ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ Renukaswamy Murder Case) ಡಿ ಗ್ಯಾಂಗ್ ಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದೆ. ಬರೋಬ್ಬರಿ 50 ದಿನಗಳ ಬಳಿಕ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನಿಸಿಕೊಂಡಿರುವ ಎಫ್ಎಸ್ಎಲ್ ವರದಿ (FSL Report) ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿದೆ.
ನಿನ್ನೆ (ಆಗಸ್ಟ್ 12) ಸಂಜೆ ಬಂದ ಇ-ಮೇಲ್ ಮೂಲಕ ಎಫ್ಎಸ್ಎಲ್ ವರದಿಗಳು (FSL Report) ಲ್ಯಾಬ್ ನಿಂದ ಲಭ್ಯವಾಗಿವೆ. ವರದಿ ಬರುತ್ತಿದ್ದ ಹಾಗೆ ನಗರ ಪೊಲೀಸ್ ಆಯುಕ್ತ ದಯಾನಂದ (City Police Commissioner Dayananda) ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆದಿದೆ. ಈ ಸಭೆಯಲ್ಲಿ ವರದಿಯ ಪ್ರಮುಖ ಅಂಶಗಳ ಕುರಿತಂತೆ ಚರ್ಚೆ ನಡೆಸಲಾಗಿದೆ. ಪೊಲೀಸರ ತನಿಖೆ ವೇಳೆ ಲಭ್ಯವಾಗಿರುವ ಸಾಕ್ಷಿಗಳು ಹಾಗೂ ಎಫ್ಎಸ್ಎಲ್ ವರದಿ ತಾಳೆ ಆಗಿದೀಯಾ ಎಂದು ಖುದ್ದು ಕಮಿಷನರ್ ದಯಾನಂದ ಪರಿಶೀಲಿಸಿದ್ದಾರೆ.
ತನಿಖಾ ತಂಡದ ಜೊತೆ ಮೀಟಿಂಗ್ ನಡೆಸಿದ ನಂತರ ಕಾನೂನು ತಜ್ಞರ ಮೊರೆ ಹೋಗಲಾಗಿದೆ. ಪ್ರಕರಣದಲ್ಲಿ ಈ ಎಫ್ಎಸ್ಎಲ್ ವರದಿ (FSL Report) ಸಾಕಾ ಅಥವಾ ಎಫ್ಎಸ್ಎಲ್ ಗೆ ಹೆಚ್ಚುವರಿಯಾಗಿ ಜಪ್ತಿ ಮಾಡಿದ ವಸ್ತುಗಳನ್ನು ಕಳುಹಿಸಬೇಕಾ ಎಂಬ ಅಂಶಗಳ ಕುರಿತು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ- ದರ್ಶನ್ ʼಡೆವಿಲ್ʼ ಸಿನಿಮಾದ ವಿಲನ್ ಮಗಳಾ ಈ ಸ್ಟಾರ್ ನಟಿ..! ಇಷ್ಟು ದಿನ ಈ ಮ್ಯಾಟರ್ ಗೊತ್ತಿದ್ದಿಲ್ಲ..
ಇನ್ನೊಂದು ಬಹುಮುಖ್ಯ ವಿಷಯವೆಂದರೆ ರೇಣುಕಾಸ್ವಾಮಿ ಕೊಲೆ (Renukaswamy Murder) ಆದ ಮೇಲೆ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಮನೆಯಲ್ಲಿ ದರ್ಶನ್ ಧರಿಸಿದ್ದ ಜೀನ್ಸ್ ಪ್ಯಾಂಟ್ ಮತ್ತು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಲು ಬಳಸಿದ್ದ ಲಾಠಿ ಹಾಗೂ ಕೆಲ ಮರದ ಪೀಸ್ ಗಳನ್ನು ಎಫ್ಎಸ್ಎಲ್ ಗೆ ಕಳುಹಿಸಿದ್ದರು.
ಇದನ್ನೂ ಓದಿ- ಕೊಲೆ ಕೇಸ್ನಲ್ಲಿ ದರ್ಶನ್ & ಗ್ಯಾಂಗ್ ಗೆ ಬೇಗನೆ ಶಿಕ್ಷೆ ಕೊಡಿಸಲು ಪೊಲೀಸರ ಮೆಗಾ ಪ್ಲಾನ್..!
ಸದ್ಯ ಎಫ್ಎಸ್ಎಲ್ ವರದಿಯಲ್ಲಿ ದರ್ಶನ್ (Darshan) ಪ್ಯಾಂಟ್, ಲಾಠಿ, ಮರದ ಪೀಸ್ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ಈ ರಕ್ತ ಕೊಲೆಯಾದ ರೇಣುಕಾಸ್ವಾಮಿಯದ್ದು ಎಂದು ಧೃಡವಾಗಿದ್ದು, ಡಿಎನ್ಎ ಪರೀಕ್ಷೆಯಲ್ಲಿ (DNA Test) ದರ್ಶನ್ ಕರಾಳತೆ ಬಯಲಾಗಿದೆ. ಸದ್ಯ ಈ ವರದಿ ಸಹ ಪೊಲೀಸರ ಕೈ ಸೇರಿದ್ದು, ಕೊಲೆ ಕೇಸಲ್ಲಿ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.