Makar Sankranti: ಸುಲಭ ಎಳ್ಳಿನ ಹಲ್ವಾ..! ಈ ಪಾಕವಿಧಾನ ಟ್ರೈ ಮಾಡಿ

Makar Sankranti 2024: ಮಕರ ಸಂಕ್ರಾಂತಿಯಂದು ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಖಾದ್ಯಗಳನ್ನು ತಯಾರಿಸುವ ಸಂಪ್ರದಾಯವಿದೆ. ಆದ್ದರಿಂದ ನೀವು ಸಹ ಹೊಸದನ್ನು ಪ್ರಯತ್ನಿಸಲು ಬಯಸಿದರೆ, ಎಳ್ಳು ಮತ್ತು ಬೆಲ್ಲದೊಂದಿಗೆ ತಯಾರಿಸಿದ ಟೇಸ್ಟಿ ಹಲ್ಲಾವನ್ನು  ಟ್ರೈ ಮಾಡಬಹುದು. ಅದನ್ನು ಮಾಡಲು ಈ ಪಾಕವಿಧಾನವನ್ನು ಇಲ್ಲಿ ತಿಳಿಯಿರಿ..

Written by - Zee Kannada News Desk | Last Updated : Jan 14, 2024, 11:13 AM IST
  • ಮಕರ ಸಂಕ್ರಾಂತಿಯಂದು ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಖಾದ್ಯಗಳನ್ನು ತಯಾರಿಸುವ ಸಂಪ್ರದಾಯವಿದೆ.
  • ಆರೋಗ್ಯಕರವಾದ ಎಳ್ಳು ಮತ್ತು ಬೆಲ್ಲ ಹಲ್ವಾವನ್ನು ಟ್ರೈ ಮಾಡಿ.
  • ಕೇವಲ 15-20 ನಿಮಿಷಗಳು ಸಾಕು ಅಷ್ಟರಲ್ಲೇ ಟೇಸ್ಟಿ ಹಲ್ವಾ ತಯಾರಾಗುತ್ತದೆ.
Makar Sankranti: ಸುಲಭ ಎಳ್ಳಿನ ಹಲ್ವಾ..! ಈ ಪಾಕವಿಧಾನ ಟ್ರೈ ಮಾಡಿ title=

Makar Sankranti Recipe: ಮಕರ ಸಂಕ್ರಾಂತಿಯಂದು ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಭಕ್ಷ್ಯಗಳನ್ನು ತಯಾರಿಸುವ ಸಂಪ್ರದಾಯ ಹಿಂದಿನಿಂದಲೂ ಚಾಲ್ತಿಯಲ್ಲಿದೆ.  ಆದರೆ  ನಿಮಗೆ ಎಳ್ಳುವಿನಲ್ಲಿ ಲಡ್ಡು ಮಾಡಲು ಬರದಿದ್ದರೆ, ನಾವು ಹೇಳುವ ಆರೋಗ್ಯಕರವಾದ ಈ ಹಲ್ವಾವನ್ನು ಟ್ರೈ ಮಾಡಿ ನೋಡಿ. ಎಳ್ಳಿನಿಂದ ತಯಾರಿಸಿದ ಈ ಲಡ್ಡುಗಳು ಸಂಪ್ರದಾಯದಲ್ಲಿ ಮಾತ್ರವಲ್ಲದೆ ರುಚಿಯಲ್ಲೂ ಅದ್ಭುತವಾಗಿರುತ್ತದೆ. ಎಳ್ಳು ಲಡ್ಡುಗಳನ್ನು ಮಾಡಲು ಸಮಯವಿಲ್ಲದವರಿಗೂ ಈ ಪಾಕವಿಧಾನ  ಸಹಾಯವಾಗಲಿದೆ. ಈ ಪಾಕವನ್ನು ತಯಾರಿಸಲು ಕೇವಲ 15-20 ನಿಮಿಷಗಳು ಸಾಕು ಅಷ್ಟರಲ್ಲೇ ಟೇಸ್ಟಿ ಹಲ್ವಾ ತಯಾರಾಗುತ್ತದೆ. ಇದನ್ನು ಮಾಡುವ ಈ ಕೆಳಗಿನ ವಿಧಾನಗಳನ್ನು ಬಳಸಿಕೊಳ್ಳಿ..

 ಹಲ್ವಾ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:

* ಒಂದು ನಾಲ್ಕನೇ ಕಪ್ ದೇಸಿ ತುಪ್ಪ
* ಅರ್ಧ ಕಪ್ ಎಳ್ಳು

ಇದನ್ನೂ ಓದಿ: Makar Sankranti 2024: ಪ್ರತಿ ರಾಜ್ಯದಲ್ಲಿ ವಿಭಿನ್ನವಾಗಿ ಮಕರ ಸಂಕ್ರಾಂತಿ ಆಚರಣೆ

* ಒಂದು ನಾಲ್ಕನೇ ಕಪ್ ರವೆ
* ಅರ್ಧ ಚಮಚ ಏಲಕ್ಕಿ ಪುಡಿ
* ಅರ್ಧ ಕಪ್ ಬೆಲ್ಲ

 ಮಾಡುವ ವಿಧಾನ:

- ಮೊದಲನೆಯದಾಗಿ ಎಳ್ಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.
- ನಂತರ ನೀರನ್ನು ಫಿಲ್ಟರ್ ಮಾಡಿ ಅಥವಾ ತೆಗೆಯಿರಿ.

ಇದನ್ನೂ ಓದಿ:  ಮಕರ ಸಂಕ್ರಾಂತಿ ದಿನ ಈ ಕೆಲಸ ಮಾಡಿದರೆ ದೌರ್ಭಾಗ್ಯ ಸೌಭಾಗ್ಯವಾಗಿ ಬದಲಾಗುವುದಂತೆ !

- ಎಳ್ಳನ್ನು ರಾತ್ರಿಯಿಡೀ ನೆನೆಸದಿದ್ದರೆ, ಬಿಸಿ ನೀರಿನಲ್ಲಿ ಒಂದು ಗಂಟೆ ನೆನೆಸಿ ಮುಚ್ಚಿ. ಚೆನ್ನಾಗಿ ಊದಿಕೊಳ್ಳುತ್ತದೆ.
- ಈಗ ನೀರನ್ನು ಫಿಲ್ಟರ್ ಮಾಡಿ ಮತ್ತು ನೆನೆಸಿದ ಎಳ್ಳನ್ನು ಮಿಕ್ಸರ್ ಜಾರ್ನಲ್ಲಿ ರುಬ್ಬಿಕೊಳ್ಳಿ.
- ಇದನ್ನು ನೀರಿಲ್ಲದೆ ರುಬ್ಬಿಕೊಳ್ಳುವುದನ್ನು ನೆನೆಪಿನಲ್ಲಿಡಿ.
- ದಪ್ಪ ತಳವಿರುವ ಪ್ಯಾನ್ ತೆಗೆದುಕೊಳ್ಳಿ.
- ದೇಸಿ ತುಪ್ಪವನ್ನು ಬಿಸಿ ಮಾಡಿದ ನಂತರ ರವೆಯನ್ನು ಸಣ್ಣ ಉರಿಯಲ್ಲಿ ಗೋಲ್ಡನ್ ಆಗುವವರೆಗೆ ಹುರಿತುಕೊಳ್ಳಿ.
- ರವೆ ಹುರಿದ ನಂತರ, ಅದರೊಂದಿಗೆ ರುಬ್ಬಿದ ಎಳ್ಳು ಸೇರಿಸಿ.
- ಈಗ ಎಳ್ಳನ್ನು ಕಡಿಮೆ ಉರಿಯಲ್ಲಿ ನಿರಂತರವಾಗಿ ಹುರಿಯಿರಿ. ಎಳ್ಳು ಗೋಲ್ಡನ್ ಆಗುವವರೆಗೆ ಪ್ರೈ ಮಾಡಿ.

ಇದನ್ನೂ ಓದಿ: ಮಕರ ಸಂಕ್ರಾಂತಿಯಂದು ಈ ವಿಶೇಷ ವಸ್ತುವನ್ನು ಮನೆಯ ಈ ದಿಕ್ಕಿನಲ್ಲಿಡಿ: ನೀವು ಮಿಲಿಯನೇರ್ ಆಗುತ್ತಿರಿ.

- ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಎಳ್ಳನ್ನು ಹುರಿದುಕೊಳ್ಳಿ ನಂತರ, ಅರ್ಧ ಕಪ್ ನೀರು ಸೇರಿಸಿ.
- ಸಣ್ಣ ತುಂಡುಗಳಾಗಿ ಕತ್ತರಿಸಿದ ಬೆಲ್ಲವನ್ನು ಸಹ ಸೇರಿಸಿ.
- ಇದರಿಂದ ಬೆಲ್ಲ ಸುಲಭವಾಗಿ ಕರಗುತ್ತದೆ.
- ಚೆನ್ನಾಗಿ ಬೆರೆಸಿ ಅದನ್ನು ಬೇಯಿಸಿ.
- ನೀರು ಆರಿ ಬೆಲ್ಲ ಪೂರ್ತಿ ಕಲಸಿದ ಮೇಲೆ ಹಲ್ವಾಗೆ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.
- ಗ್ಯಾಸ್  ಆಫ್ ಮಾಡಿ ಮತ್ತು ಸಣ್ಣದಾಗಿ ಕೊಚ್ಚಿದ ಒಣ ಹಣ್ಣುಗಳನ್ನು ಸೇರಿಸಿ. ಈಹ ಬಿಸಿ ಬಿಸಿ ಹಲ್ವಾ ರೆಡಿ ಇದನ್ನು ನೀವು ನಿಮ್ಮ ಕುಟುಂಬದವರೊಂದಿಗೆ ಸವಿಯಿರಿ.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News