ಕರಳು ಬಳ್ಳಿ ಕಾಣೆಯಾಗಿ ಕಂಗಲಾಗಿದ್ದ ತಾಯಿ: ನೆರವಿಗೆ ಬಂದ್ರೂ ಯಶವಂತಪುರ ಟ್ರಾಫಿಕ್ ಪೊಲೀಸರು

ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ತಾಯಿಯಿಂದ ಕೆಲಕಾಲ ದೂರವಾಗಿದ್ದ ಮಗಳನ್ನು ಒಂದಾಗಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Aug 26, 2022, 06:36 PM IST
  • ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದ ಬಿಎಂಟಿಸಿ ಬಸ್ ನಿಂದ ಇಳಿಯುವ ಆತುರದಲ್ಲಿ ಮಹಿಳೆಯೊಬ್ಬರು ತನ್ನ ಮಗಳನ್ನೇ ಮರೆತಿದ್ದರು.
  • ಬಸ್ ಮುಂದೆ ಚಲಿಸಿದ ಮೇಲೆ ಮಗಳು ಕಾಣೆಯಾಗಿರುವುದು ಗೊತ್ತಾಗಿ ಕಂಗಲಾಗಿ ಕಣ್ಣೀರಿಡುತ್ತಿದ್ದರು.
ಕರಳು ಬಳ್ಳಿ ಕಾಣೆಯಾಗಿ ಕಂಗಲಾಗಿದ್ದ ತಾಯಿ: ನೆರವಿಗೆ ಬಂದ್ರೂ ಯಶವಂತಪುರ ಟ್ರಾಫಿಕ್ ಪೊಲೀಸರು title=

ಬೆಂಗಳೂರು: ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ತಾಯಿಯಿಂದ ಕೆಲಕಾಲ ದೂರವಾಗಿದ್ದ ಮಗಳನ್ನು ಒಂದಾಗಿದ್ದಾರೆ.

ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದ ಬಿಎಂಟಿಸಿ ಬಸ್ ನಿಂದ ಇಳಿಯುವ ಆತುರದಲ್ಲಿ ಮಹಿಳೆಯೊಬ್ಬರು ತನ್ನ ಮಗಳನ್ನೇ ಮರೆತಿದ್ದರು. ಬಸ್ ಮುಂದೆ ಚಲಿಸಿದ ಮೇಲೆ ಮಗಳು ಕಾಣೆಯಾಗಿರುವುದು ಗೊತ್ತಾಗಿ ಕಂಗಲಾಗಿ ಕಣ್ಣೀರಿಡುತ್ತಿದ್ದರು.ಆಗ ಕಣ್ಣಿಗೆ ಬಿದ್ದಿದೆ ಯಶವಂತಪುರ ಸಂಚಾರಿ ಠಾಣೆಯ ಪೊಲೀಸರು. 

ಇದನ್ನೂ ಓದಿ: Video : ಪಾಕ್ ಕ್ಯಾಪ್ಟನ್ ಬಾಬರ್ ಅಜಂ ಭೇಟಿ ಮಾಡಿದ ಕಿಂಗ್ ಕೊಹ್ಲಿ!

ಪೊಲೀಸರು ಬಳಿ ಹೋಗಿ ಮಗಳ ಬಸ್ ನಲ್ಲಿ ಮಿಸ್ ಆಗಿರುವ ಬಗ್ಗೆ ಮಹಿಳೆ ಮಾಹಿತಿ ನೀಡಿದ್ದರು. ಆದರೆ ಯಾವ ಮಾರ್ಗದ ಬಸ್‌.. ಬಸ್ ನಂಬರ್ ಏನೂ ಎಂಬ ಬಗ್ಗೆ ಸೇರಿದಂತೆ ಆಕೆ ಬಳಿ ಮಾಹಿತಿ ಇರಲಿಲ್ಲ‌. ಕಣ್ಣೀರು ಹಾಕುತ್ತಿದ್ದ ಮಹಿಳೆಯನ್ನು ಸಂತೈಸಿ ಕೂಡಲೇ ವೈರ್ ಲೇಸ್ ಮೂಲಕ ಟ್ರಾಫಿಕ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕೂಡಲೇ ಎರಡು ತಂಡಗಳಾಗಿ ಎಸ್ಐಐ ರಾಜಶೇಖರ್, ಕಾನ್ ಸ್ಟೇಬಲ್ ಗಳಾದ ಮಂಜಣ್ಣ, ಚಂದ್ರಶೇಖರ್ ಹಾಗೂ ಶಿವಕುಮಾರ್ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಮಗಳನ್ನು ಪತ್ತೆ ಹಚ್ಚಿ ಕರುಳ ಬಳ್ಳಿಯನ್ನು ಒಂದು ಮಾಡಿದ್ದಾರೆ. ಪೊಲೀಸರ ಕಾರ್ಯಾಚರಣೆಗೆಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Team India: ‘ನನಗೆ 35 ವರ್ಷ, 75 ಅಲ್ಲ…’ ಟೀ ಇಂಡಿಯಾದಲ್ಲಿ ಸಿಗದ ಅವಕಾಶಕ್ಕೆ ಆಕ್ರೋಶ..!

ಲಗ್ಗೆರೆಯಲ್ಲಿ ವಾಸವಾಗಿದ್ದ ಮಹಿಳೆ ಆಗಸ್ಟ್ 24ರಂದು ತುಮಕೂರಿಗೆ ಹೋಗಲು ಹೆಬ್ಬಾಳದಿಂದ ಮಗಳೊಂದಿಗೆ ಬಸ್ ನಲ್ಲಿ ಬರುವಾಗ ಸಿಎಂಟಿಐ ಜಂಕ್ಷನ್ ಬಳಿ ಲಗೇಜ್ ಸಮೇತ ಇಳಿದಿದ್ದಾರೆ. ಆದರೆ ಬಸ್ ನಲ್ಲಿ 12 ವರ್ಷದ ಮಗಳು ಉಳಿದುಕೊಂಡಿದ್ದಾಳೆ. ಮಹಿಳೆಗೆ ಗೊತ್ತಾಗುವಷ್ಟರಲ್ಲೇ ಬಸ್ ಸಹ ಪಾಸ್ ಆಗಿದೆ. ಮಹಿಳೆ ಕೆಲ ದೂರ ಬಸ್ ಹಿಂಬಾಲಿಸಿದರೂ ಪ್ರಯೋಜನವಾಗಿಲ್ಲ. ಸಂಪರ್ಕಿಸಲು ಬಾಲಕಿ ಬಳಿ ಮೊಬೈಲ್ ಇರಲಿಲ್ಲ.. ಇದರಿಂದ ಮಹಿಳೆ ಆತಂಕಕ್ಕೆ ಒಳಗಾಗಿದ್ದರು. ಸದ್ಯ ಸ್ವಲ್ಪ ದೂರದಲ್ಲೇ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ 

ಕಾನ್ ಸ್ಟೇಬಲ್‌ಗೆ ವಿಷಯ ಮುಟ್ಟಿಸಿದ್ದರು. ಸಮಯ ವ್ಯರ್ಥಗೊಳಿಸದೆ ವೈರ್ ಲೇಸ್ ಮೂಲಕ ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ ಮಾಹಿತಿ ರವಾನಿಸಿದ್ದರು.ಫೀಲ್ಡ್ ಗಿಳಿದ ಪೊಲೀಸರಿಗೆ ಯಾವ ರೂಟ್ ಬಸ್, ಬಸ್ ನಂಬರ್ ಸೇರಿದಂತೆ ಯಾವ ಮಾಹಿತಿ ಇರಲಿಲ್ಲ‌. ನೆಲಮಂಗಲ ಹೋಗುವ ಮಾರ್ಗ ಒಂದು ತಂಡ ಮತ್ತೊಂದು ಮಾರಪ್ಪನ ಪಾಳ್ಯ ಕಡೆ ಹೋಗುವ ಬಿಎಂಟಿಸಿ ಬಸ್ ಗಳನ್ನು ತಪಾಸಣೆ ನಡೆಸಿದ್ದಾರೆ. ಸತತ ಕಾರ್ಯಾಚರಣೆ ಬಳಿಕ ತಪಾಸಣೆ ನಡೆಸಿದ ಆರನೇ ಬಸ್ ನಲ್ಲಿ ಬಾಲಕಿ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು ತಾಯಿ ಮಗಳನ್ನು ಒಂದುಮಾಡಿದ್ದಾರೆ. ಪೊಲೀಸರ ಕರ್ತವ್ಯ ಈ ನಿಷ್ಠೆಗೆ ಪಶ್ಚಿಮ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News