ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ "ಯುಗಾದಿ"

ಚೈತ್ರ ಮಾಸದ ಮೊದಲ ದಿನವನ್ನು ಭಾರತದ ಹಲವೆಡೆ ಹೊಸ ವರ್ಷ "ಯುಗಾದಿ" ಎಂದು ಆಚರಿಸಲಾಗುತ್ತದೆ.

Last Updated : Apr 6, 2019, 03:34 PM IST
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ "ಯುಗಾದಿ" title=
Pic Courtesy: DNA

ಯುಗ+ಆದಿ= ಯುಗಾದಿ ಎಂದರೆ ಹೊಸ ಯುಗದ ಆರಂಭ ಎಂದರ್ಥ. ಚೈತ್ರ ಮಾಸದ ಮೊದಲ ದಿನವನ್ನು ಭಾರತದ ಹಲವೆಡೆ ಹೊಸ ವರ್ಷ "ಯುಗಾದಿ" ಎಂದು ಆಚರಿಸಲಾಗುತ್ತದೆ. 

ಚೈತ್ರ ಮಾಸದ ಮೊದಲ ದಿನವನ್ನು ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಈ ಹಬ್ಬವನ್ನು ಯುಗಾದಿ ಎಂದು ಆಚರಿಸಿದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ವ ಎಂದು ಆಚರಿಸುತ್ತಾರೆ. 'ಬೇವು-ಬೆಲ್ಲ' ಸವಿಯುವುದು ಈ ಹಬ್ಬದ ವಿಶೇಷ. 

ನಮ್ಮ ಹಿರಿಯರು ಯಾವುದೇ ಸಂಪ್ರದಾಯವನ್ನು ಪಾಲಿಸುತ್ತಿದ್ದರೂ ಅದರ ಹಿಂದೆ ಒಂದು ಉದ್ದೇಶ ಇದ್ದೇ ಇರುತ್ತಿತ್ತು. ಮನೆಯ ಮುಂದೆ ರಂಗೋಲಿ ಬಿಡಿಸಿ, ಹೂ-ಹಣತೆಯಿಂದ ಸಿಂಗರಿಸಿ, ಬಾಗಿಲಿಗೆ ತಳಿರು ತೋರಣಗಳನ್ನು ಕಟ್ಟಿ ಹಬ್ಬವನ್ನು ಆಚರಿಸಲಾಗುತ್ತದೆ. ಮನೆಯೊಳಗೆ ಸೊಳ್ಳೆಗಳು ಮತ್ತು ನೊಣಗಳಂತಹ ಕೀಟಗಳು ಪ್ರವೇಶಿಸಬಾರದೆಂದು ಬಾಗಿಲಿಗೆ ಬೇವು-ಮಾವಿನ ತೋರಣ ಕಟ್ಟುವ ಸಂಪ್ರದಾಯವನ್ನು ನಮ್ಮ ಹಿರಿಯರು ಪಾಲಿಸುತ್ತಿದ್ದರು. ಕಾರಣ ಎಲೆಗಳು ಸೋಂಕುನಿವಾರಕಗಳಾಗಿ ಕಾರ್ಯನಿರ್ವಹಿಸುತ್ತವೆ. 

ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬುದು ಇದರರ್ಥ.

ಚೈತ್ರ ಮಾಸದಲ್ಲಿ ಅಂದರೆ ಸುಮಾರು ಏಪ್ರಿಲ್ ತಿಂಗಳ ಅವಧಿಯಲ್ಲಿ ಬೇವು ಚಿಗುರೊಡೆದಿರುತ್ತದೆ. ಬೇವಿನ ಚುಗುರೆಲೆ ಬ್ಯಾಕ್ಟೀರಿಯಾ ನಿವಾರಕ, ಉರಿಯೂತ ನಿವಾರಕ ಹಾಗೂ ಶಿಲೀಂಧ್ರನಿವಾರಕ ಗುಣಗಳನ್ನು ಹೊಂದಿವೆ. ಬೇವಿನ ಚಿಗುರೆಲೆಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ದೃಷ್ಟಿಯಿಂದ ಹಿರಿಯರು ಈ ಬೇವು ಬೆಲ್ಲ ಸವಿಯುವ ಸಂಪ್ರದಾಯ ರೂಢಿಮಾಡಿದ್ದಾರೆ ಎನ್ನಲಾಗುತ್ತದೆ.

ಸಾಮಾನ್ಯವಾಗಿ ಯುಗಾದಿ ದಿನದನ್ನು ಇಡ್ಲಿ, ಬೇಳೆ ಹೂರಣ, ಹೋಳಿಗೆ ಮಾಡಿ ಸವಿಯುವುದು ಈ ಹಬ್ಬದ ವಿಶಿಷ್ಟ.

ಯುಗಾದಿ ಹಬ್ಬ ಎಂದೊಡನೆ ಪ್ರತಿಯೊಬ್ಬರ ಮನಸ್ಸಲ್ಲೂ ಹಚ್ಚ ಹಸಿರಾಗಿ ಉಳಿದಿರುವ ವರಕವಿ ದ.ರಾ. ಬೇಂದ್ರೆಯವರ ಕವಿತೆ ನೆನಪಾಗುತ್ತದೆ...

"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ"

Trending News