ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕು ಸರಿಯಾದ ಕೊನದಲ್ಲಿದ್ದರೆ ಬದಲಾಗುತ್ತೆ ಭಾಗ್ಯ

ವಾಸ್ತುಶಾಸ್ತ್ರದಲ್ಲಿ ಈಶಾನ್ಯ ದಿಕ್ಕನ್ನು ಎಲ್ಲಕ್ಕಿಂತ ಪವಿತ್ರ ದಿಕ್ಕು ಎಂದು ಹೇಳಲಾಗಿದೆ. 

Last Updated : Sep 30, 2020, 05:40 PM IST
  • ವಾಸ್ತುಶಾಸ್ತ್ರದಲ್ಲಿ ಈಶಾನ್ಯ ದಿಕ್ಕನ್ನು ಎಲ್ಲಕ್ಕಿಂತ ಪವಿತ್ರ ದಿಕ್ಕು ಎಂದು ಹೇಳಲಾಗಿದೆ.
  • ಈ ದಿಕ್ಕಿನ ವಿಸ್ತಾರ 22.5 ಡಿಗ್ರೀ ಯಿಂದ 67.5 ಡಿಗ್ರಿಯವರೆಗೆ ಇರುತ್ತದೆ.
  • ಯಾವ ವ್ಯಕ್ತಿಗಳ ಮೂಲಾಂಕ ಅಥವಾ ಭಾಗ್ಯಾಂಕ ಮೂರು ಆಗಿರುತ್ತದೆಯೋ ಅವರಿಗೆ ಈ ದಿಕ್ಕು ಯಾವಾಗಲು ಶುಭ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕು ಸರಿಯಾದ ಕೊನದಲ್ಲಿದ್ದರೆ ಬದಲಾಗುತ್ತೆ ಭಾಗ್ಯ title=

ನವದೆಹಲಿ: ವಾಸ್ತುಶಾಸ್ತ್ರ(Vastu) ದಲ್ಲಿ ಈಶಾನ್ಯ ದಿಕ್ಕನ್ನು ಎಲ್ಲಕ್ಕಿಂತ ಪವಿತ್ರ ದಿಕ್ಕು ಎಂದು ಹೇಳಲಾಗಿದೆ. ಈ ದಿಕ್ಕಿನ ವಿಸ್ತಾರ 22.5 ಡಿಗ್ರೀ ಯಿಂದ 67.5 ಡಿಗ್ರಿಯವರೆಗೆ ಇರುತ್ತದೆ. ಈ ದಿಕ್ಕು ಉತ್ತರ ಹಾಗೂ ಪೂರ್ವ ದಿಕ್ಕುಗಳ ಕೋನವಾಗಿರುತ್ತದೆ. ದೇವಾಧಿದೇವ ಶಿವ ಈ ದಿಕ್ಕಿಗೆ ಯಜಮಾನ. ಈ ದಿಕ್ಕಿನ ಅಧಿಪತ್ಯ ಬೃಹಸ್ಪತಿ ದೇವನ ಬಳಿ ಇದೆ. ಇದೊಂದು ಆಧ್ಯಾತ್ಮಿಕ ದಿಕ್ಕು ಆಗಿದೆ. ಈಶಾನ್ಯ ದಿಕ್ಕಿನಲ್ಲಿ ಮನೆಯ ದೇವರ ಕೋಣೆ, ಸ್ನಾನ ಗೃಹ, ಮಕ್ಕಳ ಕೋಣೆ, ಸ್ಟಡಿ ರೂಮ್ ಹಾಗೂ ಪಡಸಾಲೆ ಇರುವುದು ಶುಭ ಎನ್ನಲಾಗುತ್ತದೆ. ಈ ದಿಕ್ಕನ್ನು ಯಾವಾಗಲು ಸ್ವಚ್ಛ, ಖಾಲಿ ಹಾಗೂ ಕೆಳಗೆ ರಚಿಸಬೇಕು ಎನ್ನಲಾಗುತ್ತದೆ.

ಇದನ್ನು ಓದಿ- ಗೃಹ ಪ್ರವೇಶ ಮಾಡುವ ಮುನ್ನ ಈ ಸಂಗತಿಗಳನ್ನು ನೆನಪಿಡಿ, ಸುಖ ಹಾಗೂ ಸಮೃದ್ಧಿ ನಿಮ್ಮದಾಗುತ್ತದೆ

ಮನೆಯ ಪ್ರವೇಶ ಕಿಟಕಿಗಳನ್ನುಈ ದಿಕ್ಕಿನಲ್ಲಿ ಹೆಚ್ಚು ಶುಭವೆಂದು ಪರಿಗಣಿಸಲಾಗಿದೆ. ಈ ದಿಕ್ಕು ಮನೆಯಲ್ಲಿ ಪುತ್ರ ಸಂತಾನ ಹಾಗು ಧನ ಸಮೃದ್ಧಿಯ ಕೋನವಾಗಿದೆ. ಈ ದಿಕ್ಕು ಕೊಳೆಯಾದರೆ ಮನೆಯಲ್ಲಿ ಸಂಪತ್ತಿನ ಕೊರತೆ ಇರುತ್ತದೆ. ನೀವು ಮಗ ಮತ್ತು ಮಗುವಿನ ಬಗ್ಗೆ ಅಸಮಾಧಾನವನ್ನು ಹೊಂದುವಿರೀ. ಈ ದಿಕ್ಕಿನಲ್ಲಿ, ಶೌಚಾಲಯಗಳು, ಅಡಿಗೆಮನೆಗಳು, ಲಿವಿಂಗ್ ರೂಂ , ಮನೆ ಮಾಲೀಕರ ಕೊಠಡಿಯನ್ನು ಎಂದಿಗೂ ನಿರ್ಮಿಸಬೇಡಿ. ಇಲ್ಲದಿದ್ದರೆ ಮನೆಯ ವಾತಾವರಣವು ಹಾಳಾಗುತ್ತದೆ. ಪರಸ್ಪರ ಕಲಹ, ಇರುಸು ಮುರುಸು ಎದುರಾಗುತ್ತದೆ.  ಮಗುವಿಗೆ ದೈಹಿಕ ತೊಂದರೆಗಳು, ಅನಾರೋಗ್ಯ ಕಾಡುತ್ತದೆ. ಆದ್ದರಿಂದ, ವಾಸ್ತು ಶಾಸ್ತ್ರದ ಪ್ರಕಾರ, ಈಶಾನ್ಯ ದಿಕ್ಕನ್ನು ಯಾವಾಗಲೂ ಖಾಲಿಯಾಗಿರಲು ಸೂಚಿಸಲಾಗುತ್ತದೆ. ಈ ದಿಕ್ಕಿನಲ್ಲಿ ಮನೆಯ ಇಳಿಜಾರು ತುಂಬಾ ಶುಭವಾಗಿದೆ.

ಇದನ್ನು ಓದಿ- ಧನ ದೇವತೆ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಈ ಹತ್ತು ಉಪಾಯಗಳನ್ನು ಅನುಸರಿಸಿ

ಯಾವ ವ್ಯಕ್ತಿಗಳ ಮೂಲಾಂಕ ಅಥವಾ ಭಾಗ್ಯಾಂಕ ಮೂರು ಆಗಿರುತ್ತದೆಯೋ ಅವರಿಗೆ ಈ ದಿಕ್ಕು ಯಾವಾಗಲು ಶುಭ ಎಂದು ಹೇಳಲಾಗುತ್ತದೆ. ಆದರೆ, ಯಾವುದೇ ವ್ಯಕ್ತಿಗಳ ಜನನ ಯಾವುದೇ ಮಾಸದ 3, 12, 21, 30  ದಿನಾಂಕದಂದು ಆಗಿದೆಯೋ, ಅವರ ಮೂಲ್ಯಾಂಕ ಮೂರು ಆಗಿರುತ್ತದೆ. ಅಂತಹ ವ್ಯಕ್ತಿಗಳಿಗೆ ಈ ದಿಕ್ಕು ತುಂಬಾ ಶುಭವೆಂದು ಹೇಳಲಾಗುತ್ತದೆ. ಈ ದಿಕ್ಕಿನಲ್ಲಿ ಸ್ಟೋರ್ ರೂಂ, ಕಸದ ತೊಟ್ಟಿ, ಶೌಚಾಲಯ ಎಂದಿಗೂ ನಿರ್ಮಿಸಬೇಡಿ. ಇಲ್ಲದೆ ಹೋದರೆ ನಿಮ್ಮ ಪ್ರತಿಷ್ಠೆಯಲ್ಲಿ ಕೊರತೆ ಎದುರಾಗುತ್ತದೆ ಹಾಗೂ ಸಂತಾನ ಸುಖದ ಅಭಾವ ಎದುರಾಗುತ್ತದೆ. ಈ ದಿಕ್ಕಿನಲ್ಲಿ ಒಂದು ವೇಳೆ ಬಾಗಿಲು ಇಲ್ಲದಿದ್ದರೆ, ಕನ್ಸಿಷ್ಟ ಒಂದೆರಡು ಕಿಟಕಿಗಳನ್ನಾದರು ನಿರ್ಮಿಸಿ. ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕಿನ ಬೆಳವಣಿಗೆ ಎಂದಿಗೂ ಕೂಡ ಶುಭ. ಒಂದು ವೇಳೆ ಈ ದಿಕ್ಕು ಕಡಿತಗೊಂಡಿದ್ದಾರೆ ಅಥವಾ ಚಿಕ್ಕದಾಗಿದ್ದರೆ. ಇದು ಇಡೀ ಮನೆಯ ವಾಸ್ತು ಹಾಳುಗೆಡವುತ್ತದೆ.  ಹೀಗಾಗಿ ಈ ದಿಕ್ಕನ್ನು ಎಂದಿಗೂ ಕೂಡ ಸಮಕೋಣದಲ್ಲಿಡಿ. ಇದರಿಂದ ದೇವಿ ಲಕುಮಿ ಪ್ರಸನ್ನಳಾಗುತ್ತಾಳೆ. ಮನೆಯಲ್ಲಿ ಧನಾಗಮನಕ್ಕೆ ಈ ದಿಕ್ಕು ತುಂಬಾ ಮಹತ್ವದ್ದಾಗಿದೆ. ಒಂದು ವೇಳೆ ಈ ದಿಕ್ಕಿನಲ್ಲಿ ಯಾವುದಾದರು ದೋಷವಿದ್ದರೆ, ಈ ದಿಕ್ಕಿನಲ್ಲಿ ಒಂದು ಕನ್ನಡಿ ಹಾಕಿ. ಇದರಿಂದ ದಿಕ್ಕು ಬೆಳವಣಿಗೆಯ ಅನುಭವ ಉಂಟಾಗುತ್ತದೆ. ಈ ದಿಕ್ಕಿನಲ್ಲಿ ಜಡ ವಸ್ತುವನ್ನು ಅಪ್ಪಿತಪ್ಪಿಯೂ ಕೂಡ ಇಡಬೇಡಿ. ಏಕೆಂದರೆ ಈ ದಿಕ್ಕು ವಾಸ್ತು ಪುರುಷನ ಮಸ್ತಿಷ್ಕವಾಗಿರುತ್ತದೆ. ಮಸ್ತಿಷ್ಕದಿಂದಲೇ ಶರೀರದ ಸಂಚಾರ ಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. (ಸಾಮಾನ್ಯ ಓದುಗರ ಸ್ಸದಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಈ ಲೇಖನ ಬರೆಯಲಾಗಿದೆ)

Trending News