ಬೆಂಗಳೂರು: ಲಿವಿಂಗ್ ಟು ಗೆದರ್ ಗೆಳತಿ ಜೊತೆ ಮತ್ತೊಬ್ಬನ ಸ್ನೇಹ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಪ್ರಿಯತಮೆ ಜೊತೆ ಸಲುಗೆಯಿಂದಿದ್ದ ಗೆಳೆಯನನ್ನೇ ಈ ವ್ಯಕ್ತಿ ಕೊಲೆ ಮಾಡಿದ್ದಾನೆ. ನೈಜೀರಿಯಾ ಮೂಲದ ಇಬ್ಬರು ವ್ಯಕ್ತಿಗಳ ಮಧ್ಯೆ ಗಲಾಟೆ ನಡೆದಿದ್ದು, ಓರ್ವನ ಕೊಲಯಾಗಿದೆ. ಭಾನುವಾರ ರಾತ್ರಿ ನಡೆದಿರೋ ಘಟನೆ, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ : Gang Rape : ಅಮ್ಮನ ಎದುರೇ ಮಗಳ ಮೇಲೆ ಗ್ಯಾಂಗ್ ರೇಪ್.!
ಅಮೃತಹಳ್ಳಿ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಈ ಘಟನೆ ಜರುಗಿದೆ. ಸುಲೇಮಾನ್( 38) ಎಂಬಾತನನ್ನ ಕೊಲೆ ವಿಕ್ಟರ್ ಎಂಬುವವರು ಕೊಲೆ ಮಾಡಿದ್ದಾರೆ. ವಿಕ್ಟರ್ ತನ್ನ ಪ್ರಿಯತಮೆ ಜೊತೆ ಲಿವಿಂಗ್ ಟು ಗೆದರ್ ನಲ್ಲಿದ್ದರು.
ಇದೇ ವೇಳೆ ವಿಕ್ಟರ್ ರೂಮಿಗೆ ಬರ್ತಿದ್ದ ಸುಲೇಮಾನ್, ಆತನ ಗೆಳತಿಯ ಜೊತೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದ. ಇದೇ ಕಾರಣಕ್ಕೆ ಗಲಾಟೆ ಮಾಡಿಕೊಂಡು, ಸುಲೇಮಾನ್‌ಗೆ ವಿಕ್ಟರ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಇದನ್ನೂ ಓದಿ : Chief Justice of India : 50ನೇ ಸಿಜೆಐ ಆಗಿ ನ್ಯಾಯಮೂರ್ತಿ ಚಂದ್ರಚೂಡ್ ಹೆಸರು ಪ್ರಕಟ
ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ವಿಕ್ಟರ್ ನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವೀಸಾ, ಪಾಸ್ ಪೋರ್ಟ್ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ