Ramya Cine Journey: ರಮ್ಯಾ ಸಿನಿ ಪಯಣಕ್ಕೆ 20 ವರ್ಷ, ಏಳು ಬೀಳಿನ ನಡುವೆಯೂ ಇವರೇ ʻಸ್ಯಾಂಡಲ್​ವುಡ್ ಕ್ವೀನ್ʼ

Ramya Cine Journey: ನಟಿ ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷ ಕಳೆದಿವೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಎರಡನೇ ಸಿನಿಮಾ ಅಭಿ ಮೂಲಕ ಮೋಹಕ ತಾರೆ ರಮ್ಯಾ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.   

Written by - Chetana Devarmani | Last Updated : Apr 25, 2023, 05:05 PM IST
  • ನಟಿ ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷ
  • ರಮ್ಯಾ ಸಿನಿ ಪಯಣಕ್ಕೆ 2 ದಶಕದ ಸಂಭ್ರಮ
  • ಏಳು ಬೀಳಿನ ನಡುವೆಯೂ ಇವರೇ ʻಸ್ಯಾಂಡಲ್​ವುಡ್ ಕ್ವೀನ್ʼ
Ramya Cine Journey: ರಮ್ಯಾ ಸಿನಿ ಪಯಣಕ್ಕೆ 20 ವರ್ಷ, ಏಳು ಬೀಳಿನ ನಡುವೆಯೂ ಇವರೇ ʻಸ್ಯಾಂಡಲ್​ವುಡ್ ಕ್ವೀನ್ʼ title=
ನಟಿ ರಮ್ಯಾ

Ramya Cine Journey: ನಟಿ ರಮ್ಯಾ ಸಿನಿ ಜರ್ನಿಗೆ ಇಪ್ಪತ್ತು ವರ್ಷ. 2 ದಶಕ ಕಳೆದರೂ ಈಗಲೂ ಸಕ್ರಿಯವಾಗಿ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ನಟಿ ರಮ್ಯಾ, ಸದಾವಕಾಶ ಕೊಟ್ಟ ದೊಡ್ಮನೆ ಹಾಗೂ ಮೊದಲ ನಾಯಕರಾದ ಪುನೀತ್ ಅವರನ್ನು ನೆನದು, ಕೃತಜ್ಞತೆ ಸಲ್ಲಿಸಿದ್ದಾರೆ. 

20 ವರ್ಷದ ಹಿಂದೆ ಪುನೀತ್‌ ರಾಜ್‌ಕುಮಾರ್‌ ಜೊತೆ ನಾಯಕಿಯಾಗಿ ಅಭಿ ಸಿನಿಮಾ ಮೂಲಕ ರಮ್ಯಾ ಸಿನಿ ಪಯಣ ಆರಂಭಿಸಿದರು. ರಾಜ್‌ಕುಮಾರ್ ಕುಟುಂಬದ ಪೂರ್ಣಿಮಾ ಎಂಟರ್ಪ್ರೈಸಸ್ ಮೂಲಕ ಈ ಸಿನಿಮಾವನ್ನು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದರು. ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾದಲ್ಲಿಯೇ ರಮ್ಯಾ  ಎಲ್ಲರ ಗಮನ ಸೆಳೆದಿದ್ದರು. ಆ ಬಳಿಕ ಒಂದೊಂದೇ ಮೆಟ್ಟಿಲೇರುತ್ತ ಚಂದನವನದ ಟಾಪ್ ನಟಿಯಾಗಿ ಗುರುತಿಸಿಕೊಂಡರು. ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಈವೆರೆಗೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವುದು ಗಮನಾರ್ಹ. ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದಾರೆ.

ಇದನ್ನೂ ಓದಿ: ಅಭಿ ಸಿನಿಮಾಗೆ 20 ವರ್ಷ! ಅಪ್ಪು ನೆನೆದು ರಮ್ಯಾ ಭಾವುಕ ಪೋಸ್ಟ್

 

 

ಮೋಹಕತಾರೆಯಾಗಿ ಚಂದನವನದಲ್ಲಿ ಮಿಂಚುತ್ತಿದ್ದ ರಮ್ಯಾ, ಹಠಾತ್ತನೇ ರಾಜಕೀಯ ಪ್ರವೇಶಿಸಿ ಚಿತ್ರರಂಗದಿಂದ ದೂರವಾದರು. ಚುನಾವಣೆಯಲ್ಲಿ ಗೆದ್ದು ಸಂಸದೆ ಕೂಡ ಆದರು. ಆ ಬಳಿಕ ಎಲ್ಲರಿಂದ, ಎಲ್ಲದರಿಂದ ದೂರವಾಗಿದ್ದರು. 

ಇದೀಗ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ತಮ್ಮ ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯ ಮೂಲಕ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಲ್ಲದೇ, ಡಾಲಿ ಧನಂಜಯ್ ಮತ್ತು ಶಿವರಾಜ್ ಕುಮಾರ್ ನಟನೆಯ ಉತ್ತರಕಾಂಡ ಸಿನಿಮಾದ ಮೂಲಕ ಸಿಲ್ವರ್‌ ಸ್ಕ್ರೀನ್‌ ಮೇಲೆ ಮತ್ತೆ ಮಿಂಚಲು ರಮ್ಯಾ ಸಜ್ಜಾಗಿದ್ದಾರೆ.

ಮಾಡೆಲ್‌ ಆಗಿ ಹೆಜ್ಜೆ ಹಾಕಿ.. ಅಭಿ ಮೂಲಕ ಸಿನಿ ಪಯಣ ಆರಂಭಿಸಿದ ರಮ್ಯಾ, ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡವರು. ಆದರೂ ಕುಗ್ಗದೇ ಇಂದಿಗೂ ʻಸ್ಯಾಂಡಲ್‌ವುಡ್‌ ಕ್ವೀನ್‌ʼ ಪಟ್ಟವನ್ನು ಅಲಂಕರಿಸಿದ್ದಾರೆ. 

ಇದನ್ನೂ ಓದಿ: ಈ ದೇವರ ಟ್ಯಾಟೂ ಹಾಕಿಸಿದ ಶ್ರುತಿ ಹಾಸನ್, ಇದಕ್ಕಿದೆಯಂತೆ ಒಂದು ಹಿನ್ನೆಲೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News