ಆರೋಗ್ಯಕರ ದೀಪಾವಳಿ ಹಬ್ಬದ ಆಚರಣೆಗೆ ಸಪ್ತ ಸೂತ್ರಗಳು

ದೀಪಾವಳಿ ಹಬ್ಬ ಬಂದಾಗ ನಾವು ಆಚರಣೆಯನ್ನು ವೈವಿಧ್ಯಮ ಸಿಹಿತಿಂಡಿ ತಿನಿಸುಗಳು ಹಾಗೂ ವಿದ್ಯುತ್ ಅಲಂಕಾರಗಳು ಹೀಗೆ ಬಗೆ ಬಗೆ  ಬಣ್ಣದ ಮೂಲಕ ದೀಪಾವಳಿಯನ್ನು ಆಚರಿಸುತ್ತವೆ. ಜೊತೆಗೆ ಪಟಾಕಿಗಳನ್ನು ಹೊಡೆದು ಸಂಭ್ರಮಿಸುತ್ತೇವೆ. ಇಂತಹ ಹಬ್ಬ ಕೆಲವೊಮ್ಮೆ ಸಂತಸದ ಜೊತೆಗೆ ದುಃಖಕ್ಕೂ ಕಾರಣವಾಗಬಹುದು ಈ ನಿಟ್ಟಿನಲ್ಲಿ ನೀವು ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸುವುದು ಅತ್ಯಂತ ಅವಶ್ಯಕ. 

Last Updated : Nov 6, 2018, 05:30 PM IST
ಆರೋಗ್ಯಕರ ದೀಪಾವಳಿ ಹಬ್ಬದ ಆಚರಣೆಗೆ ಸಪ್ತ ಸೂತ್ರಗಳು  title=

ನವದೆಹಲಿ: ದೀಪಾವಳಿ ಹಬ್ಬ ಬಂದಾಗ ನಾವು ಆಚರಣೆಯನ್ನು ವೈವಿಧ್ಯಮ ಸಿಹಿತಿಂಡಿ ತಿನಿಸುಗಳು ಹಾಗೂ ವಿದ್ಯುತ್ ಅಲಂಕಾರಗಳು ಹೀಗೆ ಬಗೆ ಬಗೆ  ಬಣ್ಣದ ಮೂಲಕ ದೀಪಾವಳಿಯನ್ನು ಆಚರಿಸುತ್ತವೆ. ಜೊತೆಗೆ ಪಟಾಕಿಗಳನ್ನು ಹೊಡೆದು ಸಂಭ್ರಮಿಸುತ್ತೇವೆ. ಇಂತಹ ಹಬ್ಬ ಕೆಲವೊಮ್ಮೆ ಸಂತಸದ ಜೊತೆಗೆ ದುಃಖಕ್ಕೂ ಕಾರಣವಾಗಬಹುದು ಈ ನಿಟ್ಟಿನಲ್ಲಿ ನೀವು ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸುವುದು ಅತ್ಯಂತ ಅವಶ್ಯಕ. 

ಹಾಗಾಗಿ ನಾವು ದೀಪಾವಳಿಯಲ್ಲಿ ನಿಮ್ಮ ಕ್ಷೇಮಕ್ಕಾಗಿ ಏಳು ಸೂತ್ರಗಳ ಮೂಲಕ ಖುಷಿ ಖುಷಿಯಾಗಿ ಹಬ್ಬವನ್ನು ಆಚರಿಸಲು ನಿಮಗೆ ಸಪ್ತ ಸಲಹೆಗಳನ್ನು ನೀಡಲು ಇಚ್ಚಿಸುತ್ತೇವೆ. 

ಆರೋಗ್ಯಕರ ಆಹಾರ ಸೇವನೆ 

ಈ ವರ್ಷ ದೀಪಾವಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಸಾಧ್ಯವಾದಷ್ಟು ಕೊಬ್ಬಿನ ಆಹಾರ, ತುಪ್ಪದ ಪದಾರ್ಥ, ಸಿಹಿತಿಂಡಿಗಳು ಮತ್ತು ಇತರ ಕರಿದ ತಿನಿಸುಗಳು ಸೇವೆಸುವುದನ್ನು ಕಡಿಮೆ ಮಾಡಿ ಜೊತೆಗೆ ಅಲ್ಯುಮಿನಿಯಂ ಕಲಬೆರಕೆಯಿಂದ ತಯಾರಿಸಿದ ಸಿಹಿ ತಿಂಡಿಯನ್ನು ದೂರವಿಡಿ  ಇದು ನಿಮ್ಮ ದೇಹಕ್ಕೆ ಅಪಾಯಕಾರಿಯಾಗಿದೆ.

ಹೆಚ್ಚು ನೀರನ್ನು ಕುಡಿಯಿರಿ

ಹಬ್ಬದ ಸಂದರ್ಭದಲ್ಲಿ ಅಧಿಕ ನೀರಿನ ಸೇವನೆ ಅಗತ್ಯವಾಗಿದೆ. ಹೆಚ್ಚು ನೀರನ್ನು ಸೇವನೆ ಮಾಡುವುದರ ಮೂಲಕ ನಿಮ್ಮ ದೇಹದಲ್ಲಿನ ತ್ಯಾಜ್ಯ ವಸ್ತುಗಳನ್ನು ಅದು ಶುದ್ದಿಕರಿಸುತ್ತದೆ. ಆ ಮೂಲಕ ನಿಮ್ಮ ದೇಹವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಕೃತಕ ಸಿಹಿತಿಂಡಿಗಳಿಂದ ದೂರವಿರಿ 

ಮೆದುಳಿನ ಗೆಡ್ಡೆ ಅಥವಾ ಕ್ಯಾನ್ಸರ್ಗೆ ಕಾರಣವಾಗುವ ಕೃತಕ ಸಿಹಿ ಪದಾರ್ಥಗಳಿಂದ ದೂರವಿಡಿ ಸಿಹಿತಿಂಡಿಗಳಲ್ಲಿ ರಾಸಾಯನಿಕ ಸಂರಕ್ಷಕಗಳನ್ನು ಬಳಸುವುದರಿಂದ ಮೂತ್ರಪಿಂಡ ಅಥವಾ ಯಕೃತ್ತಿನ ಹಾನಿ, ಆಸ್ತಮಾ ಮತ್ತು ಕ್ಯಾನ್ಸರ್ ಕಾರಣವಾಗುತ್ತದೆ. ಹೆಚ್ಚಾಗಿ ಸಕ್ಕರೆ ಅಥವಾ ಬೆಲ್ಲದಿಂದ ತಯಾರಿಸಿದ ಸಿಹಿತಿನಿಸುಗಳನ್ನು ಬಳಸಿರಿ. 

ಆಲ್ಕೋಹಾಲ್ ಸೇವನೆ ಮಿತಿಯಲ್ಲಿರಲಿ

ದೀಪಾವಳಿ ಸಮಯದಲ್ಲಿ ಆಲ್ಕೊಹಾಲ್ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಏಕೆಂದರೆ ಅಧಿಕ ಆಲ್ಕೊಹಾಲ್ ಸೇವೆನೆ  ನಿರ್ಜಲೀಕರಣವನ್ನು ಉಂಟುಮಾಡುತ್ತದೆ,  ನಿಮ್ಮ ಧನಿವನ್ನು ಹೆಚ್ಚಿಸುತ್ತದೆ. ಶುಭ ದಿನಗಳಲ್ಲಿ ಇದು ಅಘಘಾತವನ್ನು ಹೆಚ್ಚಿಸುತ್ತದೆ. ಆದುದರಿಂದ ಆಚರಣೆಯ ಸಮಯದಲ್ಲಿ ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಿ ಮತ್ತು ಈ ಸಮಯದಲ್ಲಿ ಹೊಸ ಹಣ್ಣಿನ ರಸಗಳು ಮತ್ತು ಸೂಪ್ಗಳನ್ನು ಸೇವಿಸಿ. 

ಪಟಾಕಿಗೆ ಹಾಕಿ ಕತ್ತರಿ 

ಪಟಾಕಿ ಇಲ್ಲದೆ ದೀಪಾವಳಿ ಸಾಧ್ಯವಿಲ್ಲ ಎನ್ನುವವರು ಮಾಲಿನ್ಯದ ನಿಯಂತ್ರಣಕ್ಕಾದರು ಪಟಾಕಿ ಹೊಡೆಯುವ ಪ್ರಮಾಣದಲ್ಲಿ ಕಡಿತಗೊಳಿಸಬೇಕು.

ಪ್ರಥಮ ಚಿಕಿತ್ಸಾ ಕಿಟ್ ಜೊತೆಗಿರಲಿ

ದೀಪಾವಳಿಯ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಪ್ರಥಮ ಚಿಕಿತ್ಸೆ ಕಿಟ್ ನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಏಕೆಂದರೆ ಪಟಾಕಿಗಳೊಂದಿಗೆ ಆಡುವಾಗ ಯಾರಿಗಾದರು ಗಾಯ ಸಂಭವಿಸಿದರೆ ಇದನ್ನು ಬಳಸಬಹುದು 

ನಿಮ್ಮ ಕಿವಿ ಮತ್ತು ಮುಖವನ್ನು ರಕ್ಷಿಸಿಕೊಳ್ಳುವುದು ಉತ್ತಮ

ದೀಪಾವಳಿಯಲ್ಲಿ  ಪಟಾಕಿಯಿಂದ ಹೊರಹೊಮ್ಮುವ ಕರ್ಕಸ ಶಬ್ದವು ಕೆಲವೊಮ್ಮೆ ನಿಮ್ಮ ಕಿವಿಯನ್ನು ಹಾಳು ಮಾಡಬಹುದು ಜೊತೆಗೆ ನಿಮ್ಮ ಮುಖಕ್ಕೆ ಕೆಲವು ವೇಳೆ ಅದು ಅಪಾಯಕಾರಿಯಾಗಿ ಪರಿಣಮಿಸಬಹುದು ಈ ಹಿನ್ನಲೆಯಲ್ಲಿ ಇವುಗಳನ್ನು ರಕ್ಷಿಸಿಕೊಳ್ಳಲು ಮಾಸ್ಕ್ ಗಳನ್ನು ಬಳಸುವುದು ಉತ್ತಮವಾದದ್ದು.
 
 

Trending News