/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ರಸ್ತೆಯಲ್ಲಿ ಬೊಗಳಿದ ಬೀದಿ ನಾಯಿ: ಶ್ವಾನದ ಮಾಲೀಕನೆಂದು ಭಾವಿಸಿ ವ್ಯಕ್ತಿಗೆ ಚಾಕು ಇರಿದ ಆಸಾಮಿ

Bengaluru Crime News : ತಕ್ಷಣ ಗಾಯಗೊಂಡಿದ್ದ ಬಾಲಸುಬ್ರಹ್ಮಣ್ಯ ಚಿಕಿತ್ಸೆ ಪಡೆದುಕೊಂಡು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

Written by - VISHWANATH HARIHARA | Edited by - Zee Kannada News Desk | Last Updated : Aug 28, 2023, 02:33 PM IST
  • ರಸ್ತೆಯಲ್ಲಿ ಬೊಗಳಿದ ಬೀದಿ ನಾಯಿ
  • ಮಾಲೀಕನೆಂದು ಭಾವಿಸಿ ವ್ಯಕ್ತಿಗೆ ಚಾಕು ಇರಿತ
  • ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ರಸ್ತೆಯಲ್ಲಿ ಬೊಗಳಿದ ಬೀದಿ ನಾಯಿ: ಶ್ವಾನದ ಮಾಲೀಕನೆಂದು ಭಾವಿಸಿ ವ್ಯಕ್ತಿಗೆ ಚಾಕು ಇರಿದ ಆಸಾಮಿ title=

ಬೆಂಗಳೂರು : ರಸ್ತೆಯಲ್ಲಿ ನಾಯಿ ಬೊಗಳಿದ್ದಕ್ಕೆ ಸಿಟ್ಟಿಗೆದ್ದು ಅದರ ಮಾಲೀಕನೆಂದು ಭಾವಿಸಿ ಮತ್ತೊಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಬಾಲಸುಬ್ರಹ್ಮಣ್ಯ ಎಂಬಾತನಿಗೆ ಚಾಕುವಿನಿಂದ ಇರಿದಿದ್ದ ರಾಜು ಎಂಬ ಆಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: 9 ವರ್ಷಗಳಿಂದ ಶಾಲೆಗೆ ಚಕ್ಕರ್, ಸಂಬಳಕ್ಕೆ ಹಾಜರ್: ಸರ್ಕಾರಿ ಶಾಲಾ ಶಿಕ್ಷಕನ ಕಳ್ಳಾಟ! 

ಕಳೆದ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಮಲ್ಲೇಶ್ವರಂನ 8ನೇ ಮುಖ್ಯ ರಸ್ತೆಯ ಗಣೇಶ ದೇವಸ್ಥಾನದ ಬಳಿ ಬಾಲಸುಬ್ರಹ್ಮಣ್ಯ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅವರ ಹಿಂದೆ ಬರುತ್ತಿದ್ದ ಬೀದಿ ನಾಯಿ ಎದುರಿಗೆ ಬರುತ್ತಿದ್ದ ರಾಜು ಎಂಬಾತನನ್ನು ನೋಡಿ ಬೊಗಳಿತ್ತು. ಇದರಿಂದ ಸಿಟ್ಟಿಗೆದ್ದ ರಾಜು ಬಾಲಸುಬ್ರಹ್ಮಣ್ಯರನ್ನೇ ನಾಯಿಯ ಮಾಲೀಕನೆಂದು ಭಾವಿಸಿ ಜಗಳ ಆರಂಭಿಸಿದ್ದ. 

ಏಕಾಏಕಿ ಬಾಲಸುಬ್ರಹ್ಮಣ್ಯರ ಕೆನ್ನೆ, ಕಿರುಬೆರಳಿಗೆ ಚಾಕುವಿನಿಂದ ಇರಿದಿದ್ದ. ತಕ್ಷಣ ಗಾಯಗೊಂಡಿದ್ದ ಬಾಲಸುಬ್ರಹ್ಮಣ್ಯ ಚಿಕಿತ್ಸೆ ಪಡೆದುಕೊಂಡು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು  ಆರೋಪಿ ರಾಜುನನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:  ಬಿಜೆಪಿ ವಿರುದ್ಧ ಮತ್ತೊಂದು ತನಿಖಾಸ್ತ್ರ ಪ್ರಯೋಗಿಸಿದ ಕಾಂಗ್ರೆಸ್ ಸರ್ಕಾರ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.