9 ವರ್ಷಗಳಿಂದ ಶಾಲೆಗೆ ಚಕ್ಕರ್, ಸಂಬಳಕ್ಕೆ ಹಾಜರ್: ಸರ್ಕಾರಿ ಶಾಲಾ ಶಿಕ್ಷಕನ ಕಳ್ಳಾಟ!

ಶಿಕ್ಷಕ ಶಾಲೆಗೆ ಬರದೆ ಕಳ್ಳಾಟವಾಡಿದ್ರೂ ಶಿಕ್ಷನ ಇಲಾಖೆಯಿಂದ ಸರ್ಕಾರಿ‌ ಸಂಬಳ ಪಡೆಯುತ್ತಿದ್ದ. 2014ರಲ್ಲಿ ಈತ ಶಾಲೆಗೆ ಬಂದು 2 ವರ್ಷವಷ್ಟೇ ಕರ್ತವ್ಯ ನಿರ್ವಹಿಸಿದ್ದ. ಬಳಿಕ  ಈತ ಶಾಲೆಗೆ ಶಾಲೆಗೆ ಚಕ್ಕರ್ ಹಾಕಿದ್ದ, ಆದರೆ ತಿಂಗಳ ಕೊನೆಗೆ ಹಾಜರಾತಿ ಪುಸ್ತಕಕ್ಕೆ ನಿತ್ಯ ಸಹಿ ಹಾಕುತ್ತಿದ್ದ.

Written by - Puttaraj K Alur | Last Updated : Aug 28, 2023, 11:54 AM IST
  • ಕರ್ತವ್ಯಕ್ಕೆ ಬರದ ಶಿಕ್ಷಕನಿಗೆ 9 ವರ್ಷಗಳಿಂದ ಸಂಬಳ ಕೊಡ್ತಿರೋ ಶಿಕ್ಷಣ ಇಲಾಖೆ..!
  • ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದಲ್ಲಿ ಘಟನೆ
  • SDMC ಸಭೆಯ ವೇಳೆ ಖತರ್ನಾಕ್ ಶಿಕ್ಷಕನ ಕಳ್ಳಾಟ ಬಯಲಾಗಿದೆ
9 ವರ್ಷಗಳಿಂದ ಶಾಲೆಗೆ ಚಕ್ಕರ್, ಸಂಬಳಕ್ಕೆ ಹಾಜರ್: ಸರ್ಕಾರಿ ಶಾಲಾ ಶಿಕ್ಷಕನ ಕಳ್ಳಾಟ! title=
ಖತರ್ನಾಕ್ ಶಿಕ್ಷಕನ ಕಳ್ಳಾಟ ಬಯಲು!

ಮಂಡ್ಯ: ಕಳೆದ 9 ವರ್ಷಗಳಿಂದ ಶಾಲೆಗೆ ಚಕ್ಕರ್ ಹಾಕಿ ಸಂಬಳ ಪಡೆಯುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಕಳ್ಳಾಟ ಬಯಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕರ್ತವ್ಯಕ್ಕೆ ಬರದ ಶಿಕ್ಷಕನಿಗೆ ಶಿಕ್ಷಣ ಇಲಾಖೆಯು 9 ವರ್ಷಗಳಿಂದಲೂ ಸಂಬಳ ನೀಡುತ್ತಿತ್ತು.

ಕರ್ತವ್ಯಕ್ಕೆ ಹಾಜರಾಗದೇ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ಸಂಬಳ ಪಡೆಯುತ್ತಿದ್ದ ಕಾಡಪ್ಪ ಬೋಳ ಎಂಬ ಶಿಕ್ಷಕರ ಕಳ್ಳಾಟವನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಪತ್ತೆಹಚ್ಚಿದ್ದಾರೆ. ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದು, ತಪ್ಪಿತಸ್ಥ ಶಿಕ್ಷಕನಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಸರ್ಕಾರಿ ನೌಕರರಿಗೆ ಸಿಗಲಿದೆಯಾ ಈ ಸಂತಸದ ಸುದ್ದಿ !

ಶಿಕ್ಷಕ ಶಾಲೆಗೆ ಬರದೆ ಕಳ್ಳಾಟವಾಡಿದ್ರೂ ಶಿಕ್ಷನ ಇಲಾಖೆಯಿಂದ ಸರ್ಕಾರಿ‌ ಸಂಬಳ ಪಡೆಯುತ್ತಿದ್ದ. 2014ರಲ್ಲಿ ಈತ ಶಾಲೆಗೆ ಬಂದು 2 ವರ್ಷವಷ್ಟೇ ಕರ್ತವ್ಯ ನಿರ್ವಹಿಸಿದ್ದ. ಬಳಿಕ  ಈತ ಶಾಲೆಗೆ ಶಾಲೆಗೆ ಚಕ್ಕರ್ ಹಾಕಿದ್ದ, ಆದರೆ ತಿಂಗಳ ಕೊನೆಗೆ ಹಾಜರಾತಿ ಪುಸ್ತಕಕ್ಕೆ ನಿತ್ಯ ಸಹಿ ಹಾಕುತ್ತಿದ್ದ. ಕಳೆದ ಆರೇಳು ವರ್ಷಗಳಿಂದ ಶಾಲೆಗೆ ಬರದೆ  ಶಿಕ್ಷಕ ಪುಡಾರಿ ರಾಜಕೀಯ ಮಾಡುತ್ತಿದ್ದ ಎನ್ನಲಾಗಿದೆ.

ತನ್ನ ಪುಡಾರಿ ರಾಜಕೀಯದಿಂದ ಇಲಾಖೆ ಅಧಿಕಾರಿಗಳು ಮತ್ತು ಸಹಶಿ ಕ್ಷಕರ ಮೇಲೆ ಪ್ರಭಾವ ಬೀರಿದ್ದ. ತನ್ನ‌ ಬದಲು ಬೇರೋಬ್ಬ ಅತಿಥಿ ಶಿಕ್ಷಕನನ್ನು ನೇಮಿಸಿದ್ದ ಈ ಖತರ್ನಾಕ್ ಆಸಾಮಿ ಆತನಿಗೆ 5 ಸಾವಿರ ರೂ. ಸಂಬಳ ನೀಡುತ್ತಿದ್ದನಂತೆ. ಪ್ರಕರಣ ಬೆಳಕಿಗೆ ಬರದಂತೆ ಹಾಜರಾತಿಯಲ್ಲಿ ಸಹ ಶಿಕ್ಷಕರು ಆತನಿಗೆ ಗಳಿಕೆ ರಜೆ ತೋರಿಸಿದ್ದರು.

ಇದನ್ನೂ ಓದಿ: ಎಸ್ಬಿಐ ಗ್ರಾಹಕರಿಗೊಂದು ಸಂತಸದ ಸುದ್ದಿ, ಹೊಸ ಯೋಜನೆ ಆರಂಭಿಸಿದ ಬ್ಯಾಂಕ್!

ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸಂಬಳ ಪಡೆಯುತ್ತಿರುವ ಶಿಕ್ಷಕನ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದಿದ್ದರು. ಈ ಶಿಕ್ಷಕನ ಕಳ್ಳಾಟಕ್ಕೆ ಅಧಿಕಾರಿಗಳು ಮತ್ತು ಸಹ ಶಿಕ್ಷಕರು ಸಾಥ್ ನೀಡಿರುವ ಶಂಕೆ ವ್ಯಕ್ತವಾಗಿದೆ. ಗೈರು ಹಾಜರಾಗಿ ಸಂಬಳ ಪಡೆಯುತ್ತಿರೋ ಶಿಕ್ಷಕನ ವಿರುದ್ಧ ಗ್ರಾಮಸ್ಥರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News