Sucide Case: ಹೆಂಡತಿಯ ಮೇಕಪ್ ಕಾಟಕ್ಕೆ ಮನನೊಂದು ಗಂಡ ಸೂಸೈಡ್..!

Sucide Case: ಹೆಂಡತಿಯ ಮೇಕಪ್ ಆಸೆ ಹಾಗೂ ಅತಿಯಾದ ಫೋನ್‌ ಬಳಕೆಯಿಂದ ಗುಲ್ಜಾರ್‌ ಹುಸೈನ್‌ ಬೇಸತ್ತು ಹೋಗಿದ್ದನಂತೆ. ಈ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ ಹೆಂಡತಿ ಮಾತ್ರ ಆತನ ಮಾತಿಗೆ ಸೊಪ್ಪು ಹಾಕಿರಲಿಲ್ಲವಂತೆ.

Written by - Puttaraj K Alur | Last Updated : Jul 17, 2024, 06:17 PM IST
  • ಹೆಂಡತಿಯ ಕಾಟವನ್ನು ತಾಳಲಾರದೆ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
  • ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ
  • ಹೆಂಡತಿಯ ಮೇಕಪ್ ಹಾಗೂ ಫೋನ್‌ ಬಳಕೆಯಿಂದ ನೊಂದು ಆತ್ಮಹತ್ಯೆ
Sucide Case: ಹೆಂಡತಿಯ ಮೇಕಪ್ ಕಾಟಕ್ಕೆ ಮನನೊಂದು ಗಂಡ ಸೂಸೈಡ್..! title=
ಪತ್ನಿಯ ಕಾಟಕ್ಕೆ ಪತಿ ಆತ್ಮಹತ್ಯೆ!

Sucide Case: ಹೆಂಡತಿಯ ಕಾಟವನ್ನು ತಾಳಲಾರದೆ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. 

ಅಸ್ಸಾಂ ಮೂಲದ ಲಾರಿ ಚಾಲಕ ಗುಲ್ಜಾರ್ ಹುಸೈನ್ ಚೌಧರಿ ಮದುವೆ ನಂತರ ತೊಣಚಿನಕುಪ್ಪೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆದರೆ ಪತ್ನಿಯ ಕಾಟದಿಂದ ಬೇಸತ್ತು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಇದನ್ನೂ ಓದಿ: ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯಿಂದಲೇ ಬಿಲ್‌ ಬಾಕಿ

ಹೆಂಡತಿಯ ಮೇಕಪ್ ಆಸೆ ಹಾಗೂ ಅತಿಯಾದ ಫೋನ್‌ ಬಳಕೆಯಿಂದ ಗುಲ್ಜಾರ್‌ ಹುಸೈನ್‌ ಬೇಸತ್ತು ಹೋಗಿದ್ದನಂತೆ. ಈ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ ಹೆಂಡತಿ ಮಾತ್ರ ಆತನ ಮಾತಿಗೆ ಸೊಪ್ಪು ಹಾಕಿರಲಿಲ್ಲ.

ಅತಿಯಾದ ಮೊಬೈಲ್‌ ಬಳಕೆ ಹಾಗೂ ಮೇಕಪ್‌ ಮಾಡಿಕೊಂಡು ಶೋಕಿ ಮಾಡುತ್ತಿದ್ದ ಹೆಂಡತಿಯಿಂದ ಗುಲ್ಜಾರ್‌ ಹುಸೈನ್‌ ಬೇಸತ್ತು ಹೋಗಿದ್ದ. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಸಾಕಷ್ಟು ಬಾರಿ ಗಲಾಟೆ ಸಹ ನಡೆದಿತ್ತು.   

ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ

ಎಷ್ಟೇ ಬುದ್ಧಿ ಹೇಳಿದರೂ ಪತಿಯ ಮಾತುಗಳನ್ನು ಪತ್ನಿ ಕೇಳುತ್ತಿರಲಿಲ್ಲವಂತೆ. ಹೀಗಾಗಿ ಮನನೊಂದ ಪತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News