ಚಿಕಿತ್ಸೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ

ವೈದ್ಯರೆಂದರೆ ರೋಗಿಗಳು ದೇವರೆಂದು ನಂಬುತ್ತಾರೆ. ಅದರೆ ಉಬೇದುಲ್ಲಾ ಎಂಬ ವೈದ್ಯ ಆಸ್ಪತ್ರೆಗೆ ಬರುವ ಹೆಣ್ಣು ಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ಹೀಗೆಯೇ ಚಿಕಿತ್ಸೆಗೆಂದು ತನ್ನ ಅಜ್ಜಿಯ ಜೊತೆ ಬಂದ 19 ವರ್ಷದ ಯುವತಿಗೆ ಈ ಕೀಚಕ ಲೈಂಗಿಕ ಕಿರುಕುಳ ನೀಡಿದ್ದಾನೆ.

Written by - VISHWANATH HARIHARA | Edited by - Yashaswini V | Last Updated : Oct 7, 2022, 03:32 PM IST
  • ನಗರದಲ್ಲಿದ್ದಾನೊಬ್ಬ ಕಾಮುಕ ಡಾಕ್ಟರ್
  • ತನ್ನಲ್ಲಿ ಚಿಕಿತ್ಸೆಗೆಂದು ಬರುವ ಹೆಣ್ಣು ಮಕ್ಕಳೇ ಈತನ ಟಾರ್ಗೆಟ್
  • ಚಿಕಿತ್ಸೆ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ
ಚಿಕಿತ್ಸೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ title=
Sexual harassment

ಬೆಂಗಳೂರು: ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಆದರೆ ಕಾಮುಕ ವೈದ್ಯನೊಬ್ಬ ತನ್ನ ತೀಟೆ ತೀರಿಸಿಕೊಳ್ಳಲು ಚಿಕಿತ್ಸೆಗೆ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ವೈದ್ಯರೆಂದರೆ ರೋಗಿಗಳು ದೇವರೆಂದು ನಂಬುತ್ತಾರೆ. ಅದರೆ ಉಬೇದುಲ್ಲಾ ಎಂಬ ವೈದ್ಯ ಆಸ್ಪತ್ರೆಗೆ ಬರುವ ಹೆಣ್ಣು ಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ಹೀಗೆಯೇ ಚಿಕಿತ್ಸೆಗೆಂದು ತನ್ನ ಅಜ್ಜಿಯ ಜೊತೆ ಬಂದ 19 ವರ್ಷದ ಯುವತಿಗೆ ಈ ಕೀಚಕ ಲೈಂಗಿಕ ಕಿರುಕುಳ ನೀಡಿದ್ದಾನೆ.

ಇದನ್ನೂ ಓದಿ- ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್

ಹೊಟ್ಟೆ ನೋವು ಎಂದು ಹೋಗಿದ್ದ ಯುವತಿಯನ್ನು ಚಿಕಿತ್ಸೆ ನೀಡುವುದಾಗಿ ಬೆಡ್ ಮೇಲೆ ಮಲಗಿಸಿ ಡ್ರಿಪ್ಸ್ ಹಾಕಿದ್ದಾನೆ. ಈ ವೇಳೆ ಅಜ್ಜಿಯನ್ನ ಹೊರ ಕೂರುವಂತೆ ಹೇಳಿದ್ದಾನೆ. ಈ ಸಮಯವನ್ನು ದುರುಪಯೋಗಪಡಿಸಿಕೊಂಡ ಕಾಮುಕ ವೈದ್ಯ ಯುವತಿಯ ಮೈಕೈ ಮುಟ್ಟಿ ಕುಚೇಷ್ಠೆ ಮೆರೆದಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವತಿಗೆ ನೀನು ಮೇಲೆ ಎದ್ದರೆ ಗ್ಲೂಕೋಸ್ ಹಾಕಿದ ಕೈಯಿಂದ ರಕ್ತ ಬರುತ್ತೆ ಎಂದು ಹೆದರಿಸಿದ್ದಾನೆ. ಇಲ್ಲಿ ನಡೆದ ವಿಷಯವನ್ನು ಯಾರಿಗಾದ್ರೂ ಹೇಳಿದರೆ ಸರಿ ಇರಲ್ಲ ಎಂದು ಹೆದರಿಸಿ ಮನೆಗೆ ಕಳಿಸಿದ್ದಾನೆ.  ವೈದ್ಯನಿಗೆ ಹೆದರಿ ಯುವತಿ ಯಾರಿಗೂ ಹೇಳದೆ ಸುಮ್ಮನಿದ್ದಳು. ನಂತರ ಘಟನೆಯಿಂದ ಭಯಭೀತಗೊಂಡಿದ್ದ ಯುವತಿಗೆ ಮತ್ತೆ ಜ್ವರ ಕಾಣಿಸಿಕೊಂಡಿತ್ತು.

ಈ ವೇಳೆ ಕುಟುಂಬಸ್ಥರು ಆಸ್ಪತ್ರೆಗೆ ಹೋಗೋಣ ಎಂದು ಮತ್ತೆ ಉಬೇದುಲ್ಲಾನ ಕ್ಲಿನಿಕ್ ಗೆ ಕರೆದೊಯ್ಯಲು ಮುಂದಾಗಿದ್ದರು. ಈ ವೇಳೆ ಹೆದರಿದ ಯುವತಿ ಆ ಕ್ಲಿನಿಕ್ ಬರುವುದಿಲ್ಲ ಎಂದಿದ್ದಾಳೆ. ಯುವತಿಯ ಅಣ್ಣಂದಿರುವ ಕಾರಣ ಕೇಳಿದಾಗ ಯುವತಿ ಕಾಮುಕನ ಅಸಲಿ ಕಹಾನಿಯನ್ನು ತರೆದಿಟ್ಟಿದ್ದಾಳೆ.

ಇದನ್ನೂ ಓದಿ- Bangalore Crime : ಹೌಸಿಂಗ್ ಸೊಸೈಟಿ ಹೆಸರಲ್ಲಿ ವಂಚನೆ : ಸಿಲಿಕಾನ್‌ ಸಿಟಿಯಲ್ಲಿ ಇಬ್ಬರ ಅರೆಸ್ಟ್  

ಇದರಿಂದ ಆಕ್ರೋಶಗೊಂಡ ಯುವತಿಯ ಅಣ್ಣಂದಿರು ಕ್ಲಿನಿಕ್ ಧ್ವಂಸಗೊಳಿಸಿದ್ದಾರೆ. ಕಾಮುಕ ವೈದ್ಯ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಚಂದ್ರಲೇಔಟ್ ಬಳಿ ಇರುವ ಅರುಂಧತಿ ನಗರದಲ್ಲಿರುವ ಕ್ಲಿನಿಕ್ ಇದಾಗಿದ್ದು, ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಕಾಮುಕ ವೈದ್ಯನ ವಿರುದ್ಧ ಯುವತಿಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News