Ganesh Chaturthi : ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ, ಇಲ್ಲದಿದ್ದರೆ ಪೂಜೆ ಅಪೂರ್ಣವಾಗುತ್ತದೆ

Ganesh Chaturthi 2022: ಗಣಪತಿ ಬಪ್ಪನಿಗೆ ಮೋದಕ ಮತ್ತು ಕಡುಬು ಬಹಳ ಪ್ರಿಯ. ಧರ್ಮಗ್ರಂಥಗಳ ಪ್ರಕಾರ, ಗಣೇಶನ ಆರಾಧನೆಯು ಈ ವಿಷಯಗಳಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗಿದೆ.

Written by - Chetana Devarmani | Last Updated : Aug 31, 2022, 04:10 PM IST
  • ಇಂದು ದೇಶದೆಲ್ಲೆಡೆ ಗಣೇಶ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ
  • ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ, ಇಲ್ಲದಿದ್ದರೆ ಪೂಜೆ ಅಪೂರ್ಣವಾಗುತ್ತದೆ
  • ಗಣಪತಿ ಬಪ್ಪನಿಗೆ ಮೋದಕ ಮತ್ತು ಕಡುಬು ಬಹಳ ಪ್ರಿಯ
Ganesh Chaturthi : ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ, ಇಲ್ಲದಿದ್ದರೆ ಪೂಜೆ ಅಪೂರ್ಣವಾಗುತ್ತದೆ  title=
ಗಣಪತಿ

Ganesh Chaturthi 2022: ಇಂದು ದೇಶದೆಲ್ಲೆಡೆ ಗಣೇಶ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಂದು, ಆಗಸ್ಟ್ 31, ಬುಧವಾರ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಗಣಪತಿ ಬಪ್ಪಾ ಮುಂದಿನ 10 ದಿನಗಳ ಕಾಲ ತಮ್ಮ ಭಕ್ತರೊಂದಿಗೆ ಇರುತ್ತಾರೆ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ, ಭಕ್ತರು ಗಣಪತಿಯನ್ನು ಮೆಚ್ಚಿಸಲು ಸಾಕಷ್ಟು ಸೇವೆಯನ್ನು ಮಾಡುತ್ತಾರೆ. ಗಣೇಶನಿಗೆ ನೆಚ್ಚಿನ ನೈವೇದ್ಯ ಅರ್ಪಿಸಿ. ಹೀಗೆ ಮಾಡುವುದರಿಂದ ಗಣಪತಿಯು ಬೇಗ ಪ್ರಸನ್ನನಾಗುತ್ತಾನೆ.

ಇದನ್ನೂ ಓದಿ: ಗಣೇಶ ಚತುರ್ಥಿ ಹಿನ್ನೆಲೆ ಚಾಮರಾಜಪೇಟೆ ಈದ್ಗಾ ಮೈದಾನದ ಸುತ್ತ ಖಾಕಿ ಸರ್ಪಗಾವಲು

ಗಣಪತಿಗೆ ಈ ವಸ್ತುಗಳನ್ನು ಅರ್ಪಿಸಿ: 

ಗಣಪತಿ ಬಪ್ಪನಿಗೆ ಮೋದಕ ಮತ್ತು ಕಡುಬು ಬಹಳ ಪ್ರಿಯ. ಧರ್ಮಗ್ರಂಥಗಳ ಪ್ರಕಾರ, ಗಣೇಶನ ಆರಾಧನೆಯು ಈ ವಿಷಯಗಳಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಪೂಜೆಯಲ್ಲಿ ಗಣೇಶನಿಗೆ ಮೋದಕ ಮತ್ತು ಕಡುಬನ್ನು ಅರ್ಪಿಸುವ ಮೂಲಕ, ಭಗವಂತನು ಶೀಘ್ರದಲ್ಲೇ ಪ್ರಸನ್ನನಾಗುತ್ತಾನೆ ಮತ್ತು ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಇದಲ್ಲದೇ ಗಣಪತಿಗೆ ಮೋತಿಚೂರು ಲಡ್ಡೂ ತುಂಬಾ ಪ್ರಿಯ. 10 ದಿನಗಳಲ್ಲಿ, ಭಕ್ತರು ಬೆಳಿಗ್ಗೆ ಮತ್ತು ಸಂಜೆ ಗಣೇಶನಿಗೆ ವಿವಿಧ ಸಿಹಿತಿಂಡಿಗಳು ಮತ್ತು ಭಕ್ಷ್ಯಗಳನ್ನು ಅರ್ಪಿಸುತ್ತಾರೆ. ಮಹಿಳೆಯರು ಮನೆಯಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ಮಾಡುತ್ತಾರೆ. ಮೋದಕವನ್ನು ಮನೆಯಲ್ಲಿಯೂ ಸುಲಭವಾಗಿ ತಯಾರಿಸಬಹುದು. ಇದಕ್ಕಾಗಿ, ಮೋದಕಗಳನ್ನು ತಯಾರಿಸುವ ಪಾಕವಿಧಾನಗಳು ವಿವಿಧ ಆಹಾರ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: Ramya : ಗಣೇಶ ಹಬ್ಬದಂದು ಸಿಹಿ ಸುದ್ದಿ ಕೊಟ್ರು ರಮ್ಯಾ! ಸಿನಿಮಾನಾ? ಮದುವೆನಾ? ಇಲ್ಲಿದೆ ಉತ್ತರ

ಗಣೇಶ ಹಬ್ಬದ ಸಮಯದಲ್ಲಿ, ಗಣೇಶನಿಗೆ ಸಾತ್ವಿಕ ವಸ್ತುಗಳನ್ನು ಮಾತ್ರ ಅರ್ಪಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಬೆಳ್ಳುಳ್ಳಿ-ಈರುಳ್ಳಿ, ಬಲವಾದ ಮಸಾಲೆಗಳನ್ನು ಯಾವುದರಲ್ಲೂ ಬಳಸಬೇಡಿ. ಅಂದಹಾಗೆ, ಈ ಸಮಯದಲ್ಲಿ ಎಲ್ಲರೂ ಸಾತ್ವಿಕ ಆಹಾರವನ್ನು ಸೇವಿಸಬೇಕು. ಅಲ್ಲದೆ, ಯಾವಾಗಲೂ ಸ್ನಾನದ ನಂತರವೇ ಅಡುಗೆ ಮಾಡಿ, ನೈವೇದ್ಯ ಮಾಡಬೇಕು. ಅಡುಗೆ ಮಾಡುವಾಗ ಮನಸ್ಸು ಸಕಾರಾತ್ಮಕವಾಗಿರಬೇಕು. ಯಾರ ಬಗ್ಗೆಯೂ ಕೆಟ್ಟದಾಗಿ ಯೋಚಿಸಬೇಡಿ ಮತ್ತು ಸಂಪೂರ್ಣ ಭಕ್ತಿಯಿಂದ ಗಣೇಶನಿಗೆ ನೈವೇದ್ಯ ಅರ್ಪಿಸಿ.

(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News