Shivamogga: ಆನ್‌ಲೈನ್‌ನಲ್ಲಿ ಹೂಡಿಕೆ, ಸಾಲ ತೀರಿಸಲಾಗದೇ ತೀರ್ಥಹಳ್ಳಿಯಲ್ಲಿ ಯುವಕ ಆತ್ಮಹತ್ಯೆ..!

Shivamogga Crime News: ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಅಂತಾ ಸ್ಟೇಟಸ್ ಹಾಕಿ ಜಯದೀಪ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಮೊಬೈಲ್ ಫೋನ್‌ನಲ್ಲಿ ವ್ಯಾಟ್ಸಾಪ್ ಸ್ಟೇಟಸ್ ಹಾಕಿ ನಾಪತ್ತೆಯಾಗಿದ್ದ. ತುಂಗಾ ನದಿಯ ಬಳಿ ಈತನ ಬೈಕ್ ಪತ್ತೆಯಾಗಿತ್ತು.

Written by - Puttaraj K Alur | Last Updated : Aug 31, 2024, 09:46 PM IST
  • ಸಾಲ ತೀರಿಸಲಾಗದೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಯುವಕ ಆತ್ಮಹತ್ಯೆ
  • ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ಮೈತುಂಬಾ ಸಾಲ ಮಾಡಿಕೊಂಡಿದ್ದ ಯುವಕ
  • ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಅಂತಾ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆಗೆ ಶರಣು
Shivamogga: ಆನ್‌ಲೈನ್‌ನಲ್ಲಿ ಹೂಡಿಕೆ, ಸಾಲ ತೀರಿಸಲಾಗದೇ ತೀರ್ಥಹಳ್ಳಿಯಲ್ಲಿ ಯುವಕ ಆತ್ಮಹತ್ಯೆ..! title=
ಸಾಲಕ್ಕೆ ಹೆದರಿ ಯುವಕ ಆತ್ಮಹತ್ಯೆ!

Shivamogga Crime News: ಸಾಲ ತೀರಿಸಲಾಗದೇ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿ ಸಮೀಪದ ಇಂದಾವರ ಗ್ರಾಮದ ನಿವಾಸಿ ಜಯದೀಪ್ (24) ಮೃತ ಯುವಕ.

ಜಯದೀಪ್ ಆನ್‌ಲೈನ್‌ನಲ್ಲಿ ಹಣ ಹೂಡಿದ್ದನು. ಇದಕ್ಕಾಗಿ ಎಲ್ಲಾ ಕಡೆ ಸಾಲ ಮಾಡಿಕೊಂಡಿದ್ದನಂತೆ. ಆದರೆ ಸಾಲ ತೀರಿಸಲಾಗದೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸಮೀಪದ ತುಂಗಾ ನದಿಯಲ್ಲಿ ಯುವಕನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಇದನ್ನೂ ಓದಿ: ಜನರಿಗೆ ಸಿದ್ದರಾಮಯ್ಯ ಹೆಚ್ಚು ಪ್ರೀತಿ ಗೌವರ ತೋರಿಸಿದ್ದಾರೆ

ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಅಂತಾ ಸ್ಟೇಟಸ್ ಹಾಕಿ ಜಯದೀಪ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜಯದೀಪ್‌ ತನ್ನ ಮೊಬೈಲ್ ಫೋನ್‌ನಲ್ಲಿ ವ್ಯಾಟ್ಸಾಪ್ ಸ್ಟೇಟಸ್ ಹಾಕಿ ನಾಪತ್ತೆಯಾಗಿದ್ದನು. ತುಂಗಾ ನದಿಯ ಬಳಿ ಈತನ ಬೈಕ್ ಪತ್ತೆಯಾಗಿತ್ತು.

ಇತ್ತೀಚೆಗೆ ಆನ್‌ಲೈನ್ ಟ್ರೇಡಿಂಗ್, ಬಿಟ್ ಕಾಯಿನ್ ಸೇರಿದಂತೆ ಹಲವಾರು ಕಡೆ ಹೂಡಿಕೆ ಮಾಡಿ ಮೋಸ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕಷ್ಟಪಟ್ಟು ದುಡಿದ ಹಣವನ್ನು ಎಲ್ಲೆಲ್ಲೋ ಹೂಡಿಕೆ ಮಾಡಿ ಮೋಸ ಹೋಗಿ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಜಯದೀಪ್‌ ಸಹ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ.

ಇದನ್ನೂ ಓದಿ: Renukaswamy Case: ಆರೋಪಿಗಳಾದ ವಿನಯ್ ಮತ್ತು ನಾಗರಾಜ್ ಸ್ಥಳಾಂತರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News