ಜಗಳ ಬಿಡಿಸಿದ ಕಾರಣಕ್ಕೆ ದೋಸೆ ಹಂಚಿನಿಂದ ಹೊಡೆದು ಮಹಿಳೆಯ ಕೊಲೆ

Hassan Crime News : ಜಗಳ ಬಿಡಿಸಿದ ಕಾರಣಕ್ಕೆ ದೋಸೆ ಹಂಚಿನಿಂದ ಹೊಡೆದು ಮಹಿಳೆಯನ್ನು ಕೊಲೆ ಮಾಡಿದ ಘಟನೆ ಹಾಸನ ಜಿಲ್ಲೆಯಲ್ಲಿ ಜರುಗಿದೆ.

Written by - Chetana Devarmani | Last Updated : Mar 13, 2024, 10:56 AM IST
  • ಜಗಳ ಬಿಡಿಸಿದ್ದೇ ತಪ್ಪಾಯ್ತಾ?
  • ದೋಸೆ ಹಂಚಿನಿಂದ ಹೊಡೆದು ಮಹಿಳೆಯ ಕೊಲೆ
  • ಹಾಸನ ಜಿಲ್ಲೆಯಲ್ಲಿ ನಡೆದ ಘಟನೆ
ಜಗಳ ಬಿಡಿಸಿದ ಕಾರಣಕ್ಕೆ ದೋಸೆ ಹಂಚಿನಿಂದ ಹೊಡೆದು ಮಹಿಳೆಯ ಕೊಲೆ title=

ಹಾಸನ: ಜಗಳ ಬಿಡಿಸಿದ ಕಾರಣಕ್ಕೆ ದೋಸೆ ಹಂಚಿನಿಂದ ಹೊಡೆದು ಮಹಿಳೆಯನ್ನು ಕೊಲೆ ಮಾಡಿದ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ಕಾಡನೂರು ಗ್ರಾಮದಲ್ಲಿ ಜರುಗಿದೆ. ಶಿವಮ್ಮ (38) ಕೊಲೆಯಾದ ಮಹಿಳೆ.

ಕುಮಾರ ಎಂಬಾತ ಶಿವಮ್ಮನ್ನನ್ನು ದೋಸೆ ಹಂಚಿನಿಂದ ಹೊಡೆದ ಕೊಲೆ ಮಾಡಿದ್ದಾನೆ. ಶೀವಮ್ಮ ಮತ್ತು ಕುಟುಂಬದವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಮಾರ್ಚ್‌ 9 ರಂದು ಕೂಲಿ ಕೆಲಸಕ್ಕೆ ತೆರಳಿದ್ದ ಶಿವಮ್ಮನ ಮಗ ಜಗದೀಶ್ ಹೋಗಿದ್ದರು.

ಇದನ್ನೂ ಓದಿ : ದಾವಣಗೆರೆಯಲ್ಲಿ 109.84 ಕೋಟಿ ವೆಚ್ಚದ ನೂತನ KSRTC ಬಸ್ ನಿಲ್ದಾಣದ ನಿರ್ಮಾಣ

ರಾತ್ರಿ 11 ಗಂಟೆ ಸಮಯದಲ್ಲಿ ಶಿವಮ್ಮ ಒಬ್ಬರೇ ಮನೆಯಲ್ಲಿದ್ದರು. ಶಿವಮ್ಮ ಪಕ್ಕದ ಮನೆಯಲ್ಲಿ ವಾಸವಿದ್ದ ಸಂಬಂಧಿ ಜಯಮ್ಮ‌ ಹಾಗೂ ಪುತ್ರ ಕುಮಾರನ ಮಧ್ಯೆ ಜಗಳ ನಡೆಯುತ್ತಿತ್ತು. ಮಾ.9 ರಂದು ರಾತ್ರಿ ಕುಮಾರ ತಾಯಿಯೊಂದಿಗೆ ಜಗಳವಾಡುತ್ತಿದ್ದ. 

ಇದನ್ನು ಕಂಡು ಮಧ್ಯ ಪ್ರವೇಶಿಸಿದ ಶಿವಮ್ಮ, ಮನೆಯ ಬಳಿ ಹೋಗಿ ಜಗಳ ಬಿಡಿಸಿ ಕುಮಾರನಿಗೆ ಬುದ್ಧಿವಾದ ಹೇಳಿದ್ದರು. ಇದೇ ಕಾರಣಕ್ಕೆ ಕುಮಾರನಿಗೆ ಶಿವಮ್ಮನ ಮೇಲೆ ಸಿಟ್ಟಿತ್ತು. ಅವಾಚ್ಯ ಶಬ್ದಗಳಿಂದ ನಿಂದಿಸಿ ದೋಸೆ ಹಂಚಿನಿಂದ ಶಿವಮ್ಮನ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡು ಶಿವಮ್ಮ ಕುಸಿದು ಬಿದ್ದಿದ್ದಾರೆ. 

ಶಿವಮ್ಮ ಅವರನ್ನು ಕೊಣನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಿವಮ್ಮ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ : ಚುನಾವಣೆ ಹೊಂದಾಣಿಕೆಗಾಗಿ ತಮಿಳುನಾಡಿಗೆ ಕಾವೇರಿ ನೀರು: ಸರ್ಕಾರದ ವಿರುದ್ಧ ಆರ್ ಅಶೋಕ್ ಆಕ್ರೋಶ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News