Sunday Jyotish Tips: ಭಾನುವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ, ಏನೆಂದು ತಿಳಿಯಿರಿ

ಭಾನುವಾರವನ್ನು ಸೂರ್ಯ ದೇವರಿಗೆ ಸಮರ್ಪಿಸಲಾಗಿದೆ. ಈ ದಿನ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ ಮಂತ್ರಗಳನ್ನು ಪಠಿಸುವುದರಿಂದ ಸೂರ್ಯದೇವನ ಅನುಗ್ರಹ ದೊರೆಯುತ್ತದೆ. ಆದರೆ ಭಾನುವಾರದಂದು ಕೆಲವು ಕಾರ್ಯಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು.

Written by - Puttaraj K Alur | Last Updated : Jul 2, 2022, 01:50 PM IST
  • ಭಾನುವಾರ ಸೂರ್ಯದೇವರನ್ನು ಪೂಜಿಸುವುದು & ಮಂತ್ರ ಪಠಿಸುವುದರಿಂದ ವ್ಯಕ್ತಿಯ ಅದೃಷ್ಟ ಹೆಚ್ಚಾಗುತ್ತದೆ
  • ಈ ದಿನ ಸೂರ್ಯ ಮಂತ್ರವನ್ನು 108 ಬಾರಿ ಪಠಿಸುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ
  • ಭಾನುವಾರದಂದು ಮಾಂಸಾಹಾರ ಮತ್ತು ಮದ್ಯ ಸೇವನೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ
Sunday Jyotish Tips: ಭಾನುವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ, ಏನೆಂದು ತಿಳಿಯಿರಿ title=
ಭಾನುವಾರ ನೀವು ಯಾವ ಕೆಲಸ ಮಾಡಬಾರದು..?

ನವದೆಹಲಿ: ಹಿಂದೂ ಧರ್ಮದಲ್ಲಿ ಪ್ರತಿ ದಿನವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿ ದಿನವನ್ನು ಒಂದಲ್ಲ ಒಂದು ದೇವತೆಗೆ ಸಮರ್ಪಿಸಲಾಗಿದೆ. ಭಾನುವಾರವನ್ನು ಸೂರ್ಯ ದೇವನಿಗೆ ಸಮರ್ಪಿಸಲಾಗಿದೆ. ಈ ದಿನ ಕೆಲವು ಆಚರಣೆಗಳ ಮೂಲಕ ಸೂರ್ಯದೇವನ ಆಶೀರ್ವಾದ ಪಡೆಯಲಾಗುತ್ತದೆ. ಅಲ್ಲದೆ ವ್ಯಕ್ತಿಯ ಜಾತಕದಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ.

ಭಾನುವಾರದಂದು ಸೂರ್ಯ ದೇವರನ್ನು ಪೂಜಿಸುವುದು, ನೀರನ್ನು ಅರ್ಪಿಸುವುದು ಮತ್ತು ಮಂತ್ರಗಳನ್ನು ಪಠಿಸುವುದರಿಂದ ವ್ಯಕ್ತಿಯ ಅದೃಷ್ಟವು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಯಾವುದೇ ವ್ಯಕ್ತಿ ಈ ಕೆಲಸಗಳನ್ನು ಮಾಡುವುದರಿಂದ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯುತ್ತಾನಂತೆ. ಈ ದಿನ ಸೂರ್ಯ ಮಂತ್ರವನ್ನು 108 ಬಾರಿ ಪಠಿಸುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಆದರೆ, ಭಾನುವಾರದಂದು ಯಾವ ವಿಷಯಗಳನ್ನು ಮಾಡಬಾರದು ಎಂದು ನಿಮಗೆ ತಿಳಿದಿದೆಯೇ? ಹಾಗಾದರೆ ಭಾನುವಾರದ ಯಾವ ಕೆಲಸಗಳು ಸೂರ್ಯನನ್ನು ದುರ್ಬಲಗೊಳಿಸಿ ಅಶುಭ ಫಲಿತಾಂಶ ನೀಡುತ್ತವೆ ಎಂಬುದರ ಬಗ್ಗೆ ತಿಳಿಯಿರಿ.  ಮಾಂಸ ಮತ್ತು ಮದ್ಯವನ್ನು ಸೇವಿಸಬೇಡಿ.

ಇದನ್ನೂ ಓದಿ: Planet Retrograde: 11 ದಿನಗಳ ನಂತರ 6 ತಿಂಗಳ ಅವಧಿಗೆ 5 ರಾಶಿಗಳಿಗೆ ಈ ಗ್ರಹದ ಪ್ರಕೋಪದಿಂದ ಮುಕ್ತಿ ಸಿಗಲಿದೆ

ಹಿಂದೂ ಧರ್ಮದಲ್ಲಿ ಪ್ರತಿದಿನ ಕೆಲವು ನಂಬಿಕೆಗಳನ್ನು ಪಾಲಿಸಿಕೊಂಡು ಬರಲಾಗಿದೆ. ಇದರಲ್ಲಿ ಭಾನುವಾರದಂದು ಮಾಂಸ ಮತ್ತು ಮದ್ಯ ಸೇವಿಸಬಾರದು ಎಂದು ಹೇಳಲಾಗಿದೆ. ಭಾನುವಾರದಂದು ಮಾಂಸಾಹಾರ ಸೇವನೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಸೂರ್ಯದೇವನು ಕೋಪಗೊಂಡು ವ್ಯಕ್ತಿಗೆ ಹಣಕಾಸಿನ ತೊಂದರೆ ನೀಡುತ್ತಾನೆಂದು ಹೇಳಲಾಗಿದೆ.

ಸೂರ್ಯಾಸ್ತದ ನಂತರ ಉಪ್ಪು ತಿನ್ನಿರಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಭಾನುವಾರದಂದು ಉಪ್ಪನ್ನು ಸೇವಿಸಬಾರದು. ಈ ದಿನ ಉಪ್ಪು ಸೂರ್ಯಾಸ್ತದ ನಂತರ ಮಾತ್ರ ಸೇವಿಸಬೇಕು ಎಂಬ ನಂಬಿಕೆ ಇದೆ. ಈ ರೀತಿ ಮಾಡುವುದರಿಂದ ವ್ಯಕ್ತಿಯ ಜಾತಕದಲ್ಲಿ ಸೂರ್ಯನು ದುರ್ಬಲನಾಗುತ್ತಾನೆ ಮತ್ತು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಾನೆ.

ಇದನ್ನೂ ಓದಿ: Rules for Tulsi Plants: ತುಳಸಿ ಗಿಡದ ಈ ನಿಯಮ ಪಾಲಿಸಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ

ಈ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ

ಈ ದಿನ ತಾಮ್ರದಿಂದ ಮಾಡಿದ ಲೋಹಗಳನ್ನು ಖರೀದಿಸುವುದನ್ನು ಸಹ ತಪ್ಪಿಸಬೇಕು. ಅಲ್ಲದೆ ನೀಲಿ, ಕಪ್ಪು, ಹಸಿರು ಬಟ್ಟೆಗಳನ್ನು ಧರಿಸಬಾರದು ಎಂದು ಹೇಳಲಾಗಿದೆ. ಸಾಧ್ಯವಾದರೆ ಈ ದಿನದಂದು ಶೂಗಳನ್ನು ಸಹ ಧರಿಸಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News