ಕುಶಿನಗರ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಮನೆಯ ಟೆರೇಸ್ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಧ್ವಜವನ್ನು ಮನೆಯ ಮೇಲೆ ಹಾರಿಸುತ್ತಿರುವುದನ್ನು ಯಾರೋ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿ ಪೊಲೀಸರು ಧ್ವಜವನ್ನು ಕೆಳಗಿಳಿಸಿದ್ದು, ಯುವಕನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸಲ್ಮಾನ್ (21) ಎಂದು ಗುರುತಿಸಲಾಗಿದೆ. ಧ್ವಜ ತಯಾರು ಮಾಡಿದ ಆತನ ಚಿಕ್ಕಮ್ಮ ಶಹನಾಜ್ (22) ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದಲ್ಲದೆ ಧ್ವಜ ಹಾರಿಸಲು ಸಹಕರಿಸಿದ ಸಲ್ಮಾನ್ ಸೋದರ ಇಮ್ರಾನ್ ವಿರುದ್ಧವೂ ಬಾಲಾಪರಾಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕುಶಿನಗರ ಜಿಲ್ಲೆಯ ತೇರ್ಯಸುಜನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೇಡುಪರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: Hoisting Tiranga: ನಿಮ್ಮ ಮನೆಯ ಮೇಲೂ ಕೂಡ ತ್ರಿವರ್ಣ ಧ್ವಜ ಹಾರಿಸುವ ಮುನ್ನ ಈ ಧ್ವಜ ಸಂಹಿತೆ ನಿಮಗೆ ತಿಳಿದಿರಲಿ
75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಹಿನ್ನೆಲೆ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ದೇಶದಾದ್ಯಂತ ಜನರು ತಮ್ಮ ಮನೆಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಅದರೆ ಸಲ್ಮಾನ್ ಪಾಕ್ ಧ್ವಜ ಹಾರಿಸಿ ಜೈಲುಪಾಲಾಗಿದ್ದಾನೆ. ವಾತಾವರಣ ಕದಡುವಂತಹ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಆರೋಪಿ ಸಲ್ಮಾನ್ ತನ್ನ ಚಿಕ್ಕಮ್ಮನಿಂದ ಪಾಕಿಸ್ತಾನದ ಧ್ವಜವನ್ನು ಹೊಲಿಸಿಕೊಂಡು ಪಡೆದಿರುವುದು ಬೆಳಕಿಗೆ ಬಂದಿದೆ.
Uttar Pradesh | A man has been arrested for allegedly hoisting Pakistan's national flag at his house in Kushinagar
We've registered a case and one person has been arrested. Further action is being taken: Ritesh Kumar Singh, Additional Superintendent of Police, Kushinagar (12.8) pic.twitter.com/bXi3EZWcOt
— ANI UP/Uttarakhand (@ANINewsUP) August 13, 2022
ವೈರಲ್ ಆಗಿರುವ ವಿಡಿಯೋದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಘಟನೆ ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಕೆಲವರು ಪಾಕಿಸ್ತಾನದ ಧ್ವಜ ಹಾರಿಸುವುದನ್ನು ವಿರೋಧಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಧ್ವಜವನ್ನು ಮನೆಯ ಮೇಲ್ಛಾವಣಿಯಿಂದ ಕೆಳಗಿಳಿಸಿ ಯುವಕನನ್ನು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ಸೇರಿ 11 ವಿಪಕ್ಷಗಳಿಂದ ಮಾಸ್ಟರ್ ಪ್ಲಾನ್! ಏನು ಗೊತ್ತಾ?
ಈ ಯುವಕ ಈ ಹಿಂದೆಯೂ ಹಲವು ಬಾರಿ ಇದೇ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆತ ಪ್ರತಿದಿನವೂ ಜನರೊಂದಿಗೆ ವಾದ ಮಾಡುತ್ತಲೇ ಇರುತ್ತಾನೆ. ಇದೇ ವ್ಯಕ್ತಿಯ ಮನೆಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿರುವ ವಿಷಯ ಗಮನಕ್ಕೆ ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಿತೇಶ್ ಕುಮಾರ್ ಸಿಂಗ್ ಹೇಳಿದ್ದಾರೆ. ಸದ್ಯ ಪೊಲೀಸರು ಯುವಕನ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.