Check bounce Case : ಸ್ಯಾಂಡಲ್‌ವುಡ್ ನಿರ್ದೇಶಕ ಗುರು ಪ್ರಸಾದ್ ಅರೆಸ್ಟ್‌

Guru Prasad arrested : ಚೆಕ್ ಬೌನ್ಸ್ ಪ್ರಕರಣದಲ್ಲಿ ನಿರ್ದೇಶಕ, ನಟ ಗುರು ಪ್ರಸಾದ್ ಅವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಗಿರಿನಗರ ಪೊಲೀಸರು ಗುರು ಪ್ರಸಾದ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

Written by - Chetana Devarmani | Last Updated : Jan 13, 2023, 02:54 PM IST
  • ಸ್ಯಾಂಡಲ್ ವುಡ್ ನಟ ನಿರ್ದೇಶಕ ಗುರು ಪ್ರಸಾದ್ ಬಂಧನ
  • ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನವಾಗಿರೋ ಮಠ ಖ್ಯಾತಿಯ ಗುರು ಪ್ರಸಾದ್
  • ಶ್ರೀನಿವಾಸ್ ಅನ್ನೋ ವ್ಯಕ್ತಿಗೆ ಹಣ ಕೊಡೋ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ
Check bounce Case : ಸ್ಯಾಂಡಲ್‌ವುಡ್ ನಿರ್ದೇಶಕ ಗುರು ಪ್ರಸಾದ್ ಅರೆಸ್ಟ್‌  title=
ನಿರ್ದೇಶಕ ಗುರು ಪ್ರಸಾದ್

Director Guru Prasad arrested : ಚೆಕ್ ಬೌನ್ಸ್ ಪ್ರಕರಣದಲ್ಲಿ ನಿರ್ದೇಶಕ, ನಟ ಗುರು ಪ್ರಸಾದ್ ಅವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಗಿರಿನಗರ ಪೊಲೀಸರು ಗುರು ಪ್ರಸಾದ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಠ ಖ್ಯಾತಿಯ ಗುರು ಪ್ರಸಾದ್ ನಿರ್ದೇಶಕ ಗುರು ಪ್ರಸಾದ್‌ ಅವರನ್ನು ಶ್ರೀನಿವಾಸ್ ಅನ್ನೋ ವ್ಯಕ್ತಿಗೆ ಹಣ ಕೊಡೋ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ. 30 ಲಕ್ಷ ಹಣವನ್ನು ಗುರುಪ್ರಸಾದ್ ನೀಡಬೇಕಿತ್ತು.

ಇದನ್ನೂ ಓದಿ : Pushpa 2 ಸಿನಿಮಾದಲ್ಲಿ ರಶ್ಮಿಕಾ ಬದಲು ಸಾಯಿ ಪಲ್ಲವಿ? ಕೊನೆಗೂ ಮೌನ ಮುರಿದ ಕಿರಿಕ್‌ ಬೆಡಗಿ!

ಗುರು ಪ್ರಸಾದ್‌ ಅವರನ್ನು ಶೀಘ್ರದಲ್ಲೇ ಪೊಲೀಸರು ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ. ಶ್ರೀನಿವಾಸ್ ಹೆಸರಿನ ವ್ಯಕ್ತಿಗೆ ಹಣ ಕೊಡುವ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು ಅರೆಸ್ಟ್‌ ಮಾಡಲಾಗಿದೆ. ಗುರು ಪ್ರಸಾದ್ ವಿರುದ್ಧ NBW ಜಾರಿಯಾದ ಹಿನ್ನೆಲೆ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.  

ಗಿರಿ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಕೋರ್ಟ್‌ಗೆ ಹಾಜರಾಗದೆ ಹಿನ್ನೆಲೆ ಗುರು ಪ್ರಸಾದ್ ವಿರುದ್ಧ NBW ಜಾರಿಯಾಗಿತ್ತು. NBW ಜಾರಿಯಾದ ಹಿನ್ನೆಲೆ ಸದ್ಯ ಗಿರಿ ನಗರ ಪೊಲೀಸರಿಂದ ಬಂಧಿಸಿದ್ದಾರೆ. ವಂಚನೆ ಹಾಗು ಮೋಸ ಮಾಡಿರೋ ಆರೋಪ ಗುರು ಪ್ರಸಾದ್‌ ಅವರ ಮೇಲಿದೆ. ಸದ್ಯ ವಿಚಾರಣೆ ಮಾಡ್ತಿದ್ದು, ಬಳಿಕ  ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ. 

ಇದನ್ನೂ ಓದಿ : Sri Murali: ‘ಬಘೀರ’ ಚಿತ್ರದ ಶೂಟಿಂಗ್​ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News