ಪ್ರೀತಿ ಮಾಯೆ ಹುಷಾರು: ಲವ್ ಫೆಲ್ಯೂರ್ ಆಗಿದ್ದಕ್ಕೆ 4 ವರ್ಷದಲ್ಲಿ 215 ಕೊಲೆ..!

2018ರಿಂದ 2022ರವರೆಗೆ ರಾಜ್ಯದಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ 215 ಮರ್ಡರ್ ಕೇಸ್ ಗಳು ಪ್ರೀತಿ-ಪ್ರೇಮದ ವಿಚಾರಕ್ಕಾಗಿಯೇ ನಡೆದಿವೆ. ವರ್ಷಕ್ಕೆ ಸರಾಸರಿ 43 ಕೇಸ್ ಗಳು‌ ಲವ್ ಕಾರಣಕ್ಕಾಗಿ ನಡೆದಿವೆ. 2018ರಲ್ಲಿ 60 ಕೊಲೆಗಳು ಪ್ರೀತಿಗಾಗಿಯೇ ನಡೆದಿದೆ.   

Written by - VISHWANATH HARIHARA | Edited by - Yashaswini V | Last Updated : Jan 10, 2023, 03:05 PM IST
  • ಇತ್ತೀಚಿನ ದಿನಗಳಲ್ಲಿ ಪ್ರೀತಿ ಎಂಬ ಮಾಯಾಜಾಲಕ್ಕೆ ಸಿಲುಕುವ ಯುವ ಜನಾಂಗ ತಮಗೆ ಗೊತ್ತು-ಗೊತ್ತಿಲ್ಲದೆಯೋ ಅಪರಾಧ‌ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.
  • ಒಂದು ಕ್ಷಣ ಆಲೋಚಿಸದೆ ಲವ್ ಗಾಗಿ ಮರ್ಡರ್ ಮಾಡುವಂತಹ ಕೃತ್ಯಕ್ಕೆ ಇಳಿದು ಮಾರ್ಗ ಹಿಡಿದು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.
  • ಪ್ರೀತಿಸುತ್ತಿದ್ದ ಹುಡುಗಿ ಬೇರೆಯವನೊಂದಿಗೆ ಸುತ್ತಾಡುತ್ತಿದ್ದಾಳೋ ಎಂಬ ಕಾರಣಕ್ಕೋ ಅಥವಾ ತಮ್ಮ‌ ಪ್ರೀತಿಗೆ ಅಡ್ಡಿಬಂದವರನ್ನು ಹತ್ಯೆ ಮಾಡುವ ಹೇಯ ಕೃತ್ಯಕ್ಕೂ ಯುವ ಜನಾಂಗ ಹಿಂದೇಟು ಹಾಕುತ್ತಿಲ್ಲ.
ಪ್ರೀತಿ ಮಾಯೆ ಹುಷಾರು: ಲವ್ ಫೆಲ್ಯೂರ್ ಆಗಿದ್ದಕ್ಕೆ 4 ವರ್ಷದಲ್ಲಿ 215 ಕೊಲೆ..! title=
Murder

ಬೆಂಗಳೂರು: ಪ್ರೀತಿಯಲ್ಲಿ ಬಿದ್ದರೆ ಲೋಕವೇ ಕಾಣಲ್ಲ ಎಂಬ ಮಾತಿದೆ. ಲವ್ ಫೆಲ್ಯೂರ್ ಆದರೆ ಸಾಕು ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸವನ್ನು ಅನೇಕರು ಮಾಡುತ್ತಾರೆ. ಪ್ರೇಮ ವೈಫಲ್ಯ ಅಥವಾ ತನ್ನ ಪ್ರೀತಿ ಬೇರೆಯವರ ಪಾಲಾಗುತ್ತಿದೆ ಎಂಬ ನೋವಿನಿಂದ ಆಕ್ರೋಶಗೊಂಡು ಪ್ರೀತಿಸಿದವರನ್ನು ಕೊಲೆ  ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬತೆ ಕಳೆದ ನಾಲ್ಕು ವರ್ಷಗಳಲ್ಲಿ ನಡೆದ‌ ಹತ್ಯೆಗಳ ಪೈಕಿ 215 ಕೊಲೆಗಳು ಪ್ರೀತಿಗಾಗಿ ಎಂಬ ಅಂಶ ಗೊತ್ತಾಗಿದೆ. 

2018ರಿಂದ 2022ರವರೆಗೆ ರಾಜ್ಯದಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ 215 ಮರ್ಡರ್ ಕೇಸ್ ಗಳು ಪ್ರೀತಿ-ಪ್ರೇಮದ ವಿಚಾರಕ್ಕಾಗಿಯೇ ನಡೆದಿವೆ. ವರ್ಷಕ್ಕೆ ಸರಾಸರಿ 43 ಕೇಸ್ ಗಳು‌ ಲವ್ ಕಾರಣಕ್ಕಾಗಿ ನಡೆದಿವೆ. 2018ರಲ್ಲಿ 60 ಕೊಲೆಗಳು ಪ್ರೀತಿಗಾಗಿಯೇ ನಡೆದಿದೆ. ಇನ್ನೂ ಕೋವಿಡ್ ಸೋಂಕು ಉನ್ನತ ಸ್ಥಿತಿಯಲ್ಲಿದ್ದ ಸಮಯ ಅಂದರೆ 2020 ರಲ್ಲಿ ಪಗಾಲ್ ಪ್ರೇಮಿಗಳಿಂದ 60 ಕೊಲೆಯಾಗಿವೆ ಎಂಬುದು ಪೊಲೀಸ್ ದಾಖಲೆಗಳಿಂದ ತಿಳದು ಬಂದಿದೆ.

ಇದನ್ನೂ ಓದಿ- 30 ಮಂದಿ ಚರಂಡಿಯಲ್ಲಿದ್ದೇವೆ ಕಾಪಾಡಿ!: ಗಾಂಜಾ ಮತ್ತಿನಲ್ಲಿದ್ದವನ ಮಾತಿಗೆ ಹೈರಾಣದ ಅಗ್ನಿಶಾಮಕ ಸಿಬ್ಬಂದಿ

ಇತ್ತೀಚಿನ ದಿನಗಳಲ್ಲಿ  ಪ್ರೀತಿ ಎಂಬ ಮಾಯಾಜಾಲಕ್ಕೆ ಸಿಲುಕುವ ಯುವ ಜನಾಂಗ ತಮಗೆ ಗೊತ್ತು-ಗೊತ್ತಿಲ್ಲದೆಯೋ ಅಪರಾಧ‌ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಒಂದು ಕ್ಷಣ ಆಲೋಚಿಸದೆ ಲವ್ ಗಾಗಿ ಮರ್ಡರ್ ಮಾಡುವಂತಹ ಕೃತ್ಯಕ್ಕೆ ಇಳಿದು ಮಾರ್ಗ ಹಿಡಿದು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರೀತಿಸುತ್ತಿದ್ದ ಹುಡುಗಿ ಬೇರೆಯವನೊಂದಿಗೆ ಸುತ್ತಾಡುತ್ತಿದ್ದಾಳೋ ಎಂಬ ಕಾರಣಕ್ಕೋ ಅಥವಾ ತಮ್ಮ‌ ಪ್ರೀತಿಗೆ ಅಡ್ಡಿಬಂದವರನ್ನು ಹತ್ಯೆ ಮಾಡುವ ಹೇಯ ಕೃತ್ಯಕ್ಕೂ ಯುವ ಜನಾಂಗ ಹಿಂದೇಟು ಹಾಕುತ್ತಿಲ್ಲ. ಹೆಚ್ಚಾಗಿ ಪ್ರೀತಿ ನಿರಾಕರಿಸುವ ಯುವತಿಯರ ಮೇಲೆ ಯುವಕರು ಕೋಪದ ಕೈಗೆ ಬುದ್ದಿ ಕೊಟ್ಟು ಹತ್ಯೆ ಮಾಡುತ್ತಿದ್ದಾರೆ. ಇದೇ ತರ ಕಳೆದ ವರ್ಷ ಏಪ್ರಿಲ್ 28ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವತಿ ಮೇಲೆ ನಾಗರಾಜ್ ಎಂಬಾತ ಆ್ಯಸಿಡ್ ಎರಚಿ ವಿಕೃತಿ ಮೆರೆದು ಜೈಲು ಸೇರಿದ್ದ. ಅದೃಷ್ಟವಶಾತ್ ಸಂತ್ರಸ್ತೆ ಚಿಕಿತ್ಸೆ ಪಡೆದುಕೊಂಡು ಸದ್ಯ ಚೇತರಿಸಿಕೊಳ್ಳುತ್ತಿದ್ದಾಳೆ. 

ಇದನ್ನೂ ಓದಿ- WATCH : ನಡುರಸ್ತೆಯಲ್ಲಿ ಯುವತಿಗೆ ಹೆಲ್ಮೆಟ್‌ನಿಂದ ಹಿಗ್ಗಾಮುಗ್ಗ ಹೊಡೆದ ಯುವಕ, ವಿಡಿಯೋ ವೈರಲ್‌

ಇದೇ ರೀತಿ ಕಳೆದ ಡಿಸೆಂಬರ್ 22ರಂದು ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿನಿ ಲಯಸ್ಮಿತಾ ಎಂಬಾಕೆ ತನ್ನ ಜೊತೆ ಬ್ರೇಕಪ್ ಮಾಡಿಕೊಂಡು ಬೇರೆಯವನನ್ನು ಪ್ರೀತಿಸುತ್ತಿದ್ದಾಳೆ ಎಂದು ರೊಚ್ಚಿಗೆದ್ದ ಪಗಾಲ್ ಪ್ರೇಮಿಯೊಬ್ಬ ಕಾಲೇಜು ಅವರಣದಲ್ಲೇ ಚಾಕು ಚುಚ್ಚಿ  ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಭವಿಷ್ಯ ರೂಪಿಸಿಕೊಳ್ಳುವ ವಯಸ್ಸಲ್ಲಿ  ಲವ್, ಸಿನಿಮಾ ಅಂತಾ ಸುತ್ತುತ್ತಿರುವ ಯುವ ಜನತೆ ಪ್ರೀತಿ ಕೈಕೊಟ್ಟಾಗ ಏನ್ ಬೇಕಾದ್ರೂ ಮಾಡುವ ಸ್ಥಿತಿಗೆ ಬಂದು ನಿಂತಿದ್ದಾರೆ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ತಪ್ಪು-ಸರಿ ಬಗ್ಗೆ ಬುದ್ದಿ ಹೇಳಿ ಜೀವನ ರೂಪಿಸಿಕೊಳ್ಳುವಂತೆ ತಿಳಿ ಹೇಳಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News