ಬಿಗ್ ಬಾಸ್ ಖ್ಯಾತಿಯ ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಅರೆಸ್ಟ್: ಮಗು ದತ್ತು ಪಡೆದು ಪ್ರಚಾರ ಮಾಡಿದ್ದ ಸೋನು

Sonu Srinivas Gowda arrested: ಸೋನು ಶ್ರೀನಿವಾಸ್ ಗೌಡ ವಯಸ್ಸಿಗೆ ಮಕ್ಕಳನ್ನ ದತ್ತು‌ ಪಡೆಯುವ ಅರ್ಹತೆ ಇಲ್ಲ. ಜೊತೆಗೆ ಹೆಣ್ಣು ಮಗು ಆಗಿದ್ರು ತನ್ನ ಸೋಶಿಯಲ್ ಮೀಡಿಯಾದಲ್ಲಿ ಮಗುವನ್ನ ದತ್ತು ಪಡೆದಿರೋದಾಗಿ ಪ್ರಚಾರ ಮಾಡಿಕೊಂಡಿದ್ದಳು. ಇನ್ನೂ ಉತ್ತರ ಕರ್ನಾಟಕ ಮೂಲದ ಎಂಟು ವರ್ಷದ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಸೋನು ಸೋಷಿಯಲ್ ಮೀಡಿಯಾದಲ್ಲಿ ಫುಲ್ ಬಿಲ್ಡಪ್ ಕೊಟ್ಟಿದ್ದಾಳೆ. 

Written by - VISHWANATH HARIHARA | Last Updated : Mar 22, 2024, 10:13 AM IST
  • ಅನಧಿಕೃತವಾಗಿ ಮಗುವನ್ನು ಮನೆಯಲ್ಲಿ ಇಟ್ಟಿಕೊಂಡು ಆರೋಪ ಹಿನ್ನೆಲೆ
  • ಸೋಷಿಯಲ್ ಮಿಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಬಂಧನ
  • ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್ ಆಗಿದ್ದ ಸೋನು ಗೌಡ
ಬಿಗ್ ಬಾಸ್ ಖ್ಯಾತಿಯ ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಅರೆಸ್ಟ್: ಮಗು ದತ್ತು ಪಡೆದು ಪ್ರಚಾರ ಮಾಡಿದ್ದ ಸೋನು title=

Sonu Srinivas Gowda arrested:  ರೀಲ್ಸ್ ರಾಣಿ, ಓಟಿಟಿ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಮೇಲೆ ಮಗು ದತ್ತು ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾಗಿದೆ. ಚೈಲ್ಡ್ ವೇಲ್ ಫೇರ್ ಕಮಿಟಿ ಅಧಿಕಾರಿಗಳು ಬ್ಯಾಡರಹಳ್ಳಿ ದೂರು ನೀಡಿದ ದೂರಿನ ಹಿನ್ನೆಲೆ ಅಂದ್ರಹಳ್ಳಿ ನಿವಾಸದಲ್ಲಿ ಇಂದು ಮುಂಜಾನೆ ಸೋನುಳನ್ನ ಪೊಲೀಸರು ಬಂಧಿಸಿದ್ದಾರೆ.  

ಸೋನು ಶ್ರೀನಿವಾಸ್ ಗೌಡ ವಯಸ್ಸಿಗೆ ಮಕ್ಕಳನ್ನ ದತ್ತು‌ ಪಡೆಯುವ ಅರ್ಹತೆ ಇಲ್ಲ. ಜೊತೆಗೆ ಹೆಣ್ಣು ಮಗು ಆಗಿದ್ರು ತನ್ನ ಸೋಶಿಯಲ್ ಮೀಡಿಯಾದಲ್ಲಿ ಮಗುವನ್ನ ದತ್ತು ಪಡೆದಿರೋದಾಗಿ ಪ್ರಚಾರ ಮಾಡಿಕೊಂಡಿದ್ದಳು. ಇನ್ನೂ ಉತ್ತರ ಕರ್ನಾಟಕ ಮೂಲದ ಎಂಟು ವರ್ಷದ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಸೋನು ಸೋಷಿಯಲ್ ಮೀಡಿಯಾದಲ್ಲಿ ಫುಲ್ ಬಿಲ್ಡಪ್ ಕೊಟ್ಟಿದ್ದಾಳೆ. 

ಇದನ್ನೂ ಓದಿ- ಹುಬ್ಬಳ್ಳಿ ಸಿಸಿಬಿ ಪೋಲೀಸರ ಭರ್ಜರಿ ಬೇಟೆ: ಎಂಡಿಎಂಎ ಡ್ರಗ್ಸ್ ಮಾರಾಟ ಜಾಲದ ಮೂವರ ಬಂಧನ

ದತ್ತು ಪಡೆದಿರುವ ಹೆಣ್ಣುಮಗುವನ್ನು ಪ್ರಚಾರಕ್ಕೆ ಬಳಸಿಕೊಂಡಿರುವ ಆರೋಪ ಸೋನು ಮೇಲಿದ್ದು, ದತ್ತು ಪಡೆಯಲು ಅನುಸರಿಬೇಕಾದ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪ ಸಹ ಇದೆ‌.

ಇದನ್ನೂ ಓದಿ- ಮದುವೆಗೆ ಪೋಷಕರು ವಿರೋಧ: ವಿಷ ಸೇವಿಸಿದ ಪ್ರೇಮಿಗಳು

ಸದ್ಯ ಈ ಆರೋಪದಡಿ ಸೋನು ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸ್ರು ಸೋನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಕೇಸ್ ನಲ್ಲಿ ಸೋನು ಜೈಲು ಸೇರುವ  ಸಾಧ್ಯತೆ ಕೂಡ ಇದ್ದು, ಮುಂದೆ ಏನಾಗುತ್ತೋ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News