ಮೇಷ ರಾಶಿ-ಆರ್ಥಿಕವಾಗಿ ಮೇಷ ರಾಶಿಯ ಜನರಿಗೆ ಈ ವರ್ಷ ತುಂಬಾ ಉತ್ತಮ ವರ್ಷವಾಗಿ ಪರಿಣಮಿಸಲಿದೆ. ಅದರಲ್ಲೂ ವಿಶೇಷವಾಗಿ ಮನೆಯಿಂದ ಕಾರ್ಯ ನಿರ್ವಹಿಸುವ ಜನರಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ನಿಮ್ಮ ಆದಾಯದಲ್ಲಿ ವ್ಯಾಪಕ ವೃದ್ಧಿಯಾಗಲಿದೆ. ಆದರೆ, ನೀವು ನಿಮ್ಮ ಖರ್ಚು ಹಾಗೂ ಆದಾಯದ ಮೇಲೆ ನಿಗಾ ವಹಿಸುವ ಅಗತ್ಯತೆ ಇದೆ. ಹಾಗೂ ನಿಮ್ಮ ಕೋಪದ ಮೇಲೆ ಹಿಡಿತ ಸಾಧಿಸುವ ಅಗತ್ಯತೆ ಕೂಡ ಇದೆ.
ವೃಷಭ ರಾಶಿ- ಈ ವರ್ಷ ಆರ್ಥಿಕ ಪ್ರಗತಿಗೆ ನಿಮಗೆ ಈ ಮೊದಲಿಗಿಂತಲೂ ಕೂಡ ಹೆಚ್ಚಿನ ಹಾಗೂ ನಿರಂತರ ಪರಿಶ್ರಮಪಡುವ ಅಗತ್ಯತೆ ಇದೆ. ಈ ವರ್ಷ ನಿಮ್ಮ ಆದಾಯ ಕಡಿಮೆ ಮತ್ತು ಖರ್ಚು ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿಯೂ ಕೂಡ ನಿಮಗೆ ಸ್ವಲ್ಪ ಕಷ್ಟ ಎದುರಾಗುವ ಸಾಧ್ಯತೆ ಇದೆ. ಆದರೆ, ಆಗಸ್ಟ್ ಬಳಿಕ ನಿಮ್ಮ ಜೀವನದಲ್ಲಿ ಕೆಲ ಸಕಾರಾತ್ಮಕ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ.
ಮಿಥುನ ರಾಶಿ- ಈ ವರ್ಷ ಮಿಥುನ ಜಾತಕದ ಜನರಿಗೆ ಆರ್ಥಿಕವಾಗಿ ಮಿಶ್ರ ಪ್ರತಿಫಲ ನೀಡಲಿದೆ. ಈ ಜಾತಕದ ವ್ಯಾಪಾರಿಗಳಿಗೆ ಉತ್ತಮ ಲಾಭ ಪ್ರಾಪ್ತಿಯಾಗಲಿದೆ. ಆದರೆ, ಜನವರಿ 2021 ರ ಬಳಿಕ ನಿಮ್ಮ ಜೀವನದಲ್ಲಿ ಕೆಲ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ. ಅದರಲ್ಲೂ ವಿಶೇಷವಾಗಿ ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಹೆಚ್ಚಿನ ಜಾಗೃತೆವಹಿಸುವ ಅಗತ್ಯತೆ ಇದೆ.
ಕರ್ಕ ರಾಶಿ- ವ್ಯಾಪಾರದಲ್ಲಿ ನಿರತರಾಗಿರುವ ಕರ್ಕ ರಾಶಿಯ ಜಾತಕದ ವ್ಯಕ್ತಿಗಳಿಗೆ ಉತ್ತಮ ಆರ್ಥಿಕ ಲಾಭ ನಿರೀಕ್ಷಿಸಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಕರಕುಶಲ ಕ್ಷೇತ್ರಗಳಾದಂತಹ ಆಭರಣ, ಡಿಸೈನಿಂಗ್, ಸೌಂದರ್ಯ ಪ್ರಸಾದನ, ಇವೆಂಟ್ ಗಳಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ಉತ್ತಮ ಪ್ರಗತಿ ಇರಲಿದೆ. ನೌಕರ ವರ್ಗದ ಜನರಿಗೆ ಸೆಪ್ಟೆಂಬರ್ ಅವಧಿಯವರೆಗೆ ಸ್ವಲ್ಪ ಕಠಿಣ ಕಾಲ ಇರಲಿದೆ. ಸೆಪ್ಟೆಂಬರ್ ಬಳಿಕ ಪರಿಸ್ಥಿತಿಯಲ್ಲಿ ಸುದಾರಣೆ ಕಂಡುಬರಲಿದೆ.
ಸಿಂಹ ರಾಶಿ- ಈ ರಾಶಿಯ ಜಾತಕ ಇರುವ ಜನರಿಗೆ ಆರ್ಥಿಕವಾಗಿ ಈ ವರ್ಷ ಉತ್ತಮವಾಗಿರಲಿದೆ. ಅದರಲ್ಲೂ ವಿಶೇಷವಾಗಿ ಸರ್ಕಾರಿ ಸಂಘಟನೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವವರಿಗೆ ಶುಭ ಪರಿಣಾಮಗಳು ಪ್ರಾಪ್ತಿಯಾಗಲಿವೆ. ವ್ಯಾಪಾರಿಗಳಿಗೆ ಅಕ್ಟೋಬರ್ ಬಳಿಕದ ಕಾಲಾವಧಿ ಉತ್ತಮ ಪರಿಣಾಮಗಳನ್ನು ನೀಡಲಿದೆ.
ಕನ್ಯಾ ರಾಶಿ- ಇವರಿಗೂ ಕೂಡ ಆರ್ಥಿಕವಾಗಿ ಈ ವರ್ಷ ಉತ್ತಮವಾಗಿರಲಿದೆ. ಈ ಕಾಲಾವಧಿಯಲ್ಲಿ ನಿಮ್ಮ ಜೀವನದಲ್ಲಿ ಆರ್ಥಿಕ ಆದಾಯ ಬರಲಿದೆ. ಜೊತೆಗೆ ಸುಖ-ಸಮೃದ್ಧಿ ಕೂಡ ಲಭಿಸಲಿದೆ. ಭೂಮಿ ಖರೀದಿ ಮತ್ತು ಮಾರಾಟದಲ್ಲಿ ನಿರತರಾಗಿರುವ ವ್ಯಾಪಾರಿಗಳಿಗೆ, ಕೃಷಿ, ಇಂಟೀರಿಯರ್ ಹಾಗೂ ಕೇಟರಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಈ ಕಾಲ ತುಂಬಾ ಉತ್ತಮವಾಗಿರಲಿದೆ. ಯಾವುದೇ ಸಣ್ಣ ವ್ಯಾಪಾರದಲ್ಲಿ ಹಣ ಹೂಡಿಕೆ ಈ ಅವಧಿಯಲ್ಲಿ ಉತ್ತಮ.
ತುಲಾ ರಾಶಿ- ಈ ಜಾತಕ ಹೊಂದಿದ ವ್ಯಾಪಾರಿಗಳಿಗೆ ಈ ವರ್ಷದ ಆರಂಭ ಉತ್ತಮವಾಗಿರಲಿದೆ, ಅದರಲ್ಲೂ ವಿಶೇಷವಾಗಿ IT, ಆಮದು-ರಫ್ತು, ಜವಳಿ, ಕೃಷಿ, ವ್ಯಾಪಾರ ಹಾಗೂ ಷೇರು ಮಾರುಕಟ್ಟೆಯಲ್ಲಿ ನಿರತರಾಗಿರುವವರಿಗೆ ಲಾಭವಾಗಲಿದೆ. ನೌಕರರಿಗೆ ನವೆಂಬರ್ ಬಳಿಕ ಕಾಲಾವಧಿ ಉತ್ತಮವಾಗಿರಲಿದೆ.
ವೃಶ್ಚಿಕ ರಾಶಿ- ಈ ರಷಿಯ ಜನರಿಗೆ ವರ್ಷದ ಆರಂಭದಲ್ಲಿ ಮಹಿಳೆಯೋರ್ವರ ಸಹಯೋಗದಿಂದ ಭಾಗ್ಯದಲ್ಲಿ ಸಾಥ್ ಸಿಗಲಿದೆ. ಇದರಿಂದ ಈ ವ್ಯಕ್ತಿಗಳಿಗೆ ತಮ್ಮ ಕ್ಷೇತ್ರದಲ್ಲಿ ಪದೋನ್ನತಿ ಸಿಗುವ ಸಾಧ್ಯತೆ ಇದೆ. ನೌಕರಿ ಬದಲಾವಣೆ ಬಯಸುತ್ತಿದ್ದರೆ ಇದು ಉತ್ತಮ ಕಾಲವಾಗಿರಲಿದೆ. ಆದರೆ, ನವೆಂಬರ್ ಬಳಿಕ ಪ್ರಗತಿ ಸಾಧಿಸಲು ಹೆಚ್ಚಿನ ಪರಿಶ್ರಮಪಡುವ ಅಗತ್ಯತೆ ಇದೆ. ವ್ಯಾಪಾರಿಗಳಿಗೆ ಸೆಪ್ಟೆಂಬರ್ ಅವಧಿಯವರೆಗೆ ಪರಿಸ್ಥಿತಿ ಸಾಮಾನ್ಯಕ್ಕಿಂತ ಕೆಳಗೆ ಇರಲಿದ್ದು, ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ.
ಧನು ರಾಶಿ- ಈ ರಾಶಿಯ ಜನರಿಗೆ ಆರಂಭದ ದಿನಗಳಲ್ಲಿ ಒತ್ತಕ ಹೆಚ್ಚಾಗಿರಲಿದೆ. ಏಕೆಂದರೆ ಗ್ರಹಗಳ ಅನುಸಾರ ಹಣದ ಅನಾವಶ್ಯಕ ಹರಿವು ಮಾನಸಿಕ ಒತ್ತಡಕ್ಕೆ ಕಾರಣವಾಗಲಿದೆ. ಆದರೆ ನವೆಂಬರ್ ಬಳಿಕ ನಿಮ್ಮ ನೌಕರಿಯಲ್ಲಿನ ಸ್ಥಾನಾಂತರದಿಂದ ಉತ್ತಮ ಫಲಗಳು ಸಿಗುವ ಸಾಧ್ಯತೆ ಇದೆ. ವೆಚ್ಚದ ಮೇಲೆ ನಿಯಂತ್ರಣ ವಹಿಸುವ ಅವಶ್ಯಕತೆ ಇದೆ.
ಮಕರ ರಾಶಿ- ಅಕ್ಷಯ ತೃತಿಯಾ ಅಂಗವಾಗಿ ಗ್ರಹಗಳ ಸ್ಥಾನ ಪಲ್ಲಟದಿಂದ ಮಕರ ರಾಶಿಯ ಜಾತಕದವರಿಗೆ ಜೀವನದಲ್ಲಿ ಆರ್ಥಿಕ ಆದಾಯ ಹರಿದುಬರಲಿದೆ. ಶುಭ ಫಲ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳು ಹಾಗೂ ನೌಕರಿಯಲ್ಲಿರುವವರಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರತಿಷ್ಠೆ ಹಾಗೂ ಆರ್ಥಿಕ ಲಾಭ ಸಿಗಲಿದೆ.
ಕುಂಭ ರಾಶಿ-ಆರಂಭಿಕ ದಿನಗಳನ್ನು ಹೊರತುಪಡಿಸಿದರೆ ಈ ರಾಶಿಯ ಜಾತಕ ಹೊಂದಿದವರಿಗೆ ಉತ್ತಮ ಆರ್ಥಿಕ ಪರಿಣಾಮಗಳನ್ನು ಗಮನಿಸಲಾಗಿದೆ. ಜೂನ್ ಬಳಿಕದ ಕಾಲಾವಧಿ ನಿಮ್ಮ ಪಾಲಿಗೆ ಭಾಗ್ಯಶಾಲಿಯಾಗಿರಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನ ಪ್ರಾಪ್ತಿಯಾಗಲಿದೆ. ದೀರ್ಘಾವಧಿ ಹೂಡಿಕೆಗೆ ಈ ವರ್ಷ ಉತ್ತಮ. ಆದರೆ, ಕಾನೂನು ಹೋರಾಟದಲ್ಲಿ ಸ್ವಲ್ಪ ಧನಹಾನಿಯಾಗುವ ಸಾಧ್ಯತೆ ಇದೆ. ನವೆಂಬರ್ 2020- ಮಾರ್ಚ್ 2021 ರ ನಡುವೆ ಸ್ಥಿತಿಯಲ್ಲಿ ಸ್ಥಿರತೆ ಬರಲಿದೆ. ಈ ಅವಧಿಯಲ್ಲಿ ಸಾಲ ಪಡೆಯುವುದರಿಂದ ದೂರ ಇರಿ.
ಮೀನ ರಾಶಿ- ಮೀನ ರಾಶಿಯ ಜನರಿಗೆ ಈ ವರ್ಷ ವಿಶೇಷವಾಗಿ ಭಾಗ್ಯಶಾಲಿಯಾಗಿರಲಿದೆ. ಈ ವರ್ಷ ಗ್ರಹಗಳ ಸ್ಥಾನಪಲ್ಲಟ ನಿಮ್ಮ ರಾಶಿಗೆ ರಾಜಯೋಗದ ಸಂಕೇತಗಳನ್ನು ನೀಡುತ್ತಿವೆ. ಈ ವರ್ಷ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ಅಕ್ಷಯ ತೃತಿಯಾ ಆರಂಭದಲ್ಲಿಯೂ ಕೂಡ ಬಹುಯ್ತೇಕ ಗ್ರಹಗಳು ನಿಮ್ಮ ರಾಶಿಯ ದ್ವಿತೀಯ ಹಾಗೂ ಏಕಾದಶ ಭಾವದಲ್ಲಿ ಇರಲಿದ್ದು, ಇವು ನಿಮ್ಮನ್ನು ಆರ್ಥಿಕವಾಗಿ ಬಲಿಷ್ಠಗೋಳಿಸಲಿವೆ.