Ramya : ಗಣೇಶ ಹಬ್ಬದಂದು ಸಿಹಿ ಸುದ್ದಿ ಕೊಟ್ರು ರಮ್ಯಾ! ಸಿನಿಮಾನಾ? ಮದುವೆನಾ? ಇಲ್ಲಿದೆ ಉತ್ತರ

Ramya : ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ರಮ್ಯಾ ನಿನ್ನೆ ಅಭಿಮಾನಗಳ ತಲೆಗೆ ಹುಳ ಬಿಟ್ಟಿದ್ದರು. ನಾಳೆ ಸಿಹಿ ಸುದ್ದಿ ಕೊಡ್ತೀನಿ ಎಂದು ಹೇಳಿ ಕುತೂಹಲ ಕೆರಳಿಸಿದ್ದರು. ಇದನ್ನು ನೋಡಿದ ಅನೇಕರು ಸಿನಿಮಾನಾ? ಮದುವೆನಾ? ಎಂದು ಚಿಂತಿಸುತ್ತಿದ್ದರು. 

Written by - Chetana Devarmani | Last Updated : Aug 31, 2022, 11:49 AM IST
  • ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ರಮ್ಯಾ
  • ಗಣೇಶ ಹಬ್ಬದಂದು ಸಿಹಿ ಸುದ್ದಿ ಕೊಟ್ರು ರಮ್ಯಾ!
  • ಸಿನಿಮಾನಾ? ಮದುವೆನಾ? ಇಲ್ಲಿದೆ ಉತ್ತರ
Ramya : ಗಣೇಶ ಹಬ್ಬದಂದು ಸಿಹಿ ಸುದ್ದಿ ಕೊಟ್ರು ರಮ್ಯಾ! ಸಿನಿಮಾನಾ? ಮದುವೆನಾ? ಇಲ್ಲಿದೆ ಉತ್ತರ  title=
ರಮ್ಯಾ

Ramya : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿನ್ನೆ ಅಭಿಮಾನಗಳ ತಲೆಗೆ ಹುಳ ಬಿಟ್ಟಿದ್ದರು. ನಾಳೆ ಸಿಹಿ ಸುದ್ದಿ ಕೊಡ್ತೀನಿ ಎಂದು ಹೇಳಿ ಕುತೂಹಲ ಕೆರಳಿಸಿದ್ದರು. ಇದನ್ನು ನೋಡಿದ ಅನೇಕರು ಸಿನಿಮಾನಾ? ಮದುವೆನಾ? ಎಂದು ಚಿಂತಿಸುತ್ತಿದ್ದರು. ಎಲ್ಲ ಪ್ರಶ್ನೆಗಳಿಗೆ ರಮ್ಯಾ ಇದೀಗ ಉತ್ತರ ನೀಡಿದ್ದಾರೆ. ಚಿತ್ರರಂಗ ತೊರೆದು ಹಲವು ವರ್ಷಗಳೇ ಕಳೆದಿದ್ದು, ಮರಳಿ ಸಿನಿರಂಗಕ್ಕೆ ಮರಳುವ ಬಗ್ಗೆ ಮುಖ್ಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಶುಬ್ಮನ್ ಗಿಲ್ ಪ್ರೇಮ್ ಕಹಾನಿ: ಸಾರಾಳಿಂದ ಸಾರಾ ಅಲಿಖಾನ್ ವರೆಗೆ...

ಈ ಬಗ್ಗೆ ಟ್ವೀಟ್‌ ಮಾಡಿರುವ ಮೋಹಕ ತಾರೆ ರಮ್ಯಾ, "ಎಲ್ಲರಿಗೂಗಣೇಶ ಹಬ್ಬದ ಶುಭಾಶಯಗಳು. ಸಿಹಿ ಸುದ್ದಿ ಕುರಿತು ನಿಮ್ಮೆಲ್ಲರ ಊಹೆ ಸರಿಯಾಗಿದೆ. ನಾನು ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಿದ್ದೇನೆ. ಹೌದು, ನಾನು ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಿದ್ದೇನೆ. ಆದರೆ ಈ ಬಾರಿ ನನ್ನ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟಡಿಯೋಸ್‌ನ ಮೂಲಕ ನಿರ್ಮಾಪಕಿಯಾಗಲಿದ್ದೇನೆ. ಎನ್ನುವುದು ವಿಶೇಷ" ಎಂದು ಬರೆದುಕೊಂಡಿದ್ದಾರೆ. 

 

 

"ಏನಿದು ಆಪಲ್ ಬಾಕ್ಸ್- ಅದೊಂದು ಸಾಧಾರಣವಾದ, ಆದರೆ ಅಷ್ಟೇ ಉಪಯುಕ್ತವಾದ, ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆಪಲ್ ಬಾಕ್ಸ್ ಜೊತೆಗಿದೆ. ಸೆಟ್ನಲ್ಲಿ ಕೂರಲು ಕುರ್ಚಿಗಳಿಲ್ಲದೇ ಇದ್ದಾಗ ಅಥವಾ ಕ್ಯಾಮರಾದ, ಇಲ್ಲವೇ ನಟರ ಎತ್ತರ ಹೆಚ್ಚಿಸಬೇ ಕಾದಾಗ ಈ ಆಪಲ್ ಬಾಕ್ಸ್ ನೆರವಿಗೆ ಬಂದಿದೆ * ಈ ಪೆಟ್ಟಿಗೆಯ ಸರಳತೆ ನನಗೆ ಸದಾ ಸ್ಪೂರ್ತಿಯಾಗಿ ನನ್ನನ್ನು ಪ್ರೇರೇಪಿಸಿದೆ. ಪ್ರಸ್ತುತ, ಆಪಲ್ ಬಾಕ್ಸ್ ಸಂಸ್ಥೆ ಎರಡು ಚಿತ್ರಗಳನ್ನು ನಿರ್ಮಿಸಲು ಸಜ್ಜಾಗಿದೆ ಎಂದು ಹೇಳುವಲ್ಲಿ ನನಗೆ ಸಂತಸವಿದೆ. ಈ ಎರಡೂ ಚಿತ್ರಗಳು ಕೆ.ಆರ್.ಜಿ ಸಂಸ್ಥೆಯ ವಿತರಣೆಯ ಮೂಲಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿವೆ. ಅದರ ಜೊತೆಯಲ್ಲೇ ಒ.ಟಿ.ಟಿ ಪ್ಲಾಟ್ ಫಾರಂಗಳಿಗಾಗಿ ಸಿನಿಮಾ ಹಾಗು ವೆಬ್ ಸೀರೀಸ್ ನಿರ್ಮಾಣ ಮಾಡಲು ಆಪಲ್ ಬಾಕ್ಸ್ ಸ್ಟಡಿಯೋಸ್ ಸಿದ್ಧವಾಗುತ್ತಿದೆ." ಎಂದು ರಮ್ಯಾ ಹೇಳಿದ್ದಾರೆ. 

ಇದನ್ನೂ ಓದಿ: ಗೌರಿಹಬ್ಬದಂದು "ಲಂಕಾಸುರ" ನ ಎರಡನೇ ಹಾಡು ಬಿಡುಗಡೆ

"ಈ ಬಗ್ಗೆ ಮತ್ತಷ್ಟು ಹೊಸ ವಿವರಗಳನ್ನು ಆಪಲ್ ಬಾಕ್ಸ್‌ನ ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷಿಸಿ. ನನ್ನೆಲ್ಲಾ ಪ್ರಯತ್ನಗಳಲ್ಲೂ ನಿರಂತರವಾಗಿ ಜೊತೆಗಿರುವ ನನ್ನ ಕುಟುಂಬ, ಸ್ನೇಹಿತರು, ಹಿತೈಷಿಗಳು, ಸಿನಿಮಾವರ್ಗದವರು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನ ಪ್ರೀತಿಯ ಅಭಿಮಾನಿಗಳಿಗೆ ಹೃತ್ತೂರ್ವಕ ವಂದನೆಗಳು. ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಬೆಲೆ ಕಟ್ಟಲಾಗದ್ದು. ಇದರ ಜೊತೆಗೆ ವಿಜಯ ಕಿರಗಂದೂರ್, ಜಯಣ್ಣ, ಯೋಗಿ ಜಿ ರಾಜ್ ಮತ್ತು ಕಾರ್ತಿಕ್ ಗೌಡ ಇವರಿಗೂ ವಿಶೇಷ ಧನ್ಯವಾದಗಳು. ಹೊಸ ಆರಂಭದತ್ತಹೆಜ್ಜೆ ಇಡುತ್ತಾ... ಕೃತಜ್ಞತೆಗಳೊಂದಿಗೆ ರಮ್ಯಾ" ಎಂದು ರಮ್ಯಾ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News