ಬೆಂಗಳೂರು: ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಅವರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿದೆ. ಲಿಲಿತಾ ನಾಯಕ್ ಮನೆಗೆ ಬೆದರಿಕೆ ಪತ್ರ ಕಳುಹಿಸಿರುವ ಕಿಡಿಗೇಡಿಗಳು ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿ 61 ವ್ಯಕ್ತಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಬಿ.ಟಿ.ಲಲಿತಾ ನಾಯಕ್ ಅವರ ಸಂಜಯನಗರ ನಿವಾಸದ ವಿಳಾಸಕ್ಕೆ ಕೊಲೆ ಬೆದರಿಕೆ ಪತ್ರ ಬಂದಿದೆ. ಜುಲೈ ತಿಂಗಳಿನಲ್ಲಿಯೇ 2ನೇ ಬೆದರಿಕೆ ಪತ್ರವನ್ನು ಕಿಡಿಗೇಡಿಗಳು ಕಳುಹಿಸಿದ್ದಾರೆ. ಈ ಹಿಂದೆ ಜುಲೈ 2ರಂದು ಬೆದರಿಕೆ ಪತ್ರ ಬಂದಿತ್ತು. ಆ ಪತ್ರದಲ್ಲಿಯೂ ಬಿ.ಟಿ.ಲಲಿತಾ ನಾಯಕ್, ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಹಲವು ಸಾಹಿತಿಗಳ, ರಾಜಕಾರಣಗಳ ಹೆಸರು ಉಲ್ಲೇಖವಾಗಿತ್ತು.
ಇದನ್ನೂ ಓದಿ: 'ನಿಮ್ಮ ಸರ್ಕಾರಕ್ಕೆ ಮಕ್ಕಳಿಗೆ ಕೊಡಬೇಕಾದ್ದನ್ನು ಕೊಡುವ ಯೋಗ್ಯತೆ ಇಲ್ಲದಿದ್ದರೆ ಅವರನ್ನು ಹಂಗಿಸುವ ಸಾಹಸ ಮಾಡಬೇಡಿ'
ಕಾಂಗ್ರೆಸ್ ನಾಯಕರು ಮತ್ತು ಸಾಹಿತಿಗಳು ಟಾರ್ಗೆಟ್
ಶುಕ್ರವಾರ ಸಂಜೆ ಬಿ.ಟಿ.ಲಲಿತಾ ನಾಯಕ್ ಅವರ ಮನೆ ವಿಳಾಸಕ್ಕೆ ಬಂದಿರುವ ಬೆದರಿಕೆ ಪತ್ರದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕೆಲವು ಸಾಹಿತಿಗಳನ್ನು ಟಾರ್ಗೆಟ್ ಮಾಡಲಾಗಿದೆ. ಬಿ.ಟಿ.ಲಲಿತಾ ನಾಯಕ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್, ಸಂಸದ ಡಿ.ಕೆ.ಸುರೇಶ್ ಹೀಗೆ ಒಟ್ಟು 61 ಮಂದಿಯನ್ನು ಶೀಘ್ರವೇ ಮುಗಿಸುವುದಾಗಿ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಬೆದರಿಕೆ ಪತ್ರದಲ್ಲಿ ಏನಿದೆ..?
ಬಿ.ಟಿ.ಲಲಿತಾ ನಾಯಕ್ ಅವರಿಗೆ ಬರೆದಿರುವ ಬೆದರಿಕೆ ಪತ್ರದಲ್ಲಿ ಅಪರಿಚಿತರು ದೇಶದ್ರೋಹಿಗಳಿಗೆ ಮತ್ತು ಧರ್ಮದ್ರೋಹಿಗಳಿಗೆ ಧಿಕ್ಕಾರವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬಿ.ಟಿ.ಲಲಿತಾ ನಾಯಕ್ ಅವರೇ ನಿಮಗೆ ಮತ್ತು ನಿಮ್ಮ 61 ಎಡಬಿಡಂಗಿ, ಬುದ್ಧಿ ಇಲ್ಲದ ಲದ್ದಿಜೀವಿಗಳಿಗೆ, ಪ್ರಗತಿಪರ, ಎಡಪಂಥಿವಾದಿಗಳಿಗೆ ಮತ್ತು ರಾಜಕೀಯದಿಂದ ಸರ್ವನಾಶವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಬಿ.ಕೆ.ಹರಿಪ್ರಸಾದ್, ಡಿ.ಕೆ.ಸುರೇಶ್ ಸೇರಿದಂತೆ ಇನ್ನು ಹಲವಾರು ದೇಶದ್ರೋಹಿಗಳಿಗೆ, ಧರ್ಮದ್ರೊಹಿಗಳಿಗೆ ಮತ್ತು ನಾಡದ್ರೋಹಿಗಳಿಗೆ’ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Earthquake: ಬೆಳ್ಳಂಬೆಳಗ್ಗೆ ವಿಜಯಪುರದಲ್ಲಿ ಭೂಕಂಪನ, ಬೆಚ್ಚಿದ ಜನರು!
‘ನಮ್ಮ ದೇಶದ ಸೈನಿಕರ ಮೇಲೆ, ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಮೇಲೆ, ಸಹಿಷ್ಣು ನಾಗರಿಕರ ಮೇಲೆ ಇಸ್ಲಾಂ ಭಯೋತ್ಪಾದಕರು, ನಕ್ಸಲೈಟ್, ಮಾವೋವಾದಿಗಳು ದಾಳಿ ನಡೆಸುತ್ತಿದ್ದಾರೆ. ಕಲ್ಲುಗಳಿಂದ, ಬಾಂಬ್‍ಗಳಿಂದ, ಗನ್‍ಗಳಿಂದ, ಮಚ್ಚು-ಕತ್ತಿಗಳಿಂದ, ಪೆಟ್ರೋಲ್ ಬಾಂಬ್‍ಗಳಿಂದ ದಾಳಿ ನಡೆಸಿ ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಮಾಡಲಾಗುತ್ತಿದೆ. ಹೀಗಾಗಿ ಇದಕ್ಕೆಲ್ಲಾ ಅಂತಿಮವಿರಾಮ ಹಾಡಲು ನಾವು 61 ಜನರನ್ನು ಕೊಲ್ಲುತ್ತೇವೆಂದು’ ಬೆದರಿಕೆ ಪತ್ರದಲ್ಲಿ ಕಿಡಗೇಡಿಗಳು ಉಲ್ಲೇಖಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ