿಮ್ಮ ಹೆಸರು, ಮೊಬೈಲ್ ನಂಬರ್, ಐಎಂಇಐ ನಂಬರ್ ಸೇರಿ ಕೆಲ ಮಾಹಿತಿ ಕೇಳಲಾಗುತ್ತೆ. ಈ ಮಾಹಿತಿ ಪೂರ್ಣಗೊಳಿಸಿ ಮತ್ತೆ ಅದೇ ನಂಬರ್ ಗೆ ಸೆಂಡ್ ಮಾಡಿದ್ರೆ ಸಾಕು, ನೀವು ಮರೆತರು ಪೊಲೀಸರು ಮಾತ್ರ ನಿಮ್ಮ ಫೋನ್ ಮೇಲೆ ನಿಗಾ ಇಟ್ಟಿರುತ್ತಾರೆ. 

ಇದನ್ನೂ ಓದಿ : ಸರ್ಕಾರಿ ಬಸ್‌ನಲ್ಲಿ ಮಹಿಳೆಯ ಚಿನ್ನಾಭರಣ ಕಳ್ಳತನ: ಪ್ರಕರಣ ತಡವಾಗಿ ಬೆಳಕಿಗೆ

ಇನ್ನೂ  ಕಾರ್ಯಕ್ರಮವನ್ನ ಈ ಹಿಂದೆ ಹಿರಿಯ ಐಪಿಎಸ್ ಅಧಿಕಾರಿ ರಮನ್ ಗುಪ್ತಾ ಹುಬ್ಬಳ್ಳಿ-ಧಾರವಾಡ ಕಮಿಷನರ್ ಆಗಿದ್ದ ಯಶಸ್ವಿಗೊಳಿಸಿದ್ದರು. ಸದ್ಯ ನಗರದಲ್ಲೂ ಈ ಕಾರ್ಯಕ್ರಮ ಜಾರಿಗೆ ತರಲಾಗಿದ್ದು, ಬೆಂಗಳೂರಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News